Advertisement

ಜಸ್ಟಿಸ್‌ ಮಹೇಶ್ವರಿ, ಜಸ್ಟಿಸ್‌ ಖನ್ನಾ ಪ್ರಮಾಣ ವಚನ ಸ್ವೀಕಾರ

06:04 AM Jan 18, 2019 | udayavani editorial |

ಹೊಸದಿಲ್ಲಿ : ಜಸ್ಟಿಸ್‌ ದಿನೇಶ್‌ ಮಹೇಶ್ವರಿ ಮತ್ತು ಜಸ್ಟಿಸ್‌ ಸಂಜೀವ್‌ ಖನ್ನಾ ಅವರಿಂದು ಶುಕ್ರವಾರ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು. 

Advertisement

ವರಿಷ್ಠ ನ್ಯಾಯಮೂರ್ತಿ (ಸಿಜೆಐ) ರಂಜನ್‌ ಗೊಗೊಯ್‌ ಅವರು ಜಸ್ಟಿಸ್‌ ಮಹೇಶ್ವರಿ ಮತ್ತು ಖನ್ನಾ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಕೋರ್ಟ್‌ ನಂಬರ್‌ 1ರಲ್ಲಿ ಈ ವಿಧಿ ನಡೆಯಿತು. 

ಸುಪ್ರೀಂ ಕೋರ್ಟಿಗೆ ಮಂಜೂರಾಗಿರುವ ನ್ಯಾಯಮೂರ್ತಿಗಳ ಸಂಖ್ಯಾ ಬಲ 31; ಇದೀಗ ಜಸ್ಟಿಸ್‌ ಮಹೇಶ್ವರಿ ಮತ್ತು ಖನ್ನಾ ಅವರ ಸೇರ್ಪಡೆಯೊಂದಿಗೆ ನ್ಯಾಯಮೂರ್ತಿಗಳ ಸಂಖ್ಯೆ 28 ಕ್ಕೇರಿದೆ. 

ಜಸ್ಟಿಸ್‌ ಮಹೇಶ್ವರಿ ಅವರು ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿಯೂ ಜಸ್ಟಿಸ್‌ ಖನ್ನಾ ಅವರು ದಿಲ್ಲಿ ಹೈಕೋರ್ಟಿನ ನ್ಯಾಯಾದೀಶರಾಗಿಯೂ ಈ ಮೊದಲು ಕರ್ತವ್ಯ ನಿರ್ವಹಿಸುತ್ತಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next