Advertisement

ಸುಪ್ರೀಂಕೋರ್ಟ್ ಮೊದಲ ಮಹಿಳಾ ನ್ಯಾಯಧೀಶ ಸ್ಥಾನಕ್ಕೆ ಕರ್ನಾಟಕದ ನಾಗರತ್ನ ಹೆಸರು ಶಿಫಾರಸು

10:34 AM Aug 18, 2021 | Team Udayavani |

ನವದೆಹಲಿ :  ಮುಂಬರುವ 2027ಕ್ಕೆ ಕರ್ನಾಟಕದ ಹೈಕೋರ್ಟ್ ನ್ಯಾಯಾಧೀಶೆ ಬಿ.ವಿ ನಾಗರತ್ನ ಸುಪ್ರೀಂ ಕೋರ್ಟ್‍ಗೆ ಮೊದಲ ಮಹಿಳಾ ನ್ಯಾಯಧೀಶರಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ.

Advertisement

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದಲ್ಲಿ, ಸುಪ್ರೀಂ ಕೋರ್ಟ್ ಕೊಲಿಜಿಯಂ ಒಂಬತ್ತು ನ್ಯಾಯಾಧೀಶರ ಹೆಸರನ್ನು ಉನ್ನತ ನ್ಯಾಯಾಲಯಕ್ಕೆ ನೇಮಕ ಮಾಡಲು ಶಿಫಾರಸು ಮಾಡಿದೆ. ಇದರಲ್ಲಿ ನಾಗರತ್ನ ಹೆಸರು ಕೂಡ ಇದೆ.

ನಾಗರತ್ನ ಅವರು ಸದ್ಯ ಕರ್ನಾಟಕದ ಹೈಕೋರ್ಟ್ ನಲ್ಲಿ ನ್ಯಾಯಧೀಶೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು 2008ರಲ್ಲಿ ಕರ್ನಾಟಕದ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಇದಾದ ಮೇಲೆ ಎರಡು ವರ್ಷಗಳ ನಂತರ ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡರು.

ನಾಗರತ್ನ ಒಂದು ತಿಂಗಳ ಅವಧಿಯ ಅಧಿಕಾರವನ್ನು ಹೊಂದುವ ಸಾಧ್ಯತೆಯಿದೆ. ಇವರ ನೇಮಕಾತಿ ದೇಶದ ನ್ಯಾಯಾಂಗಕ್ಕೆ ಐತಿಹಾಸಿಕ ಕ್ಷಣವಾಗಲಿದೆ. ಇನ್ನು ಇವರ ತಂದೆ ಕೂಡ ನ್ಯಾಯಮೂರ್ತಿಯಾಗಿ ಕೆಲಸ ಮಾಡಿದ್ದು,  ಜೂನ್ 1989 ಮತ್ತು ಡಿಸೆಂಬರ್ 1989ರವರೆಗೆ ಕಾರ್ಯ ನಿರ್ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next