Advertisement

Jungle Raj: ಆರ್‌ ಜೆಡಿ ಮುಖಂಡನ ಬೆನ್ನಟ್ಟಿ ಗುಂಡಿಟ್ಟು ಹ*ತ್ಯೆ- ಆರೋಪಿಗಳು ಪರಾರಿ

12:22 PM Aug 21, 2024 | Team Udayavani |

ಹಾಜಿಪುರ್(ಬಿಹಾರ): ಲಾಲುಪ್ರಸಾದ್‌ ಯಾದವ್‌ ನೇತೃತ್ವದ ಆರ್‌ ಜೆಡಿ (RJD) ಪಕ್ಷದ ಮುಖಂಡ, ಸ್ಥಳೀಯ ಕೌನ್ಸಿಲರ್‌ ಪಂಕಜ್‌ ರಾಯ್‌ ಅವರನ್ನು ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಹೋಗಿ ಗುಂಡಿಕ್ಕಿ ಹ*ತ್ಯೆಗೈದಿರುವ ಘಟನೆ ಬಿಹಾರದ ಹಾಜಿಪುರ್‌ ನಲ್ಲಿ ನಡೆದಿದೆ.

Advertisement

ಪಂಕಜ್‌ ಆರ್‌ ಜೆಡಿ ಪಕ್ಷದಿಂದ ಮೊದಲ ಬಾರಿಗೆ ಕೌನ್ಸಿಲರ್‌ ಆಗಿ ಆಯ್ಕೆಯಾಗಿದ್ದರು. ಪಂಕಜ್‌ ತಮ್ಮ ಮನೆ ಸಮೀಪವೇ ಬಟ್ಟೆ ಅಂಗಡಿಯನ್ನು ನಡೆಸುತ್ತಿದ್ದು, ಮಂಗಳವಾರ (ಆ.20) ಸಂಜೆ ಮೂವರು ದುಷ್ಕರ್ಮಿಗಳು ಬೈಕ್‌ ನಲ್ಲಿ ಆಗಮಿಸಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಪಂಕಜ್‌ ತನ್ನನ್ನು ರಕ್ಷಿಸಿಕೊಳ್ಳಲು ಮನೆಯತ್ತ ಓಡಿದ್ದರು. ಆದರೆ ಬೈಕ್‌ ನಲ್ಲಿ ಬೆನ್ನಟ್ಟಿ ಹೋದ ದುಷ್ಕರ್ಮಿಗಳು ಹಲವು ಸುತ್ತಿನ ಗುಂಡಿನ ದಾಳಿ ನಡೆಸಿದ ಪರಿಣಾಮ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.

ಗುಂಡಿನ ಶಬ್ದ ಕೇಳಿ ಮನೆಯೊಳಗಿದ್ದ ಕುಟುಂಬ ಸದಸ್ಯರು, ಸ್ಥಳೀಯರು ಹೊರಗೆ ಬಂದಾಗ, ಪಂಕಜ್‌ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ವೈದ್ಯರು ಪಂಕಜ್‌ ಸಾವನ್ನಪ್ಪಿರುವುದಾಗಿ ತಿಳಿಸಿದ್ದರು.

content-img

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮತ್ತು ಮೈತ್ರಿಕೂಟ ಎನ್‌ ಡಿಎ ಸರ್ಕಾರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿರುವುದಾಗಿ ಆರ್‌ ಜೆಡಿ ನಾಯಕ ತೇಜಸ್ವಿ ಯಾದವ್‌ ಆರೋಪಿಸಿದ್ದಾರೆ.

Advertisement

ನಿತೀಶ್‌ ಕುಮಾರ್‌ ನೇತೃತ್ವದ ಎನ್‌ ಡಿಎ ಗೂಂಡಾಗಳು ಕೌನ್ಸಿಲರ್‌ ಪಂಕಜ್‌ ರಾಯ್‌ ಅವರನ್ನು ಗುಂಡಿಟ್ಟು ಕೊ*ಲೆಗೈದಿರುವುದಾಗಿ ಯಾದವ್‌ ದೂರಿದ್ದಾರೆ.

ಇದನ್ನೂ ಓದಿ:Sonakshi Sinha: ಮದುವೆಯಾದ ಎರಡು ತಿಂಗಳೊಳಗೆಯೇ ಮನೆ ಮಾರಾಟಕ್ಕೆ ಮುಂದಾದ ನಟಿ ಸೋನಾಕ್ಷಿ

Advertisement

Udayavani is now on Telegram. Click here to join our channel and stay updated with the latest news.