ಬೆಂಗಳೂರು: ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿರುವ ರಿತುರಾಜ್ ಅವಸ್ತಿ ನಾಡಿದ್ದು ನಿವೃತ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯನ್ನಾಗಿ ಅಲೋಕ್ ಅರಾಧೆ ಅವರನ್ನು ನೇಮಕ ಮಾಡಲಾಗಿದೆ. ಸದ್ಯ ಅವರು ಕರ್ನಾಟಕ ಹೈಕೋರ್ಟ್ ನಲ್ಲಿ ಎರಡನೇ ಹಿರಿಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹೈಕೋರ್ಟ್ ನ್ಯಾಯಮೂರ್ತಿಗಳ ಸೇವಾ ಅವಧಿ 62 ವರ್ಷ ಇದೆ. ಹಾಲಿ ಸಿಜೆ ಜು.2ಕ್ಕೆ 62 ವರ್ಷ ಪೂರೈಸಲಿದ್ದಾರೆ. ಹಾಗಾಗಿ ಸೇವಾ ವಧಿ ಪೂರೈಸಿ ಅವರು ನಿವೃತ್ತರಾಗಲಿದ್ದಾರೆ. ಅವಸ್ಥೊ 2021ರ ಅ.10ರಿಂದ ಕರ್ನಾಟಕ ಹೈಕೋರ್ಟ್ ಸಿಜೆಯಾಗಿ ಅಧಿಕಾರ ಸ್ವೀಕರಿಸಿದ್ದರು. ಈ ನೇಮಕದ ಕುರಿತು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಮಾಹಿತಿ ನೀಡಿದ್ದಾರೆ.