Advertisement

ಜೆಡಿಎಸ್ ಗೆ ರಸ್ತೆಯಲ್ಲಿ ಹೋಗೋ ನಾಯಿ ಕೂಡ ಹೋಗಲ್ಲ: ಈಶ್ವರಪ್ಪ ವ್ಯಂಗ್ಯ

12:58 PM Nov 30, 2022 | Team Udayavani |

ಶಿವಮೊಗ್ಗ: ರಮೇಶ್ ಜಾರಕಿಹೊಳಿಯವರು ಈ ಸರ್ಕಾರ ತಂದವರು. ಅವರು ಯಾಕೆ ಬಿಜೆಪಿ ಬಿಟ್ಟು ಹೋಗ್ತಾರೆ? ಬಿಜೆಪಿ ಬಿಟ್ಟು ಏನು ಇಲ್ಲದಿರುವ ಜೆಡಿಎಸ್ ಗೆ ಯಾಕೆ ಹೋಗುತ್ತಾರೆ? ಇಬ್ರಾಹಿಂಗೆ ಬೇರೆ ಉದ್ಯೋಗವಿಲ್ಲ. ರಸ್ತೆಯಲ್ಲಿ ಹೋಗೋ ನಾಯಿ ಕೂಡ ಹೋಗಲ್ಲ ಎಮದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

Advertisement

ಜಾರಕಿಹೊಳಿ ಜೆಡಿಎಸ್ ಸೇರುತ್ತಾರೆಂಬ ಜೆಡಿಎಸ್ ರಾಜ್ಯಾಧ್ಯಕ್ಷ ಇಬ್ರಾಹಿಂ ಹೇಳಿಕೆಗೆ ತಿರುಗೇಟು ನೀಡಿದ ಅವರು, ಯಾವ ಕಾರಣಕ್ಕೂ ಬಿಜೆಪಿ ಬಿಟ್ಟು ಹೋಗುವ ಪ್ರಶ್ನೆ ಉದ್ಭವವಾಗಲ್ಲ. ಇಬ್ರಾಹಿಂ ತಾನಂತೂ ಹೋಗಾಗಿದೆ ಹೀಗಾಗಿ ಏನಾರು ಮಾಡಬೇಕೆಂಬ ಕಾರಣಕ್ಕೆ ಹೇಳಿಕೆ ಕೊಡುತ್ತಾರೆ. ಇದಕ್ಕಾಗಿ ಅವರು ಬರುತ್ತಾರೆ, ಇವರು ಬರುತ್ತಾರೆ ಎನ್ನುತ್ತಿದ್ದಾರೆ. ಎಚ್.ಡಿ. ದೇವೆಗೌಡರು, ಶಿವಕುಮಾರ್ ಯಾರೋ ಹೇಳಿದ್ದರೆ ನಾನು ಏನೂ ಹೇಳುತ್ತಿರಲಿಲ್ಲ. ಇಬ್ರಾಹಿಂ ಅರ್ಥವಿಲ್ಲದ ಮಾತನಾಡ್ತಿದ್ದಾರೆ. ಅವರಿಗೆ ಉತ್ತರ ಕೊಡ್ತಾ ಇದ್ದೇನೆ, ಖಂಡನೆ ಮಾಡುತ್ತೇನೆ ಎಂದರು.

