ಕುಮಟಾ: ಪಟ್ಟಣದ ಸುಮೇಗಾ ಸೌಂಡ್ ರೆಕಾರ್ಡಿಂಗ್ ಸ್ಟುಡಿಯೋಗೆ ಜ್ಯೂನಿಯರ್ ಪುನೀತ್ ಎಂದೇ ಹೆಸರಾದ ಉಡುಪಿಯ ಸಾಸ್ತಾನದ ಪ್ರವೀಣ ಆಗಮಿಸಿದ್ದು, ಪುನೀತ್ ರಾಜಕುಮಾರ್ ಅವರ ನೆನಪಿಗಾಗಿ ಸುಮೇಗಾ ಸ್ಟುಡಿಯೋ ಮಾಲೀಕ ಅಶೋಕ ಪಾಲೇಕರ್ ರಚಿಸಿದ ಹಾಡೊಂದನ್ನು ಹಾಡಿದ್ದಾರೆ.
ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿರುವ ಪ್ರವೀಣ ಆಚಾರ್ಯ ಅಪ್ಪುವನ್ನು ಅನುಕರಣೆ ಮಾಡುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಪುನೀತ್ ರಾಜಕುಮಾರ ಅವರ ಸಿನಿಮಾ ಹಾಡು ಹಾಗೂ ಡೈಲಾಗ್ ಡಬ್ ಮಾಡುವ ಇವರು ಪುನೀತ್ ರಾಜಕುಮಾರ್ ಅವರ ಅಪ್ಪಟ್ಟ ಅಭಿಮಾನಿ.
ಈ ಕುರಿತು ಉದಯವಾಣಿಯೊಂದಿಗೆ ಮಾಹಿತಿ ಹಂಚಿಕೊಂಡ ಅವರು, ಚಿಕ್ಕವನಿರುವಾಗ ಜನ ನನಗೆಪುನೀತ್ ರಾಜಕುಮಾರ್‌ನಂತೆ ಕಾಣುತ್ತಿಯಾ ಎಂದು ಹೇಳುತ್ತಿದ್ದರು. ಈಗ ಅವರ ನಿಧನದ ನಂತರ ಜನ ನನ್ನನ್ನು ಗುರುತಿಸುವುದು ಹೆಚ್ಚಾಯಿತು. ಇದು ಒಂದುಕಡೆ ಖುಷಿಯಾದರೆ ಇನ್ನೊಂದೆಡೆ ಪುನೀತ್ ಇಲ್ಲಎನ್ನುವ ನೋವು ಕಾಡುತ್ತದೆ. ಸದಾ ಕೆಲಸದಲ್ಲಿ ಬ್ಯುಸಿ ಆಗಿರುವ ನನಗೆ ಪುನೀತ್ ಅವರಂತೆ ಹಾಡು, ನಟನೆ, ಡಾನ್ಸ್ ಮಾಡಬೇಕೆಂಬ ಆಸೆ ಇದ್ದರೂ ಇದ್ಯಾವುದಕ್ಕೂ ಸಮಯ ನೀಡಲು ಆಗುತ್ತಿರಲಿಲ್ಲ. ಜೊತೆಗೆ ಅವಕಾಶ ಸಿಕ್ಕಿರಲಿಲ್ಲ. ಇದೀಗ ಪಾಲೇಕರ್ ಅವರು ಪುನೀತ್‌ಅವರ ಕುರಿತು ಸಾಹಿತ್ಯವೊಂದನ್ನು ರಚಿಸಿದ್ದು ನನ್ನ ಬಳಿ ಹಾಡುವಂತೆ ಕೇಳಿಕೊಂಡಿದ್ದಾರೆ.
ಸಂಗೀತದ ಕುರಿತು ಅಷ್ಟಾಗಿ ತಿಳಿಯದ ನಾನು ಅವರು ತಿಳಿಸಿದಂತೆ ಹಾಡಲು ಪ್ರಯತ್ನಿಸುತ್ತೇನೆ ಎನ್ನುತ್ತಾರೆ. ಪುನೀತ್ ಅವರ ಸಹಾಯದ ಮನೋಭಾವ, ವಕ್ತಿತ್ವ, ಸಮಾಜಮುಖೀ ಕಾರ್ಯಗಳ ಕುರಿತು ಸಾಹಿತ್ಯವನ್ನು ಅವರೇ ರಚಿಸಿ, ಅವರೇ ಸಂಗೀತ ನಿರ್ದೇಶನ ಮಾಡಲಿದ್ದು ಅದನ್ನು ನನ್ನಮೂಲಕ ಹಾಡಿಸಲಿದ್ದಾರೆ. ಇದು ನನಗೆ ಸಿಕ್ಕ ಅದೃಷ್ಟದ ಅವಕಾಶ. ಖಂಡಿತವಾಗಿ ಅವರ ತರಬೇತಿಯಲ್ಲಿ ನನ್ನಕೈಲಾದ ಮಟ್ಟಿಗೆ ಹಾಡುವ ಪ್ರಯತ್ನ ಮಾಡುತ್ತೇನೆ ಎಂದು ಹರ್ಷ ವ್ಯಕ್ತಪಡಿಸಿದರು.