Advertisement

ಸಾಫ್ಟ್ವೇರ್‌ ಇಷ್ಟ ಒಂದೊಂದ್ಸಲ ಕಷ್ಟ!

07:40 AM Sep 12, 2017 | Harsha Rao |

ಒಂದು ಕಾಲವಿತ್ತು. ಈಗಲೂ ಇದೆ! ತಮ್ಮ ಮಕ್ಕಳು ಇಂಜಿನಿಯರ್‌ ಆಗಲೇ ಬೇಕೆಂದು ಇಡೀ ಕುಟುಂಬ ಕಂಕಣಬದ್ಧವಾಗುತ್ತಿತ್ತು. ಅನುಕೂಲವಿಲ್ಲದಿದ್ದರೂ ಎಂಜಿನಿಯರಿಂಗ್‌ ಓದಿಸಬೇಕೆನ್ನುವ ಹಠಕ್ಕೆ ಬಿದ್ದು ಸಾಲ ಮಾಡುತ್ತಿದ್ದರು. ಮುಂದೆ ಹೇಗಿದ್ದರೂ ಇಂಜಿನಿಯರ್‌ ಕೆಲಸಕ್ಕೆ ಸೇರಿದ ಮಕ್ಕಳು ಲಕ್ಷ ಲಕ್ಷ ಎಣಿಸುವಾಗ ಸಾಲ ತೀರಿಸುವುದು ಕಷ್ಟವೇ ಅಲ್ಲ ಎಂಬ ಲೆಕ್ಕಾಚಾರ ಅವರಿಗೆಲ್ಲಾ ಇರುತ್ತಿತ್ತು. ಇಷ್ಟೊಂದು ಮಹತ್ವಾಕಾಂಕ್ಷೆಯಿಟ್ಟುಕೊಂಡು ಸಾಪ್ಟ್ವೇರ್‌ ಕ್ಷೇತ್ರಕ್ಕೆ ಬಂದವರಿಗೆ “ಪಿಂಕ್‌ ಸ್ಲಿಪ್‌’ ಪೆಂಡಭೂತವಾಗಿ ಕಂಡಿದ್ದರೆ ಆದರಲ್ಲಿ ಆಶ್ಚರ್ಯವೇನೂ ಇಲ್ಲ. ಸಾಫ್ಟ್ವೇರ್‌ ಇಂಜಿನಿಯರ್‌ ಆಂದ್ರೆ ಪಾರಿನ್‌ ಟ್ರಿಪ್ಪು, ದೊಡ್ಡ ಸಂಬಳ ಎಂದಷ್ಟೇ ಗೊತ್ತಿದ್ದವರು ಇದೀಗ ನಾನಾ ಕಾರಣಗಳಿಗೆ ಕೆಲಸದಿಂದ ವಂಚಿತರಾಗುವ ಸ್ಥಿತಿ ನಿಜಕ್ಕೂ ನರಕವೇ. ಆದರೆ ಜೀವನವೆಂಬ ಮಹಾಯಾನದಲ್ಲಿ ವೃತ್ತಿಯೆನ್ನುವುದು ಒಂದು ಸಣ್ಣ ಸ್ಟಾಪ್‌ ಅಷ್ಟೇ. ಮುಂದೆ ಕ್ರಮಿಸಬೇಕಾಗಿರುವ ಹಾದಿ ತುಂಬಾ ಇದೆ ಎನ್ನುವ ಸತ್ಯ ಅರಿತರೆ ಎಂಥಾ ಸಂದರ್ಭವೇ ಬರಲಿ, ಧೈರ್ಯದಿಂದ ಮುನ್ನುಗ್ಗಬಹುದು!

