Advertisement

ಜೈಲಿಂದ ಬಿಡುಗಡೆ ಬಳಿಕ ನ್ಯಾ|ಕರ್ಣನ್‌ ಪುಸ್ತಕ ಪ್ರಕಟ

08:24 AM Nov 18, 2017 | Harsha Rao |

ಚೆನ್ನೈ: ಸುಪ್ರೀಂಕೋರ್ಟ್‌ನಿಂದ 6 ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ನಿವೃತ್ತ ನ್ಯಾಯಮೂರ್ತಿ ಸಿ.ಎಸ್‌.ಕರ್ಣನ್‌ ಡಿ.10ರಂದು ಬಿಡುಗಡೆಯಾಗಲಿದ್ದಾರೆ. ಬಳಿಕ ಅವರು ಪುಸ್ತಕ ಬರೆಯಲಿದ್ದಾರೆ. ಅದರಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ವಿರುದ್ಧ ನೀಡಿರುವ 22 ತೀರ್ಪುಗಳನ್ನು ಪ್ರಕಟಿಸಲಿದ್ದಾರೆ. ಕೋಲ್ಕತಾ ಜೈಲಿನಲ್ಲಿ ಅವರನ್ನು ಭೇಟಿಯಾದ ಬಳಿಕ ಅವರ ವಕ್ತಾರ ಪೀಟರ್‌ ರಮೇಶ್‌ ಕುಮಾರ್‌ ಈ ಮಾಹಿತಿ ನೀಡಿದ್ದಾರೆ.

Advertisement

ಈ ಬಗ್ಗೆ ಎರಡು ಗಂಟೆಗಳ ಕಾಲ ಅವರ ಜತೆ ಚರ್ಚೆ ನಡೆಸಲಾಗಿದೆ. ಭ್ರಷ್ಟ ವ್ಯವಸ್ಥೆಗೆ ಶರಣಾಗದೇ ಇರಲು ಅವರು ನಿರ್ಧರಿಸಿದ್ದಾರೆ. ಅವರು ಬರೆಯುತ್ತಿರುವ ಪುಸ್ತಕ ಅಂತಿಮ ಹಂತದಲ್ಲಿದೆ ಎಂದೂ ರಮೇಶ್‌ ಹೇಳಿಕೊಂಡಿದ್ದಾರೆ.

ಶೀಘ್ರವೇ ಪುಸ್ತಕ ಪ್ರಕಟಣೆ ಕಾಣುವ ನಿಟ್ಟಿನಲ್ಲಿ ನ್ಯಾ| ಕರ್ಣನ್‌ ಹಲವು ವ್ಯಕ್ತಿಗಳನ್ನು ಸೇರಿಸಿಕೊಂಡು ಟ್ರಸ್ಟ್‌ ರಚಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಮೇ 9ರಂದು ಸುಪ್ರೀಂಕೋರ್ಟ್‌ ನ್ಯಾ| ಕರ್ಣನ್‌ಗೆ ಶಿಕ್ಷೆ ವಿಧಿಸಿತ್ತು. ರಮೇಶ್‌ ಕುಮಾರ್‌ ಕೂಡ  2016ರಲ್ಲಿ ಮದ್ರಾಸ್‌ ಹೈಕೋರ್ಟ್‌ನಿಂದ 6 ತಿಂಗಳ ಕಾಲ ಶಿಕ್ಷೆಗೆ ಗುರಿಯಾಗಿದ್ದರು. ಜತೆಗೆ 2 ಸಾವಿರ ದಂಡ ಮತ್ತು ವಕೀಲಿಕೆ ನಡೆಸದಂತೆ ಆದೇಶವನ್ನೂ ಪಡೆದುಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next