Advertisement

ಮೋದಿ ಭಾಷಣ ಅನುವಾದಿಸಿದ ಉಜಿರೆಯ ಕೆ. ಪ್ರತಾಪಸಿಂಹ ನಾಯಕ್‌

01:31 AM Mar 13, 2023 | Team Udayavani |

ಬೆಳ್ತಂಗಡಿ : ಹಿಂದಿ ಭಾಷಣವನ್ನು ಕನ್ನಡಕ್ಕೆ ಭಾಷಾಂತರಿಸಿ ಪ್ರಧಾನಿ ಮೋದಿಯವರಿಂದ ಭೇಷ್‌ ಎನಿಸಿಕೊಂಡಿದ್ದಾರೆ ವಿಧಾನ ಪರಿಷತ್‌ ಸದಸ್ಯ ಉಜಿರೆಯ ಪ್ರತಾಪಸಿಂಹ ನಾಯಕ್‌ ಅವರು.

Advertisement

ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಉದ್ಘಾಟನೆ ಬಳಿಕ ಮದ್ದೂರಿನ ಗೆಜ್ಜಲಗೆರೆಯಲ್ಲಿ ಬೃಹತ್‌ ಸಮಾವೇಶದಲ್ಲಿ ಪ್ರಧಾನಿ ಮೋದಿಯವರು ಎಂದಿನಂತೆ ಹಿಂದಿ ಭಾಷಣ ಮಾಡಿದರು. ಹೆಚ್ಚಾಗಿ ಎಲ್ಲಿಯೂ ಅವರ ಭಾಷಣವನ್ನು ಸ್ಥಳೀಯ ಭಾಷೆಗೆ ಭಾಷಾಂತರ ಮಾಡುವ ಪದ್ಧತಿ ಇರುವುದಿಲ್ಲ. ಆದರೆ ಮಂಡ್ಯದಲ್ಲಿ ಭಾಷಾಂತರಿಸುವ ಅನಿವಾರ್ಯತೆ ಉಂಟಾಯಿತು.

ಭಾಷಾಂತರಕ್ಕೆ ಆಯ್ಕೆ ಮಾಡಿದ್ದು ಪ್ರತಾಪಸಿಂಹ ನಾಯಕ್‌ ಅವರನ್ನು. ಈ ಹಿಂದೆ ಅವರು ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ ಸಿಂಗ್‌ ಹಾಗೂ ಕೆಲ ಸಮಯದ ಹಿಂದೆ ಮಲೆಮಹದೇಶ್ವರ ಬೆಟ್ಟದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರ ಹಿಂದಿ ಭಾಷಣವನ್ನು ಸಮರ್ಥವಾಗಿ ಕನ್ನಡೀಕರಿಸಿದ್ದರು. ಈ ಹಿನ್ನಲೆಯಲ್ಲಿ ಮಂಡ್ಯದಲ್ಲಿ ಮೋದಿ ಅವರ ಭಾಷಣವನ್ನು ಕನ್ನಡಕ್ಕೆ ಭಾಷಾಂತರಿಸುವ ಭಾಗ್ಯ ಅವರದ್ದಾಯಿತು. ಸಭೆಯ ಬಳಿಕ ಕೇಂದ್ರ ಮಂತ್ರಿ ನಿತಿನ್‌ ಗಡ್ಕರಿ ಅವರು ಪ್ರತಾಪರ ಬೆನ್ನುತಟ್ಟಿ ಕೆಲ ಕಾಲ ಮಾತುಕತೆ ನಡೆಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next