Advertisement

ಅಪ್ಪ ಅಮ್ಮಂದಿರಿಗೆ ತಮ್ಮ ಮಕ್ಕಳು ಇಂಜಿನಿಯರ್ರೆà ಆಗಬೇಕೆಂಬ ಕನಸು. ಅದರಲ್ಲೂ ಸಾಫ್ಟ್ವೇರ್‌ ಇಂಜಿನಿಯರ್‌. ಶತಾಯಗತಾಯ ಮಕ್ಕಳು ಕಂಪ್ಯೂಟರ್‌ ಸಂಬಂಧಿ ಕೋರ್ಸ್‌ಗಳಿಗೇ ಸೇರಲಿ ಎಂಬುದು ಅವರ ಹಂಬಲ. ಆದರೆ ಆ ಕ್ಷೇತ್ರ ಕೂಡ ಈಚೆಗೆ ಅಲುಗಾಡತೊಡಗಿದೆ. ಸಾಫ್ಟ್ವೇರ್‌ ಕಂಪನಿಗಳು ಯಾವುದೇ ಮುನ್ಸೂಚನೆ ನೀಡದೆ ನೌಕರರನ್ನು ತೆಗೆದು ಹಾಕುತ್ತಿವೆ. ಸಾಫ್ಟ್ವೇರ್‌ ಎಂದರೆ ಲೋಕದ ಪಾಲಿಗೆ ಹೆಚ್ಚಿನ ಸಂಬಳದ ಹು¨ªೆ ಎಂದರ್ಥ. ಅಂಥವರು ದಿಢೀರನೆ ಕೆಲಸ ಕಳೆದುಕೊಂಡರೆ ಮತ್ತೆ ಕೆಲಸ ಹುಡುಕುವುದು ಕಷ್ಟ. ಬೇರೆ ಕ್ಷೇತ್ರಗಳಲ್ಲಿ ಸಂಬಳವೂ ಕಡಿಮೆ, ಹಾಗಾಗಿ ಅದಕ್ಕೆ ಹೊಂದಿಕೊಳ್ಳುವುದು ಇನ್ನೂ ಕಷ್ಟ.

ಹೀಗೆ ಯೋಚಿಸುತ್ತಾ ಹೋದರೆ ತಲೆ ಗಿರ್ರೆನ್ನುವುದು ಖಚಿತ.
ಮುಂದಿನ ಐದು ವರ್ಷಗಳಲ್ಲಿ ಭಾರತದ ಐಟಿ ಸೇವೆಗಳ ಉದ್ಯಮವು ಕಡಿಮೆ ಕೌಶಲ್ಯ ಹೊಂದಿರುವ 6.4 ಲಕ್ಷ ಉದ್ಯೋಗಗಳನ್ನು  ಕಳೆದುಕೊಳ್ಳಲಿದೆ ಎಂದು ಅಮೆರಿಕ ಮೂಲದ ಸಂಶೋಧನಾ ಸಂಸ್ಥೆ ವರದಿ ಮಾಡಿದೆ.  2021ರ ಹೊತ್ತಿಗೆ ಸಮೀಕ್ಷೆಯೊಂದರ ಪ್ರಕಾರ, ಐಟಿ ಉದ್ಯಮವು ಜಗತ್ತಿನಾದ್ಯಂತ ಶೇಕಡ 9ರಷ್ಟು ಕಡಿಮೆಯಾಗುತ್ತದೆ. ಫಿಲಿಪೈ®Õ…, ಇಂಗ್ಲೆಂಡ್‌ ಮತ್ತು ಅಮೇರಿಕಾ ಮೂಲದ ಕಂಪನಿಗಳಲ್ಲಿ ಒಟ್ಟು 14 ಲಕ್ಷ ಉದ್ಯೋಗಗಳು ಕಡಿತಗೊಳ್ಳಲಿವೆ. ಅದರಲ್ಲಿ ಸರಿ ಸುಮಾರು 7ಲಕ್ಷ ಉದ್ಯೋಗಗಳು ಕಡಿತಗೊಳ್ಳುವುದು ಭಾರತದಲ್ಲಿ!

