Advertisement

ಅಧ್ಯಯನ ವರದಿ ಅಧಿಕೃತವಾಗಿ ಬಿಡುಗಡೆಯಾದ ಮೇಲೆ ಚರ್ಚಿಸುವುದು ಸೂಕ್ತ: ಕೆ.ಜಯಪ್ರಕಾಶ್‌ ಹೆಗ್ಡೆ

02:48 PM Mar 04, 2024 | Nagendra Trasi |

ಉಡುಪಿ: ರಾಜ್ಯ ಸರ್ಕಾರದ ಸೂಚನೆಯಂತೆ ಕಾಂತರಾಜು ಅವರು ಅಧ್ಯಕ್ಷರಾಗಿದ್ದಾಗ ಸಂಗ್ರಹಿಸಿದ್ದ ದತ್ತಾಂಶದ ಆಧಾರದ ಮೇಲೆ ಹಿಂದುಗಳಿದ ಜಾತಿಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಿದ್ದೇವೆ. ಸರ್ಕಾರ ವರದಿಯನ್ನು ಸಚಿವ ಸಂಪುಟದ ಮುಂದೆ ಇಟ್ಟು, ಅನುಮೋದನೆ ಪಡೆದು, ಸಾರ್ವಜನಿಕವಾಗಿ ಬಿಡುಗಡೆ ಮಾಡಿದಾಗ ಚರ್ಚೆ ಮಾಡಲು ಅವಕಾಶ ಇದೆ ಎಂದು ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್‌ ಹೆಗ್ಡೆ ಹೇಳಿದರು.

Advertisement

ಇದನ್ನೂ ಓದಿ:Rajinikanth: ಮನೆ ಕೆಲಸದಾಕೆಯನ್ನು ಅವಮಾನ ಮಾಡಿದ ರಜಿನಿಕಾಂತ್?‌ ವಿಡಿಯೋ ವೈರಲ್

ಅವರು ಸೋಮವಾರ (ಮಾರ್ಚ್‌ 04) ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು.

ಅಧ್ಯಯನದ ವೇಳೆ 1.30 ಕೋಟಿ ಮನೆಗಳಿಗೆ ಭೇಟಿ ನೀಡಿದ್ದು, 5.98 ಕೋಟಿ ಜನರ ಮಾಹಿತಿ ಸಂಗ್ರಹಿಸಲಾಗಿದೆ. ಅಧ್ಯಯನ ವರದಿಯನ್ನು ಸರ್ಕಾರ ಒಪ್ಪುವವರೆಗೆ ನಾವು ಸಾರ್ವಜನಿಕವಾಗಿ ಚರ್ಚೆ ಮಾಡುವ ಹಾಗಿಲ್ಲ. ಸರ್ಕಾರ ಅಧಿಕೃತವಾಗಿ ಸಾರ್ವಜನಿಕವಾಗಿ ಬಿಡುಗಡೆಗೊಳಿಸಿದರೆ, ಆಗ ಚರ್ಚೆ ನಡೆಸಬಹುದು, ಏನಾದರು ತಪ್ಪುಗಳಾಗಿದ್ದರೆ ಅದನ್ನು ಸರಿಪಡಿಸಲು ಅವಕಾಶವಿದೆ ಎಂದರು.

ಒಂದು ಕುಟುಂಬಕ್ಕೆ 54 ಪ್ರಶ್ನೆಗಳಿದ್ದು, ಅದರಲ್ಲಿ ಜಾತಿ ಕೂಡಾ ಒಂದು. ನಾವು ಜಾತಿಗಣತಿ ನಡೆಸಿಲ್ಲ. ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ವಿವಿಧ ಅಂಶಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಿದ್ವೇವೆ. ವರದಿ ವೈಜ್ಞಾನಿಕವಾಗಿಲ್ಲ ಎಂದು ಆರೋಪಿಸಬೇಕಾದರೆ, ಮೊದಲು ವರದಿ ಓದಬೇಕು. ಓದಿದ ನಂತರ ಚರ್ಚೆ ಮಾಡಿದರೆ ಉತ್ತಮ ಎಂದು ಜಯಪ್ರಕಾಶ್‌ ಹೆಗ್ಡೆ ಹೇಳಿದರು.

Advertisement

ಸಮಾಜದಲ್ಲಿ ಸಮಾನತೆ ತರಲು ಮೀಸಲಾತಿ ತರಲಾಗಿದೆ. ಅಧ್ಯಯನ ವರದಿಯಲ್ಲಿ 1,300ಕ್ಕೂ ಅಧಿಕ ಜಾತಿಗಳನ್ನು ಗುರುತಿಸಲಾಗಿದೆ. ಸಣ್ಣ, ಸಣ್ಣ ಜಾತಿಯ ಅಂಶಗಳನ್ನು ಸೇರಿಸಲಾಗಿದೆ. ನಾವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಬಗ್ಗೆ ಯಾವುದೇ ಮಾಹಿತಿ ಸಂಗ್ರಹಿಸಿಲ್ಲ. ಅದಕ್ಕೆ ಬೇರೆಯೇ ಆಯೋಗ ಇದೆ. ಸುಮ್ಮನೆ ಕುಳಿತು ವರದಿ ತಯಾರಿಸಿಲ್ಲ. ಅಧ್ಯಯನ ನಡೆಸಿ ಮಾಹಿತಿ ಸಂಗ್ರಹಿಸಿದ್ದೇವೆ.

ಸ್ಪರ್ಧೆ ಬಗ್ಗೆ ಚರ್ಚಿಸಿ ತೀರ್ಮಾನ:

ನಾನೀಗ ಯಾವ ಪಕ್ಷದ ಸದಸ್ಯನೂ ಅಲ್ಲ. ಆದರೆ ಮಾಧ್ಯಮಗಳಲ್ಲಿ ಊಹಾಪೋಹಗಳು ಹರಿದಾಡುವ ಮೂಲಕ ಚಾಲ್ತಿಯಲ್ಲಿದ್ದೇನೆ. ಚುನಾವಣೆ ವಿಚಾರದಲ್ಲಿ ನಾನು ಯಾರನ್ನೂ ಸಂಪರ್ಕಿಸಿಲ್ಲ, ಬೇರೆ ಪಕ್ಷದವರು ಸಂಪರ್ಕಿಸಿಲ್ಲ. ನಾನು ಚುನಾವಣೆಯಲ್ಲಿ ಸ್ಪರ್ಧಿಸಬೇಕೋ ಬೇಡವೋ ಎಂಬ ಬಗ್ಗೆ ತೀರ್ಮಾನ ಮಾಡಿದ ನಂತರ ಪಕ್ಷದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಜಯಪ್ರಕಾಶ್‌ ಹೆಗ್ಡೆ ಚುನಾವಣೆ ಸ್ಪರ್ಧೆ ಕುರಿತು ಕೇಳಿದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯೆ ನೀಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next