ಕೋಲಾರ: ನನ್ನನ್ನೂ ಸೇರಿ ಮಲ್ಲಿಕಾರ್ಜುನ ಖರ್ಗೆ, ಡಾ| ಜಿ.ಪರಮೇಶ್ವರ್ ಮತ್ತಿತರರ ಯಾರನ್ನೂ ಕಳೆದ ಚುನಾವಣೆಗಳಲ್ಲಿ ಸೋಲಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಮುಂದಾಗಿರಲಿಲ್ಲ. ಅಂತಹ ವದಂತಿಗಳಿಗೆ ಕಿವಿಗೊಡಬೇಕಾಗಿಲ್ಲ ಎಂದು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವಧಿಯಲ್ಲಿ ನನಗೆ ಬಹಳಷ್ಟು ಕೆಲಸವಾಗಿದೆ. ಯಾವುದೇ ವಿಚಾರಕ್ಕೆ ಹೋದರೂ ಅವರು ನನಗೆ ಸ್ಪಂದಿಸುತ್ತಿದ್ದರು. ಈಗಲೂ ನಾನು ಅವರ ಪರವಾಗಿ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ನಮ್ಮನ್ನು ಸೋಲಿಸಿದ್ದಾರೆ ಎನ್ನುವುದು ಸುಳ್ಳಿನ ಸಂಗತಿ ಎಂದು ಹೇಳಿದರು.
ಮತ್ತೊಮ್ಮೆ ಅವಕಾಶ ಬಂದಿದೆ
ರಾಜ್ಯದ ಮೊಟ್ಟಮೊದಲ ಮುಖ್ಯಮಂತ್ರಿ ಕೋಲಾರ ಜಿಲ್ಲೆಯವರಾಗಿದ್ದು, ಎರಡನೇ ಬಾರಿ ಕೋಲಾರ ಜಿಲ್ಲೆಗೆ ಮುಖ್ಯಮಂತ್ರಿ ಆಗುವ ಅವಕಾಶ ಬಂದಿದೆ. ಈ ನಿಟ್ಟಿನಲ್ಲಿ ಕೋಲಾರದಲ್ಲಿ ಗೆಲ್ಲಿಸಿಕೊಳ್ಳಲು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸುತ್ತೇವೆ. ಮಾಜಿ ಮುಖ್ಯಮಂತ್ರಿಯನ್ನು ಇಲ್ಲಿ ಗೆಲ್ಲಿಸಿಕೊಳ್ಳಲಾಗಿಲ್ಲವೆಂದರೆ ನಾವು ಇನ್ನೇನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.