ಯಾವ ಉದ್ಯೋಗಗಳು ಕಡಿತಗೊಳ್ಳುತ್ತವೆ ?
ಶೈಕ್ಷಣಿಕ ಅರ್ಹತೆ ಹೆಚ್ಚು ಅಗತ್ಯವಿಲ್ಲ ಎಂದು ವ್ಯಾಖ್ಯಾನಿಸಲಾಗಿದ್ದ ಕಡಿಮೆ ಕೌಶಲ್ಯ ಹೊಂದಿರುವ ಉದ್ಯೋಗಗಳು, ಅಂದರೆ ಮುಖ್ಯವಾಗಿ ಐಟಿ-ಬಿ.ಪಿ.ಒ. ಉದ್ಯೋಗಗಳು, ಟೆಕ್ನಿಕಲ… ರೈಟಿಂಗ್‌ ಉದ್ಯೋಗಗಳು ಕಡಿಮೆಯಾಗುತ್ತವೆ. ಮ್ಯಾನುಯಲ… ಸಾಫ್ಟ್ವೇರ್‌ ಟೆಸ್ಟಿಂಗ್‌ ಉದ್ಯೋಗಗಳು ಸಹ ಸಂಕಷ್ಟದಲ್ಲಿವೆ. ಯಾವುದೇ ಡಿಗ್ರಿ ಮಾಡಿದ್ದರೂ ಸರಿಯೇ ಅಂಥವರಿಗೆ ಕಂಪ್ಯೂಟರ್‌ ಸೈನ್ಸ್‌ನ ಕೆಲವೇ ವಿಷಯ ಅರ್ಥ ಮಾಡಿಸುವಂಥ ಬೇರೊಂದು ಕೋರ್ಸ್‌ ಮಾಡಿಸಿ, ಅವರಿಗೆ ಹೆಚ್ಚುವರಿ ತರಬೇತಿಯನ್ನೂ ನೀಡಿ, ಇನ್ಮುಂದೆ ನೀವೂ ಸಾಫ್ಟ್ವೇರ್‌ ವರ್ಕರ್ರೆà ಎಂದು ಹೇಳಿ ಕೆಲವು ಕಂಪನಿಗಳು ಕೆಲಸ ಮಾಡಿಸಿಕೊಳ್ಳುತ್ತವೆ. ಅಂಥ ಕೆಲಸಗಳು ಕೊನೆಗೊಳ್ಳುತ್ತವೆ. ಡಾಟಾ ಎಂಟ್ರಿ ಕೆಲಸಗಳು, ಅಂದರೆ ದತ್ತಾಂಶವನ್ನು ಸೇರಿಸುವಂಥ ಕೆಲಸಗಳು. ಟೈಪಿಂಗ್‌ ಕೆಲಸಗಳು ಕೊನೆಗೊಳ್ಳುತ್ತವೆ. ಕಾರಣ, ಆಟೊಮೇಷನ್‌ ಅಳವಡಿಕೆಯಿಂದಾಗಿ ಈ ಕೆಲಸಗಳನ್ನು ಸಾಫ್ಟ್ವೇರ್‌ಗಳೇ ನಿರ್ವಹಿಸುತ್ತವೆ. ಒಟ್ಟಾರೆ ಈ ಉದ್ಯೋಗಗಳಿಗೆ 30%ರಷ್ಟು ಹೊಡೆತ ಬೀಳಲಿದೆ. 2022ರ ಸಮಯಕ್ಕೆ ಐಟಿ ಹಾಗೂ ಬಿಪಿಒ ವಲಯದಲ್ಲಿ  ಈಗಿರುವ 24 ಲಕ್ಷ ಉದ್ಯೋಗಗಳು 16.6 ಲಕ್ಷಕ್ಕೆ ಕುಸಿಯಬಹುದು.

