Advertisement

ಐಪಿಎಲ್ ನಿಂದ ಕೆ.ಎಲ್.ರಾಹುಲ್ ಮತ್ತು ರಶೀದ್ ಖಾನ್ ಒಂದು ವರ್ಷ ಬ್ಯಾನ್?

01:48 PM Nov 30, 2021 | Team Udayavani |

ಮುಂಬೈ: ಎರಡು ಹೊಸ ತಂಡಗಳೊಂದಿಗೆ 2022ರ ಸೀಸನ್ ನ ಐಪಿಎಲ್ ಗೆ ತಯಾರಿ ನಡೆಯುತ್ತಿದೆ. ಹಾಲಿ ಇರುವ 8 ತಂಡಗಳು ತಮ್ಮಲ್ಲಿ ಉಳಿಸಿಕೊಳ್ಳುವ ಆಟಗಾರರ ಪಟ್ಟಿ ನೀಡಲು ಇಂದು (ನ.30) ಕೊನೆಯ ದಿನವಾಗಿದೆ. ಹೀಗಾಗಿ ಫ್ರಾಂಚೈಸಿಗಳು ಕೊನೆಯ ಹಂತದ ತಾಲೀಮಿನಲ್ಲಿ ತೊಡಗಿದೆ.

Advertisement

ಆದರೆ ಈ ಮಧ್ಯೆ ಸ್ಟಾರ್ ಆಟಗಾರರಾದ ಕೆ.ಎಲ್.ರಾಹುಲ್ ಮತ್ತು ರಶೀದ್ ಖಾನ್ ರನ್ನು ಐಪಿಎಲ್ ನಿಂದ ಒಂದು ವರ್ಷ ನಿಷೇಧ ಮಾಡಲು ಬಿಸಿಸಿಐ ಮುಂದಾಗಿದೆ ಎಂದು ವರದಿಯಾಗಿದೆ.

ನೂತನ ತಂಡಗಳಾದ ಲಕ್ನೋ ಮತ್ತು ಅಹಮದಾಬಾದ್ ತಂಡಗಳು ಹರಾಜಿಗಿಂತ ಮೊದಲು ಮೂವರು ಆಟಗಾರರನ್ನು ಆಯ್ಕೆ ಮಾಡುವ ಅವಕಾಶವಿದೆ. ಲಕ್ನೋ ತಂಡವು ಪಂಜಾಬ್ ಕಿಂಗ್ಸ್ ನ ಕೆ.ಎಲ್.ರಾಹುಲ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನ ರಶೀದ್ ಖಾನ್ ರನ್ನು ತನ್ನತ್ತ ಸೆಳೆಯಲು ಯತ್ನ ಮಾಡುತ್ತಿದೆ ಎಂದು ಪಂಜಾಬ್ ಮತ್ತು ಹೈದರಾಬಾದ್ ಫ್ರಾಂಚೈಸಿಗಳು ಬಿಸಿಸಿಐಗೆ ದೂರು ನೀಡಿದೆ.

ಇದನ್ನೂ ಓದಿ:ಮೈದಾನದ ಸಿಬಂದಿಗೆ ದ್ರಾವಿಡ್‌ ಇನಾಮು

ಈ ಬಗ್ಗೆ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, “ನಾವು ಯಾವುದೇ ಲಿಖಿತ ದೂರನ್ನು ಸ್ವೀಕರಿಸಿಲ್ಲ. ಆದರೆ ಲಕ್ನೋ ತಂಡವು ಆಟಗಾರರನ್ನು ಸೆಳೆಯಲು ಯತ್ನಿಸುತ್ತಿರುವ ಬಗ್ಗೆ ಎರಡು ಫ್ರಾಂಚೈಸಿಗಳಿಂದ ಮೌಖಿಕ ದೂರು ಸ್ವೀಕರಿಸಿದ್ದೇವೆ. ನಾವು ಅದನ್ನು ಪರಿಶೀಲಿಸುತ್ತಿದ್ದೇವೆ. ಅದು ನಿಜವೆಂದು ಸಾಬೀತಾದರೆ ನಾವು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಸಮತೋಲನವನ್ನು ತೊಂದರೆಗೊಳಿಸಲು ನಾವು ಬಯಸುವುದಿಲ್ಲ. ತೀವ್ರ ಪೈಪೋಟಿ ಇರುವಾಗ ನೀವು ಅಂತಹ ವಿಷಯಗಳನ್ನು ತಪ್ಪಿಸಲು ಸಾಧ್ಯವಿಲ್ಲ. ಆದರೆ ಅಸ್ತಿತ್ವದಲ್ಲಿರುವ ತಂಡಗಳು ಎಲ್ಲವನ್ನೂ ಸಮತೋಲನಗೊಳಿಸಲು ಪ್ರಯತ್ನಿಸುತ್ತಿರುವಾಗ ಅದು ನ್ಯಾಯೋಚಿತವಲ್ಲ ಎಂದು ತಿಳಿಸಿದ್ದಾರೆ.

Advertisement

ಇನ್ನೂ ರಿಟೆನ್ಶನ್ ಪ್ರಕ್ರಿಯೆ ಅಂತ್ಯವಾಗದೆ ಈ ಇಬ್ಬರು ಆಟಗಾರರು ಬೇರೆ ಫ್ರಾಂಚೈಸಿ ಜೊತೆ ಸಂಪರ್ಕ ಬೆಳೆಸಿರುವ ಕಾರಣ ಇಬ್ಬರಿಗೂ ಒಂದು ವರ್ಷ ಬ್ಯಾನ್ ಮಾಡಲಾಗುತ್ತದೆ ಎಂದು ವರದಿ ತಿಳಿಸಿದೆ. ಆದರೆ ಬಿಸಿಸಿಐ ಈ ಬಗ್ಗೆ ಖಚಿತ ಪಡಿಸಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next