Advertisement

ಸಂತೋಷ್‌ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಮುಕ್ತನಾಗುವ ವಿಶ್ವಾಸವಿತ್ತು: ಈಶ್ವರಪ್ಪ

10:37 PM Jul 21, 2022 | Suhan S |

ಶಿವಮೊಗ್ಗ: ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಹೆಸರು ಬಂದಾಗ  ಮೊದಲು ತುಂಬಾ ಬೇಸರವಾಗಿತ್ತು. ಪಕ್ಷ ಹಾಗೂ ಸರಕಾರಕ್ಕೆ  ನನ್ನಿಂದ ಮುಜುಗರ ಆಯಿತು, ಚಿಕ್ಕ ವಯಸ್ಸಿನಲ್ಲಿ ಆತನ ಹೆಂಡತಿ ವಿಧವೆಯಾದಳು ಎಂಬ ನೋವಿತ್ತು. ಆದರೂ ಆರೋಪಮುಕ್ತನಾಗುವ ಖಚಿತ ವಿಶ್ವಾಸವಿತ್ತು ಎಂದು ಶಾಸಕ ಕೆ.ಎಸ್‌. ಈಶ್ವರಪ್ಪ ಹೇಳಿದರು.

Advertisement

ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬಿಜೆಪಿ ನಗರ ಘಟಕದಿಂದ ಹಮ್ಮಿಕೊಂಡಿದ್ದ ಅಭಿನಂದನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾನು ತಪ್ಪು ಮಾಡಿಲ್ಲ. ನಮ್ಮ ಮನೆ ದೇವತೆ ಚೌಡೇಶ್ವರಿ ನನ್ನನ್ನು ಆರೋಪಮುಕ್ತನನ್ನಾಗಿ ಮಾಡುತ್ತಾಳೆ ಎಂದು ಹಿಂದೆಯೇ ಹೇಳಿದ್ದೆ ಎಂದರು.

ಹಿರಿಯ ಮುಖಂಡ ಭಾನುಪ್ರಕಾಶ್‌, ಶಾಸಕರಾದ ಹರತಾಳು ಹಾಲಪ್ಪ, ಡಿ.ಎಸ್‌. ಅರುಣ್‌ ಮುಂತಾದವರಿದ್ದರು.

ಈಶ್ವರಪ್ಪ ಸಂಪುಟ ಸೇರ್ಪಡೆ  ಹಿರಿಯರಿಗೆ ಬಿಟ್ಟಿದ್ದು: ಆರಗ:

ಸಂತೋಷ್‌ ಪಾಟೀಲ್‌  ಆತ್ಮಹತ್ಯೆಗೆ ಕಾರಣರಾದ ಆರೋಪದಿಂದ ಮುಕ್ತರಾಗಿ ರುವ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ  ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಪಕ್ಷದ ಹಿರಿಯ ನಾಯಕರಿಗೆ ಬಿಟ್ಟ ವಿಷಯ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು  ರಿಪ್ಪನ್‌ಪೇಟೆಯಲ್ಲಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next