ಯಾವ ಉದ್ಯೋಗಗಳು ಜಾಸ್ತಿ ಆಗುತ್ತವೆ ?
ಸಾಧಾರಣ-ಕೌಶಲ್ಯದ ಉದ್ಯೋಗಗಳು 8% ರಷ್ಟು ಹೆಚ್ಚಾಗುತ್ತವೆ. ಇವುಗಳಲ್ಲಿ ಆಟೋಮೇಷನ್‌ ಟೆಸ್ಟಿಂಗ್‌, ಪ್ರೊಡಕ್ಷನ್‌ ಸಪೋರ್ಟ್‌ನಂಥ ಉದ್ಯೋಗಗಳು ಸೇರಿಕೊಳ್ಳುತ್ತವೆ. ಇಂಥ ಕೆಲಸಗಳು 1 ಲಕ್ಷದಷ್ಟು ಏರಿಕೆ ಆಗಬಹುದು. ಬಹುಮುಖ್ಯವಾಗಿ ಉನ್ನತ-ಕೌಶಲ್ಯದ ಉದ್ಯೋಗಗಳು 56%ರಷ್ಟು ಏರಿಕೆಯಾಗುತ್ತವೆ. ಇವುಗಳಲ್ಲಿ ಸಾಫ್ಟ್ವೇರ್‌ ಡೆವಲಪೆ¾ಂಟ್‌, ಕೋಡಿಂಗ್‌ನಲ್ಲಿ ಸೃಜನಾತ್ಮಕ ಸಮಸ್ಯೆಗೆ ಪರಿಹಾರ ನೀಡುವುದು, ವಿಶ್ಲೇಷಣೆ ಮತ್ತು ನಿರ್ಣಾಯಕ ಚಿಂತನೆಯ ಕೆಲಸಗಳು ಜಾಸ್ತಿಯಾಗಲಿವೆ. ಅದೇ ರೀತಿ ನೂತನ ತಂತ್ರಾಂಶಗಳಲ್ಲಿ ಕೌಶಲ್ಯ ಹೊಂದಿರುವ ಕೆಲಸಗಳು ಜಾಸ್ತಿಯಾಗಲಿವೆ. ಇಂಥ ಕೆಲಸಗಳು 3.2 ಲಕ್ಷದಿಂದ 5.5 ಲಕ್ಷದವರೆಗೂ ಏರಿಕೆ ಆಗಬಹುದು.

Advertisement

ಒಂದು ಘಟನೆ
2017ರಲ್ಲಿಯೇ ಅನೇಕ ಕಂಪನಿಗಳು ನೌಕರರನ್ನು ಹಿಂದುಮುಂದು ನೋಡದೆ ಕೆಲಸದಿಂದ ತೆಗೆದಿವೆ. ಮನೋಜ್‌ಗೆ ಮದುವೆ ಆಗಿ 3 ವರ್ಷ ಕಳೆದಿತ್ತು. ಬೆಂಗಳೂರಿನ ಪ್ರತಿಷ್ಠಿತ ಸಾಫ್ಟ್ವೇರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಒಂದು ದಿನ ದಿಢೀರನೆ ಮ್ಯಾನೇಜರ್‌ ಮತ್ತು ಎಚ್‌.ಆರ್‌. ಅವನನ್ನು ಕರೆದು, “ನೀವಾಗಿಯೇ ರಾಜೀನಾಮೆ ನೀಡಿ. ನಿಮ್ಮನ್ನು ಕೆಲಸದಿಂದ ತೆಗೆದು ಹಾಕಲಾಗುತ್ತಿದೆ’ ಎಂದಾಗ ಆಘಾತಗೊಂಡಿದ್ದ. ಹೌದು ಎಚ್‌.ಆರ್‌. ಗಳು ಹೆದರಿಸುವುದೇ ಹಾಗೆ. ನಾವಾಗಿಯೇ ಕೆಲಸದಿಂದ ತೆಗೆದರೆ ನಿಮ್ಮ ಪರ್ಫಾರ್ಮೆ®Õ… ಚೆನ್ನಾಗಿಲ್ಲ ಎಂದು ಎಕ್ಸ್‌ಪೀರಿಯೆ®Õ… ಲೆಟರ್‌ನಲ್ಲಿ ಬರೆಯಲಾಗುವುದು. ಅದಕ್ಕೆ ನೀವೇ ರಾಜೀನಾಮೆ ನೀಡಿ ಎಂದು ಹೇಳುತ್ತಾರೆ. ಅವನು ತೆಗೆಯದಿರುವಂತೆ ಪರಿ ಪರಿಯಾಗಿ ಕೇಳಿಕೊಂಡ. ಕಂಗಾಲಾಗಿ ಹೋದ. ಅತಂತ್ರ ಮನಸ್ಥಿತಿಯನ್ನು ನಿಬಾಯಿಸುವುದೂ ಒಂದು ಕಲೆ. ಅದನ್ನು ನಿರ್ವಹಿಸುವುದು ತಿಳಿದಿದ್ದರೆ ಎಂಥ ಸಂಕಷ್ಟವೂ ಹೊರೆಯಾಗುವುದಿಲ್ಲ. ಕೆಟ್ಟ ಘಳಿಗೆಗಳಲ್ಲಿ ಮನಸ್ಸು ಕೆಟ್ಟ ಯೋಚನೆಗಳಿಗೆ ನಿರ್ಧಾರಗಳಿಗೆ ಸೋಲುವುದಿಲ್ಲ. ಇದಲ್ಲದಿದ್ದರೆ ಇನ್ನೊಂದು ದಾರಿ ಎಂಬ ಮನೋಭಾವವೊಂದಿದ್ದರೆ ಇಂಥ ಸನ್ನಿವೇಶದಿಂದ ಸಲೀಸಾಗಿ ಪಾರಾಗಿಬಿಡಬಹುದು.

