Advertisement

4 ಜನರನ್ನು ಕೊಂದ ಹುಲಿಯನ್ನು ಕೊಲ್ಲಿ ಇಲ್ಲವೇ ನಮಗೆ ಅನುಮತಿ ಕೊಡಿ : ಸದನದಲ್ಲಿ ಬೋಪಯ್ಯ

08:58 PM Mar 09, 2021 | Team Udayavani |

ವಿಧಾನಸಭೆ: ಕೊಡಗಿನಲ್ಲಿ ಹುಲಿ ಹಾವಳಿಯಿಂದ ಜನತೆ ಆತಂಕಗೊಂಡಿದ್ದು ಅರಣ್ಯ ಇಲಾಖೆ ಹುಲಿ ಕೊಲ್ಲಲಿ ಇಲ್ಲವೇ ನಮಗೇ ಅನುಮತಿ ಕೊಡಲಿ ಎಂದು ಬಿಜೆಪಿಯ ಕೆ.ಜೆ.ಬೋಪಯ್ಯ ಒತ್ತಾಯಿಸಿದರು.

Advertisement

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ವಿರಾಜಪೇಟೆ ಸುತ್ತಮುತ್ತಲ ಹುಲಿ ಹಾವಳಿಯಿಂದ ನಾಲ್ವರು ಮೃತಪಟ್ಟಿದ್ದಾರೆ. 25 ಹಸುಗಳನ್ನು ಕೊಂದಿದೆ. ಜನ ಹೊರಗೆ ಬರಲು ಆತಂಕಪಡುವಂತಾಗಿ ಶಾಸಕರು ರಾಜೀನಾಮೆ ನೀಡಬೇಕು ಎಂದು ಧರಣಿ ಮಾಡುತ್ತಿದ್ದಾರೆ. ಸರ್ಕಾರವು ಹುಲಿ ಕೊಲ್ಲಲು ಆದೇಶ ಮಾಡಿದೆ, ಆನೆಗಳ ಮೇಲೆ ಹೋಗಿ ಹುಲಿ ಕೊಲ್ಲುವುದು ಆಗದ ಮಾತು. ನಮಗೆ ವಹಿಸಿದರೆ ಅದನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಹೇಳಿದರು.

ನಮ್ಮ ಕಡೆ ಮೊದಲು ಹುಲಿ ಮದುವೆ ಎಂಬ ಪದ್ಧತಿಯಿತ್ತು, ಹಾಗೆಂದರೇನು ಎಂಬುದು ಆಮೇಲೆ ಹೇಳುತ್ತೇನೆ ಎಂದು ಹೇಳಿದರು. ಅಪ್ಪಚ್ಚು ರಂಜನ್‌ ಸಹ ಧ್ವನಿಗೂಡಿಸಿದರು.

ಇದನ್ನೂ ಓದಿ :ಹಳಿ ತಪ್ಪಿದ ಹೌರಾ – ಮುಂಬೈ ಗೀತಾಂಜಲಿ ಎಕ್ಸ್‌ಪ್ರಸ್‌ ರೈಲು

ಅರಣ್ಯ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ಹೆಣ್ಣು ಹುಲಿ ಒಂದನ್ನು ಹಿಡಿಯಲಾಗಿದೆ. ಇದೀಗ ಗಂಡು ಹುಲಿಯ ಹಾವಳಿಯಿಂದ ಸಮಸ್ಯೆಯಾಗಿದೆ. ಸರ್ಕಾರವು ಹುಲಿ ಕೊಲ್ಲಲು ಆದೇಶ ಮಾಡಿದೆ. ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Advertisement

ಹುಲಿ ದಾಳಿಯಿಂದ ಮೃತಪಟ್ಟ ಹಸುಗೆ 10 ಸಾವಿರ ರೂ. ಮಾತ್ರ ಪರಿಹಾರ ನೀಡಲಾಗುತ್ತಿದ್ದು ಆ ಮೊತ್ತ 40 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next