Advertisement

ದೇಶದ ಸಂಸ್ಕೃತಿ, ಪರಂಪರೆಗೆ ಪ್ರಾಕೃತ ಭಾಷೆಯ ಕೊಡುಗೆ ಅಪಾರ: ಕೆ.ಗೋಪಾಲಯ್ಯ

11:45 AM Aug 15, 2022 | Team Udayavani |

ಹಾಸನ: ದೇಶದ ಸಂಸ್ಕೃತಿ ಪರಂಪರೆಗೆ ಪ್ರಾಕೃತ ಭಾಷೆಯ ಕೊಡುಗೆ ಅಪಾರ. ಅದೇ ರೀತಿ ಐತಿಹಾಸಿಕ ಹಿರಿಮೆಯ, ಪುಣ್ಯ ಭೂಮಿ ಶ್ರವಣಬೆಳಗೊಳ ವಿಶ್ವದ ಶಾಂತಿಯ ಪ್ರತೀಕ ಎಂದು ಅಬಕಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅಭಿಪ್ರಾಯಪಟ್ಟಿದ್ದಾರೆ.

Advertisement

ಶ್ರವಣಬೆಳಗುಳದ ಶ್ರೀ ಧವಳತೀರ್ಥಂ ನಲ್ಲಿದು  2018 ರಲ್ಲಿ ಶ್ರೀ ಭಗವಾನ್ ಬಾಹುಬಲಿಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವದ ಸಂಬಂಧ ಪ್ರಾಕೃತ ವಿಶ್ವವಿದ್ಯಾಲಯ ಸ್ಥಾಪನೆಗೆ ರಾಜ್ಯ ಸರ್ಕಾರದಿಂದ ಬಿಡುಗಡೆಯಾದ ಅನುದಾನದಲ್ಲಿ ನಿರ್ಮಾಣವಾಗಿರುವ ಕಟ್ಟಡಗಳನ್ನು  ಬಾಹುಬಲಿ ಪ್ರಾಕೃತ ವಿದ್ಯಾಪೀಠಕ್ಕೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಮಾತನಾಡಿದರು.

ಶ್ರವಣಬೆಳಗೊಳ ಸಹಸ್ರಾರು ಮಹನೀಯರು ನೆಲೆಸಿದ್ದ, ಋಷಿ ಮುನಿಗಳು ತಪಸ್ಸು ಗೈದ ಪುಣ್ಯ ಭೂಮಿ ‌ಇದರ ಅಭಿವೃದ್ಧಿಗೆ ಮುಖ್ಯ ಮಂತ್ರಿಯವರೊಂದಿಗೆ ಚರ್ಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಶ್ರಮಿಸುವುದಾಗಿ ಸಚಿವರು ಹೇಳಿದರು.

ಶ್ರವಣಬೆಳಗೊಳದ ಅಭಿವೃದ್ಧಿ ಸಂಕೇತವಾಗಿರುವ ಚಾರೂಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಪರಿಶ್ರಮ, ದೂರದೃಷ್ಟಿ ಚಿನಂತನೆ ಹಾಗೂ ಸಂಕಲ್ಪಗಳೇ ಪ್ರಮುಖ ಕಾರಣವಾಗಿದ್ದು ಮುಂದಿನ ದಿನಗಳಲ್ಲಿ ಸ್ವಾಮಿಜಿಯವರೊಂದಿಗೆ ಸಮಾಲೋಚನೆ ನಡೆಸಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಾಗಿ ಹೇಳಿದರು.

ಉಪ ವಿಭಾಗಾಧಿಕಾರಿ ಬಿ.ಎ ಜಗದೀಶ್ ,ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರ ಮಂಜುನಾಥ್, ಜುಟ್ಟನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಜಿ. ನಿಖಿಲ್ ಗೌಡ, ಶ್ರವಣಬೆಳಗೊಳ ಗ್ರಾಮ ಪಂಚಾಯತಿ ಅಧ್ಯಕ್ಷ ಅನುರಾಧ ಲೋಹಿತ್, ಬಾಹುಬಲಿ ಪ್ರಾಕೃತ ವಿದ್ಯಾಪೀಠದ ಕಾರ್ಯಾಧ್ಯಕ್ಷ ಎ.ಸಿ ವಿದ್ಯಾಧರ್, ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕರಾದ ಪ್ರೋ ಡಾ ಜಯಕುಮಾರ್ ಉಪಾಧ್ಯೆ , ಸಂಸ್ಥೆಯ ಕಾರ್ಯ ನಿರ್ವಾಹಕ ಅಧಿಕಾರಿ‌ ಡಾ ಎಂ. ವಿ‌ ಮುರುಳಿ ಮತ್ತಿತರರು ಹಾಜರಿದ್ದರು

Advertisement
Advertisement

Udayavani is now on Telegram. Click here to join our channel and stay updated with the latest news.

Next