ಭಯ ಬೇಡ
ಆದರು ಅಷ್ಟೊಂದು ಭಯಪಡುವ ಅಗತ್ಯವಿಲ್ಲ. ನಾಸ್ಕಾಂ ಉಪಾಧ್ಯಕ್ಷೆ ಸಂಗೀತಾ ಗುಪ್ತ ಅವರ ಪ್ರಕಾರ, ಆಟೊಮೇಷನ್‌ ಅಳವಡಿಕೆಯಿಂದ ಉದ್ಯೋಗಗಳ ಮೇಲೆ ಸ್ವಲ್ಪ ಪ್ರಭಾವ ಬೀರಿದರೂ ನೂತನ ತಂತ್ರಾಂಶ ಮತ್ತು ಕೌಶಲ್ಯಗಳ ಕಲಿಕೆಯಿಂದ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದವರು ಹೇಳುತ್ತಾರೆ. ಒಟ್ಟಾರೆ ಒಂದೊಳ್ಳೆ ಕಂಪನಿಯಲ್ಲಿ ವರ್ಷಾನುಗಟ್ಟಲೆ  ಒಂದೇ ಕೆಲಸ ಮಾಡುತ್ತಾ ಆರಾಮವಾಗಿ ಜೀವನ  ಸಾಗಿಸುವುದನ್ನು ಬಿಟ್ಟು, ಹೊಸ ತಂತ್ರಾಂಶ ಮತ್ತು ಕೌಶಲ್ಯಗಳನ್ನೂ ಕಲಿಯುತ್ತ, ಉನ್ನತ ಕೆಲಸಗಳಲ್ಲಿ ಅನುಭವ ಪಡೆಯುತ್ತಾ ಸಾಗಿದರೆ ಕೆಲಸ ಕಳೆದುಕೊಳ್ಳುವ ಅಪಾಯದಿಂದ ದೂರವಿರಲು ಸಾಧ್ಯ.

