Advertisement
ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ 5 ವಿಕೆಟಿಗೆ 170 ರನ್ ಪೇರಿಸಿತು. ಜಬಾಬಿತ್ತ ಪಂಜಾಬ್ 18 ಓವರ್‌ಗಳಲ್ಲಿ 4 ವಿಕೆಟಿಗೆ 173 ರನ್ ಬಾರಿಸಿ ಜಯಭೇರಿ ಬಾರಿಸಿತು
170 ರನ್ ಗುರಿಯನ್ನು ಬೆನ್ನತ್ತಲಾರಂಭಿಸಿದ ಪಂಜಾಬ್‌ಗ ಅಮೋಘ ಆರಂಭ ನೀಡಿದ್ದು ಕನ್ನಡಿಗ ಕೆ. ಎಲ್. ರಾಹುಲ್. ಅವರು 36 ಎಸೆತ ಗಳಲ್ಲಿ 71 ರನ್ ಬಾರಿಸಿ (5 ಸಿಕ್ಸರ್, 7 ಬೌಂಡರಿ) ಮೆರೆದಾಡಿದರು. ಇನ್ನೊಂದು ಕಡೆ ಗೇಲ್ ರಾಹುಲ್‌ಗೆ ಉತ್ತಮ ಸಾಥ್ ನೀಡಿದರು. ಆದರೆ ಗೇಲ್ ನಿಧಾನಗತಿಯ ಬ್ಯಾಟಿಂಗ್ ಮಾಡಿದರು. ಮೊದಲ ವಿಕೆಟ್ ಉರುಳುವ ವೇಳೆ ಅವರಿಬ್ಬರ ಜತೆಯಾಟದಲ್ಲಿ 108 ರನ್ ಹರಿದು ಬಂದಿತ್ತು. ಹರ್ಭಜನ್ ಭರ್ಜರಿ ದಾಳಿ
11ನೇ ಓವರ್ ಎಸೆದ ಹರ್ಭಜನ್ ಅಪಾಯಕಾರಿ ರಾಹುಲ್ ವಿಕೆಟ್ ಕಿತ್ತು ಸಂಭ್ರಮಿಸಿದರು. ರಾಹುಲ್ ಔಟಾದ ಬೆನ್ನಲ್ಲೇ ಗೇಲ್ (28) ಅವರನ್ನು ಕೂಡ ಹರ್ಭಜನ್ ಪೆವಿಲಿಯನ್‌ಗೆ ಅಟ್ಟಿದರು. ಬಳಿಕ ಪಂಜಾಬ್ ಆಟ ನಿಧಾನಗತಿಯಲ್ಲಿ ಸಾಗಿತು. ಮಾಯಾಂಕ್ ಅಗರ್ವಾಲ್ 7 ರನ್ನಿಗೆ ಔಟಾದರು. ರಾಹುಲ್ ಅನಂತರ ಬಂದ ನಿಕೋಲಸ್ ಪೂರನ್ (36) ತಾಳ್ಮೆಯ ಆಟವಾಡಿದರು. ರಾಹುಲ್ ಹಾಕಿಕೊಟ್ಟ ಭದ್ರ ಅಡಿಪಾಯದ ನೆರವಿನಿಂದ ಪಂಜಾಬ್ ಸುಲಭವಾಗಿ ಗುರಿ ತಲುಪುವಲ್ಲಿ ಯಶಸ್ವಿಯಾಯಿತು.
Related Articles
ಚೆನ್ನೈ ಇನ್ನಿಂಗ್ಸ್ ವೇಳೆ ಎಡಗೈ ವೇಗಿ ಸ್ಯಾಮ್ ಕರನ್ ಅಪಾಯಕಾರಿ ಆರಂಭಕಾರ ಶೇನ್ ವಾಟ್ಸನ್ ಅವರನ್ನು 7 ರನ್ನಿಗೆ ಪೆವಿಲಿಯನ್‌ಗೆ ಅಟ್ಟಿದರು. ಆದರೆ ದ್ವಿತೀಯ ವಿಕೆಟಿಗೆ ಜತೆಗೂಡಿದ ಫಾ ಡು ಪ್ಲೆಸಿಸ್ ಮತ್ತು ಸುರೇಶ್ ರೈನಾ ಸೇರಿಕೊಂಡು ಪಂಜಾಬ್ ಬೌಲರ್‌ಗಳ ಬೆಂಡೆತ್ತಿ ತಂಡಕ್ಕೆ ಹೆಚ್ಚಿನ ಹಾನಿ ಆಗದಂತೆ ನೋಡಿಕೊಂಡರು. 12.3 ಓವರ್‌ಗಳಲ್ಲಿ 120 ರನ್ ಹರಿದು ಬಂತು. ಸ್ಯಾಮ್ ಕರನ್ ಈ ಜೋಡಿಯನ್ನು ಮುರಿಯುವಲ್ಲಿ ಯಶಸ್ವಿಯಾದರು. 