ರೌಡಿ ರಾಜಕೀಯ ವಿಚಾರವಾಗಿ ಕಾಂಗ್ರೆಸ್ ಟೀಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಸುಸಂಸ್ಕೃತ ಪಕ್ಷವೋ, ರೌಡಿಗಳ ಪಕ್ಷವೋ ಎನ್ನುವ ಬಗ್ಗೆ ರಾಜ್ಯ ಹಾಗೂ ದೇಶದ ಜನರು ತೀರ್ಮಾನ ಮಾಡಿದ್ದಾರೆ. ಬಿಜೆಪಿ ಸುಸಂಸ್ಕೃತ ಪಕ್ಷ ಎಂದು ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ಕೊಟ್ಟಿದ್ದಾರೆ. ಜೊತೆಗೆ ಅನೇಕ ರಾಜ್ಯಗಳಲ್ಲೂ ಕೂಡ ಅಧಿಕಾರವನ್ನು ನೀಡಿದ್ದಾರೆ. ರೌಡಿಗಳ ಪಕ್ಷ ಎಂದು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ. ಉದಾಹರಣೆಗೆ ರಾಜ್ಯದ ಕೆಪಿಸಿಸಿ ಅಧ್ಯಕ್ಷ ಯಾರು? ಮೊನ್ನೆ ತನಕ ತಿಹಾರ್ ಜೈಲಿನಲ್ಲಿದ್ದು ಜಾಮೀನಿನ ಮೇಲೆ ಹೊರಗೆ ಬಂದವರು. ಯಾವ ನಿಮಿಷಕ್ಕೆ ಮತ್ತೆ ಜೈಲಿಗೆ ಹೋಗುತ್ತಾರೋ ಗೊತ್ತಿಲ್ಲ. ಜೈಲಿಗೆ ಹೋಗಿ ಬಂದ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ಇದೆ. ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಸ್ಥಿತಿ ಕೂಡ ಅದೇ. ಬಾರ್ ನಲ್ಲಿ ಕುಡಿದು ಹೊಡೆದಾಡಿ ಪರಪ್ಪನ ಅಗ್ರಹಾರಕ್ಕೆ ಹೋಗಿ ಬಂದಿದ್ದಾನೆ. ಆತನ ಅಧ್ಯಕ್ಷತೆಯಲ್ಲಿ ಯುವ ಕಾಂಗ್ರೆಸ್ ಇದೆ. ಹೀಗಾಗಿ ಯಾವುದು ರೌಡಿಗಳ ಪಕ್ಷ ಎಂದು ರಾಜ್ಯದ ಜನ ತೀರ್ಮಾನ ಮಾಡುತ್ತಾರೆ ಎಂದರು.

ಇದನ್ನೂ ಓದಿ:ಸ್ನೇಹಿತರಿಗೆ ಚಿಕನ್‌ ಹಾಕದ್ದಕ್ಕೆ ರಾದ್ಧಾಂತ: ಮದುವೆಯನ್ನೇ ರದ್ದು ಮಾಡಿದ ವರ..!

ಮಹಾರಾಷ್ಟ್ರ ಗಡಿ ವಿವಾದ ವಿಚಾರವಾಗಿ ಮಾತನಾಡಿದ ಈಶ್ವರಪ್ಪ, ಯಾರೇ ಸಚಿವರು ಬರಲಿ, ಮಹಾರಾಷ್ಟ್ರ ಮುಖ್ಯಮಂತ್ರಿಯೇ ಬರಲಿ. ಕರ್ನಾಟಕದ ಒಂದು ಇಂಚು ಭೂಮಿ ಸಹ ಮಹಾರಾಷ್ಟ್ರಕ್ಕೆ ಹೋಗಲ್ಲ. ಮಹಾಜನ್ ವರದಿ ಕೊಟ್ಟು, ಅದರ ಮೂಲಕ ಸಮಸ್ಯೆ ಪರಿಹಾರ ಆಗಿದೆ. ಆದರೂ, ಆಗಾಗ ಗಡಿ ವಿವಾದವನ್ನು ಅಲ್ಲಿಯವರು ಎಬ್ಬಿಸುತ್ತಾರೆ. ಪಕ್ಷಾತೀತವಾಗಿ ಎಲ್ಲರೂ ಒಟ್ಟಾಗಿದ್ದೇವೆ. ಒಂದಿಂಚು ಭೂಮಿ ಕೂಡ ಹೋಗಲ್ಲ ಎಂದರು.

Advertisement

ನಮ್ಮ ಆರೂವರೆ ಕೋಟಿ ಕನ್ನಡಿಗರು ಒಗ್ಗಟ್ಟಾಗಿದ್ದಾರೆ. ಅಲ್ಲಿ ಕುಡಿಯುವುದಕ್ಕೆ ನೀರು ಸಹ ಇಲ್ಲ. ಗಡಿ ಭಾಗದ ಜನ ಕರ್ನಾಟಕಕ್ಕೆ ಸೇರಲು ಬಯಸುತ್ತಿದ್ದಾರೆ. ರಾಜ್ಯದ ಒಂದಿಂಚು ಭೂಮಿಯನ್ನು ಹೊರಗೆ ಕಳುಹಿಸುವುದಿಲ್ಲ ಎಂದು ಈಶ್ವರಪ್ಪ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next