ಪರಿಹಾರ ಮತ್ತು ಯಾವ ಕೋರ್ಸ್‌ ತೆಗೆದುಕೊಂಡರೆ ಸೂಕ್ತ?
ಭಾರತದಲ್ಲಿ ಎಲೆಕ್ಟ್ರಾನಿಕ್ ಉದ್ಯೋಗಗಳಿಗೆ ಜಾಸ್ತಿ ಬೇಡಿಕೆ ಇಲ್ಲ. ಆದ್ದರಿಂದ ಇಂಜಿನಿಯರಿಂಗ್‌ನಲ್ಲಿ ಕಂಪ್ಯೂಟರ್‌ ಸೈ®Õ… ಸೂಕ್ತವೇ, ಕೋರ್ಸ್‌ ಯಾವುದು ಎನ್ನುವುದಕ್ಕಿಂತ ಮುಖ್ಯವಾಗಿ ಕೌಶಲ್ಯಗಳು ಬಹು ಮುಖ್ಯ. ಮೆಕ್ಯಾನಿಕಲ್ ಇಂಜಿನಿಯರಿಂಗ್‌ ಓದಿದರೂ ಸಹ ಐ.ಟಿ ಕ್ಷೇತ್ರದಲ್ಲಿ ಹೆಚ್ಚು ಸಾಧಿಸಿದವರು ಇ¨ªಾರೆ.
ಕಾರಣ ಇಷ್ಟೇ, ನಮ್ಮ ಪಠ್ಯಕ್ರಮದಲ್ಲಿ ನೂತನ ವಿಷಯಗಳಿಲ್ಲ. ನಾವು ನೂತನ ವೆಬ್‌ ಫ್ರೆàಮ್‌ ವರ್ಕ್‌ ಮತ್ತು ಹೊಸ ಕೋಡಿಂಗ್‌ ಭಾಷೆಗಳನ್ನು ಕಲಿಯುವುದು ಅವಶ್ಯಕ ಯಾವುದಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇದೆಯೋ ಅದನ್ನು ಕಲಿಯಬೇಕು. ಈಗೀಗ ಆರ್ಟಿಫಿಷಿಯಲ್ ಇಂಟಲಿಜೆನ್ಸ್, ಡಾಟಾ ಅನಲಿÓr…, ಕೋಡಿಂಗ್‌ನಲ್ಲಿ ಪೈಥಾನ್‌ ಮತ್ತು ನೋಡ್‌-ಜೆಎಸ್‌ಗಳಿಗೆ ಹೆಚ್ಚಿನ ಬೇಡಿಕೆ. ಈಗಲೂ ಜಾವಾ, ಸಿ ಕೋರ್ಸ್‌ಗೆ ಮಾತ್ರ ಜೋತು ಬಿದ್ದರೆ ಸಮಸ್ಯೆ ತಲೆದೋರಬಹುದು. 

ಸಾಫ್ಟ್ವೇರ್‌ ಕ್ಷೇತ್ರದ ಹೆಚ್ಚಿನ ಕಂಪನಿಗಳು ಆಟೊಮೇಷನ್‌ ಹಾಗೂ ಆರ್ಟಿಫಿಷಿಯಲ… ಇಂಟೆಲಿಜೆ®Õ… ಅಳವಡಿಸಿಕೊಳ್ಳುತ್ತಿರುವುದರಿಂದಾಗಿ ಕಡಿಮೆ-ಕೌಶಲ್ಯ ಹೊಂದಿರುವ ಉದ್ಯೋಗಗಳು 30% ರಷ್ಟು ಕಡಿಮೆಯಾದರೂ, ಒಂದು ಒಳ್ಳೆಯ ಸಮಾಚಾರ ಅಂದರೆ  ಸಾಧಾರಣ-ಕೌಶಲ್ಯ ಉದ್ಯೋಗಗಳು 8%ರಷ್ಟು ಹೆಚ್ಚಾಗುತ್ತವೆ ಮತ್ತು ಉನ್ನತ-ಕೌಶಲ್ಯ ಉದ್ಯೋಗಗಳು 56% ರಷ್ಟು ಏರಿಕೆಯಾಗುತ್ತವೆ ಎಂದು ವರದಿ ಹೇಳುತ್ತದೆ.

-ಪ್ರವೀಣ್‌ ದಾನಗೌಡ, ಸೀನಿಯರ್‌ ಸಾಫ್ಟ್ವೇರ್‌ ಇಂಜಿನಿಯರ್‌, ಬೆಂಗಳೂರು
 

Advertisement

Udayavani is now on Telegram. Click here to join our channel and stay updated with the latest news.

Next