Advertisement

ಜುಹೂ: ಪೊಲೀಸ್‌ ಕಾನ್‌ಸ್ಟೆಬಲ್‌ಗೆ ಕೋವಿಡ್ 19

07:02 PM Apr 17, 2020 | Suhan S |

ಮುಂಬಯಿ, ಎ. 16: ಮುಂಬಯಿಯ ಜುಹೂ ಪೊಲೀಸ್‌ ಠಾಣೆಗೆ ಸಂಬಂಧಿಸಿದ ಕಾನ್‌ ಸ್ಟೆಬಲ್‌ ಕೋವಿಡ್ 19 ವೈರಸ್‌ಗೆಪಾಸಿಟಿವ್‌ ಕಂಡು ಬಂದಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

Advertisement

ಕಾನ್‌ಸ್ಟೆಬಲ್‌ನೊಂದಿಗೆಸಂಪರ್ಕಕ್ಕೆ ಬಂದ ಇತರ ಪೊಲೀಸ್‌ ಸಿಬಂದಿಯನ್ನೂ ಪರೀಕ್ಷಿಸಲಾಗುವುದು ಎಂದವರು ಹೇಳಿದ್ದಾರೆ. ಇಲ್ಲಿನ ಕಾಂದಿವಲಿ ಪ್ರದೇಶದನಿವಾಸಿಯಾಗಿರುವ ಕಾನ್‌ಸ್ಟೆಬಲ್‌ಅನಾರೋಗ್ಯದ ಕಾರಣ ಕಳೆದ ಕೆಲವು ದಿನಗಳಿಂದ ರಜೆಯಲ್ಲಿದ್ದರು. ಅವರು ಕೋವಿಡ್ 19  ವೈರಸ್‌ ರೋಗಲಕ್ಷಣಗಳನ್ನು ತೋರಿಸಲಾರಂಭಿಸಿದ ಅನಂತರ ಅವರ ಪರೀಕ್ಷೆಯನ್ನು ನಡೆಸಲಾಗಿದ್ದು, ಅದರ ವರದಿಯು ಬುಧವಾರಸಕಾರಾತ್ಮಕವಾಗಿ ಹೊರಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಪ್ರಸ್ತುತ ಅವರನ್ನು ಮನಪಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾನ್‌ಸ್ಟೆಬಲ್‌ ಪರೀಕ್ಷಾ ವರದಿಯು ಕೋವಿಡ್ 19  ವೈರಸ್‌ಗೆ ಸಕಾರಾತ್ಮಕವಾಗಿ ಹೊರಬಂದಿದೆ. ಅವರೊಂದಿಗೆ ಸಂಪರ್ಕಕ್ಕೆ ಬಂದ ಇತರ ಏಳರಿಂದ ಎಂಟು ಅಧಿಕಾರಿಗಳ ಮಾದರಿಗಳನ್ನು ಕೂಡ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಜುಹೂ ಪೊಲೀಸ್‌ ಠಾಣೆಯ ಹಿರಿಯ ಇನ್‌ಸ್ಪೆಕ್ಟರ್‌ ಪಂಢರೀನಾಥ್‌ ವಾವಲ್‌ ತಿಳಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಇಲ್ಲಿನ ಕುರಾರ್‌ಪೊಲೀಸ್‌ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ಕೂಡ ಕೋವಿಡ್ 19 ವೈರಸ್‌ಗೆ ಪಾಸಿಟಿವ್‌ ಕಂಡುಬಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next