Advertisement

ಹೊಳೆಯುವ “ಗುರು’ಸೆರೆಹಿಡಿದ “ಜೇಮ್ಸ್‌ ವೆಬ್‌ ಟೆಲಿಸ್ಕೋಪ್‌’

09:00 PM Aug 01, 2022 | Team Udayavani |

ವಾಷಿಂಗ್ಟನ್‌: ಬಾಹ್ಯಾಕಾಶದ ಅಧ್ಯಯನಕ್ಕಾಗಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ನಭಕ್ಕೆ ಕಳುಹಿಸಿರುವ, ವಿಶ್ವದ ಅತಿ ಶಕ್ತಿಶಾಲಿ ದೂರದರ್ಶಕ ಯಂತ್ರವೆಂದೇ ಖ್ಯಾತಿ ಪಡೆದಿರುವ ಜೇಮ್ಸ್‌ ವೆಬ್‌ ಟೆಲಿಸ್ಕೋಪ್‌, ಗುರುಗ್ರಹದ ಒಂದಿಷ್ಟು ಚಿತ್ರಗಳನ್ನು ಸೆರೆಹಿಡಿದು ನಾಸಾಕ್ಕೆ ಕಳುಹಿಸಿದೆ.

Advertisement

ಈವರೆಗೆ ಗುರುಗ್ರಹದ ಹಲವಾರು ಚಿತ್ರಗಳನ್ನು ಸೆರೆಹಿಡಿಯಲಾಗಿದೆಯಾದರೂ, ಜೇಮ್ಸ್‌ ವೆಬರ್‌ ಕಳುಹಿಸಿರುವ ಚಿತ್ರ ನೋಡುಗರಿಗೆ ಹೊಸ ಆಹ್ಲಾದ ಉಂಟು ಮಾಡುತ್ತದೆ. ಕಪ್ಪುಬಿಳುಪಿನ ಈ ಚಿತ್ರದಲ್ಲಿ ಗುರುಗ್ರಹ ಕತ್ತಲೆಯ ಬಾಹ್ಯಾಕಾಶದ ಹಿನ್ನೆಲೆಯಲ್ಲಿ ದೊಡ್ಡ ಹೊಳೆಯುವ ಗೋಳವಾಗಿ ಕಾಣಿಸುತ್ತದೆ.

ಗುರುಗ್ರಹದ ಮೇಲಿನ ದೊಡ್ಡ ಚುಕ್ಕಿಯಂತೂ (ಗ್ರೇಟ್‌ ರೆಡ್‌ ಸ್ಪಾಟ್‌) ಹೆಚ್ಚು ಪ್ರಕಾಶಮಾನವಾಗಿ ಕಾಣಿಸುತ್ತದೆ. ಜೇಮ್ಸ್‌ ವೆಬ್‌ನಲ್ಲಿರುವ ನಿಯರ್‌ ಇನ್‌ಫ್ರಾರೆಡ್‌ ಕ್ಯಾಮೆರಾದ (ಎನ್‌ಐಆರ್‌ ಕ್ಯಾಮ್‌) ಸಹಾಯದಿಂದ ಈ ಚಿತ್ರವನ್ನು ಜು. 27ರಂದು ಸೆರೆಹಿಡಿಯಲಾಗಿದೆ ಎಂದು ನಾಸಾ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next