38 ಎಸೆತಗಳಿಂದ 53 ರನ್ ಮಾಡಿದ ಸುರೇಶ್ ರೈನಾ (5 ಬೌಂಡರಿ, 2 ಸಿಕ್ಸರ್) ಶಮಿಗೆ ಕ್ಯಾಚ್ ನೀಡಿ ವಾಪಸಾದರು. ಇನ್ನೊಂದೆಡೆ ಡು ಪ್ಲೆಸಿಸ್ ಆರಂಭದಿಂದಲೇ ಪಂಜಾಬ್ ಬೌಲಿಂಗ್ ಮೇಲೆರಗಿ ಅತ್ಯಂತ ಆಕ್ರಮಣಕಾರಿಯಾಗಿ ಗೋಚರಿಸಿದರು. 55 ಎಸೆತಗಳಿಂದ 96 ರನ್ ಸಿಡಿಸಿದರು. ಸಿಡಿದದ್ದು 4 ಸಿಕ್ಸರ್, 10 ಬೌಂಡರಿ. ಡು ಪ್ಲೆಸಿಸ್ ಈ ಪಂದ್ಯದಲ್ಲಿ ತಮ್ಮ 11ನೇ ಅರ್ಧಶತಕ ಗಳಿಸಿದ ಸಾಧನೆ ಮಾಡಿದರು. ಪಂಜಾಬ್ ಪರ ಸ್ಯಾಮ್ ಕರನ್ 35ಕ್ಕೆ 4, ಮೊಹಮ್ಮದ್ ಶಮಿ 17ಕ್ಕೆ 2 ವಿಕೆಟ್ ಕಬಳಿಸಿದರು.
Advertisement
ಚೆನ್ನೈ ಸೂಪರ್ ಕಿಂಗ್ಸ್ಫಾ ಡು ಪ್ಲೆಸಿಸ್ ಬಿ ಕರನ್ 96
ಶೇನ್ ವಾಟ್ಸನ್ ಬಿ ಕರನ್ 7
ಸುರೇಶ್ ರೈನಾ ಸಿ ಶಮಿ ಬಿ ಕರನ್ 53
ಎಂ.ಎಸ್. ಧೋನಿ ಔಟಾಗದೆ 10
ಅಂಬಾಟಿ ರಾಯುಡು ಸಿ ಮನ್‌ದೀಪ್ ಬಿ 1
ಕೇದಾರ್ ಜಾದವ್ ಬಿ ಶಮಿ 0
ಡ್ವೇನ್ ಬ್ರಾವೊ ಔಟಾಗದೆ 1
ಇತರ 2
ಒಟ್ಟು (5 ವಿಕೆಟಿಗೆ) 170
ವಿಕೆಟ್ ಪತನ:1-30, 2-150, 3-163, 4-166, 5-167.
ಬೌಲಿಂಗ್: ಹರ್‌ಪ್ರೀತ್ ಬ್ರಾರ್ 3-0-24-0
ಮೊಹಮ್ಮದ್ ಶಮಿ 3-0-17-2
ಸ್ಯಾಮ್ ಕರನ್ 4-0-35-3
ಆರ್. ಅಶ್ವಿನ್ 4-0-23-0
ಆಂಡ್ರೂé ಟೈ 3-0-37-0
ಮುರುಗನ್ ಅಶ್ವಿನ್ 3-0-33-0 ಕಿಂಗ್ಸ್ ಇಲೆವೆನ್ ಪಂಜಾಬ್
ಕೆ. ಎಲ್ ರಾಹುಲ್ ಸಿ ತಾಹಿರ್ ಬಿ ಹರ್ಭಜನ್ 71
ಕ್ರಿಸ್ ಗೇಲ್ ಸಿ ಶೌರ್ಯ ಬಿ ಹರ್ಭಜನ್ 28
ನಿಕೋಲಸ್ ಪೂರನ್ ಸಿ ಧೋನಿ ಬಿ ಜಡೇಜ 36
ಮಾಯಾಂಕ್ ಅಗರ್ವಾಲ್ ಸಿ ಜಡೇಜ ಬಿ ಹರ್ಭಜನ್ 7
ಮನ್‌ದೀಪ್ ಸಿಂಗ್ ಔಟಾಗದೆ 7
ಸ್ಯಾಮ್ ಕರನ್ ಔಟಾಗದೆ 6
ಇತರ 14
ಒಟ್ಟು (18 ಓವರ್‌ಗಳಲ್ಲಿ 4 ವಿಕೆಟಿಗೆ) 173
ವಿಕೆಟ್ ಪತನ: 1-108, 2-108, 3-118, 4-164.
ಬೌಲಿಂಗ್: ದೀಪಕ್ ಚಹರ್ 4-0-28-0
ಹರ್ಭಜನ್ ಸಿಂಗ್ 4-0-57-3
ಇಮ್ರಾನ್ ತಾಹಿರ್ 4-0-27-0
ಡ್ವೇನ್ ಬ್ರಾವೊ 4-0-36-0
ರವೀಂದ್ರ ಜಡೇಜ 2-0-16-1