Advertisement

ದೇಶದಲ್ಲಿ ಜೂಟ್‌, ರಾಜ್ಯದಲ್ಲಿ ಲೂಟ್‌ ಸರ್ಕಾರ: ಜೈರಾಂ ಟೀಕೆ

10:25 PM May 06, 2023 | Team Udayavani |

ಬೆಳಗಾವಿ: ದೇಶದಲ್ಲಿ ಜೂಟ್‌ (ಸುಳ್ಳು ಆಶ್ವಾಸನೆ) ಸರ್ಕಾರ ಅಧಿಕಾರದಲ್ಲಿದ್ದರೆ, ರಾಜ್ಯದಲ್ಲಿ ಲೂಟ್‌(ಲೂಟಿ ಹೊಡೆಯುವ) ಸರ್ಕಾರವಿದೆ. ಇವೆರಡೂ ಡಬಲ್‌ ಬೋಗಸ್‌ ಸರ್ಕಾರಗಳು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ ಟೀಕಿಸಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಬಲ್‌ ಇಂಜಿನ್‌ ಸರ್ಕಾರ ಎಂದರೆ ಎರಡೂ ಸರ್ಕಾರಗಳು ಅಭಿವೃದ್ಧಿಯತ್ತ ಸಾಗುತ್ತಿವೆ ಎನ್ನುವುದಲ್ಲ. ನಾನು ದೆಹಲಿಯಲ್ಲಿ ಪ್ರಧಾನಿ ಇದ್ದೇನೆ. ಕರ್ನಾಟಕದ ಮುಖ್ಯಮಂತ್ರಿ ನನ್ನ ಕೈಗೊಂಬೆ ಎಂಬುದು ಅವರ ಭಾವನೆ ಎಂದು ವ್ಯಂಗ್ಯವಾಡಿದರು.
ಪ್ರಧಾನಮಂತ್ರಿ ಹಾಗೂ ಕೇಂದ್ರ ಗೃಹಮಂತ್ರಿ ಇಲ್ಲಿಯೇ ಠಿಕಾಣಿ ಹೂಡಿದಂತೆ ಪ್ರಚಾರ ನಡೆಸುತ್ತಿದ್ದಾರೆ. ಇದು ಡೆಲ್ಲಿ ಇಂಜಿನ್‌ ಸರ್ಕಾರವಲ್ಲ, ಬೆಂಗಳೂರು ಇಂಜಿನ್‌ ಸರ್ಕಾರಕ್ಕಾಗಿ ನಡೆದಿರುವ ಚುನಾವಣೆ. ಈ ಚುನಾವಣೆ ಬಗ್ಗೆ ರಾಜ್ಯದ ಜನತೆಗೆ ಸ್ಪಷ್ಟ ಅರಿವಿದೆ. ಭ್ರಷ್ಟಾಚಾರದಿಂದ ರೋಸಿ ಹೋದ ಜನರು ಕಾಂಗ್ರೆಸ್‌ನ ಗ್ಯಾರಂಟಿಗಳ ಮೇಲೆ ಭರವಸೆ ಇಟ್ಟು ಈ ಬಾರಿ ಸಿಂಗಲ್‌ ಇಂಜಿನ್‌ ಸರ್ಕಾರಕ್ಕೆ ಮಣೆ ಹಾಕಲಿದ್ದಾರೆ ಎಂದರು.

ಈಗ ಬಿಜೆಪಿ ಬಜರಂಗದಳ ನಿಷೇಧ ಪ್ರಸ್ತಾಪ ವಿಷಯವನ್ನು ವಿವಾದ ಮಾಡಿ, ರಾಜಕಾರಣ ಮಾಡುತ್ತಿದೆ. ಆದರೆ ಗೋವಾದಲ್ಲಿ ಮನೋಹರ ಪರಿಕ್ಕರ್‌ ನೇತೃತ್ವದ ಸರ್ಕಾರ 2016ರಲ್ಲಿ ಶ್ರೀರಾಮಸೇನೆಯನ್ನು ನಿಷೆೇಧಿಸಿತ್ತು. ಆಗ ಕೇಂದ್ರದಲ್ಲಿದ್ದ ಮೋದಿ ಸರ್ಕಾರ ಇದನ್ನು ಏಕೆ ವಿರೋಧಿಸಿರಲಿಲ್ಲ ಎಂದು ಪ್ರಶ್ನಿಸಿದರು.
ಬಜರಂಗಬಲಿಯೇ ಬೇರೆ, ಬಜರಂಗ ದಳವೇ ಬೇರೆ. ಅದೇ ರೀತಿ ಜೈ ಶ್ರೀರಾಮ ಬೇರೆ, ಶ್ರೀರಾಮಸೇನೆಯೇ ಬೇರೆ. ನಾವೂ ಕೂಡ ಆಂಜನೇಯನ ಭಕ್ತರು. ಈಗ ನಾವು ನಿಷೆೇಧಿಸುತ್ತಿರುವುದು ಒಂದು ಸಂಘಟನೆಯನ್ನಷ್ಟೇ ಎಂದ ಅವರು, ಆಗ ಶ್ರೀರಾಮಸೇನೆ ನಿಷೇಧಿಸಿದರೂ ಗೋವಾ ಸರ್ಕಾರದ ವಿರುದ್ಧ ಚಕಾರವೆತ್ತದ ಬಿಜೆಪಿಗರು ಇಂದು ದುರುದ್ದೇಶಪೂರಕವಾಗಿ ಇದನ್ನು ವಿರೋಧಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಈ ಹಿಂದೆ ಚಿಕ್ಕಮಗಳೂರಿನಲ್ಲಿ ಲೋಕಸಭೆಗೆ ಸ್ಪರ್ಧಿಸಿದ್ದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಂದ ಕರ್ನಾಟಕಕ್ಕೆ ಸಂಜೀವಿನಿ ಸಿಕ್ಕಿತ್ತು. ಈಗ ರಾಹುಲ್‌ ಗಾಂಧಿ ಅವರ ಭಾರತ ಜೋಡೊ ಯಾತ್ರೆಯಿಂದ ಕಾಂಗ್ರೆಸ್‌ಗೆ ಸಂಜೀವಿನಿ ಸಿಕ್ಕಿದ್ದು ಹೊಸ ಹುಮ್ಮಸ್ಸು ಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಪರ ಅಲೆ ಬೀಸುತ್ತಿದ್ದು, ಸ್ಪಷ‌r ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು

Advertisement

Udayavani is now on Telegram. Click here to join our channel and stay updated with the latest news.

Next