ಹೈದರಾಬಾದ್: ತೆಲಂಗಾಣ ರಾಜ್ಯ ಸರ್ಕಾರ ಜ.26ರ ಗಣರಾಜ್ಯ ದಿನವನ್ನು ಪ್ರತ್ಯೇಕವಾಗಿ ಆಚರಿಸಲು ನಿರ್ಧರಿಸಿದೆ. ರಾಜ್ಯಪಾಲೆ ಡಾ.ತಮಿಳ್‌ಸೈ ಸುಂದರರಾಜನ್ ಮತ್ತು ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ನಡುವಿನ ಭಿನ್ನಾಭಿಪ್ರಾಯವೇ ಈ ಬೆಳವಣಿಗೆಗೆ ಕಾರಣ.
2022ರಲ್ಲಿಯೂ ರಾಜಭವನದಲ್ಲಿ ರಾಜ್ಯಪಾಲೆ ರಾಷ್ಟ್ರಧ್ವಜಾರೋಹಣ ನಡೆಸಿ, ಕಾರ್ಯಕ್ರಮ ಆಯೋಜಿಸಿದ್ದರು. ಪ್ರಸಕ್ತ ಸಾಲಿನಲ್ಲಿಯೂ ಕೂಡ ರಾಜಭವನ ಪ್ರತ್ಯೇಕ ಕಾರ್ಯಕ್ರಮ ನಡೆಸುವುದಿದ್ದರೆ ರಾಜ್ಯ ಸರ್ಕಾರದ ಅಭ್ಯಂತರ ಇಲ್ಲ ಎಂಬ ಸೂಚನೆಯನ್ನೂ ನೀಡಲಾಗಿದೆ.
ಶಿಷ್ಟಾಚಾರದ ಪ್ರಕಾರ, ಸದನ ಅನುಮೋದಿಸಿದ ಭಾಷಣದ ಪ್ರತಿಯನ್ನು ರಾಜ್ಯ ಸರ್ಕಾರ ರಾಜ್ಯಪಾಲರಿಗೆ ಕಳುಹಿಸುತ್ತದೆ.
ಗಣರಾಜ್ಯೋತ್ಸವ ದಿನದಂದು ರಾಜ್ಯಪಾಲರು ಅದನ್ನು ಓದುತ್ತಾರೆ ಹಾಗೂ ಮುಖ್ಯಮಂತ್ರಿಗಳು ತ್ರಿವಣ ಧ್ವಜವನ್ನು ಹಾರಿಸುತ್ತಾರೆ.
Related Articles
ರಾಜ್ಯಪಾಲರು ಎಂಟು ವಿಧೇಯಕಗಳನ್ನು ಅನುಮೋದಿಸಬೇಕಾಗಿದೆ. ಈ ಅಂಶವೇ ಬಿಕ್ಕಟ್ಟಿಗೆ ಕಾರಣ. ಸಿಕಂದರಾಬಾದ್‌ನ ಪರೇಡ್ ಮೈದಾನದಲ್ಲಿ ಈ ಹಿಂದೆ ರಾಜಭವನ ಮತ್ತು ಸರ್ಕಾರದಿಂದ ಒಟ್ಟಾಗಿ ಗಣರಾಜ್ಯೋತ್ಸವ ಸಮಾರಂಭ ಆಯೋಜಿಸಲಾಗುತ್ತಿತ್ತು.