Advertisement

ಹೆದ್ದಾರಿಯಲ್ಲಿ ಜಂಗಲ್‌ ಗಿಡಗಳು: ತೊಂದರೆ

05:10 PM Sep 09, 2021 | Team Udayavani |

ಗುಬ್ಬಿ: ರಾಜ್ಯ ಹೆದ್ದಾರಿ 84ರ ಶಿರಾ- ನಂಜನಗೂಡು ರಸ್ತೆಯ ಎರಡು ಬದಿಯಲ್ಲಿ ಜಂಗಲ್‌ ಗಿಡಗಳು ಸೇರಿದಂತೆ ಬೃಹತ್‌ ಪ್ರಮಾಣದಲ್ಲಿ ಬೇಲಿ ಗಿಡಗಳು ಬೆಳೆದಿದ್ದು, ಆ ಗಿಡಗಳನ್ನು ಸ್ವಚ್ಛಗೊಳಿಸಿ ವಾಹನ ಸವಾರರಿಗೆ ಓಡಾಡುವುದಕ್ಕೆ ಅನುಕೂಲ ಮಾಡಿಕೊಡುವಲ್ಲಿ ಪಿಡಬ್ಲೂಡಿ ಇಲಾಖೆ ಸಂಪೂರ್ಣ ವಿಫ‌ಲಗೊಂಡಿದೆ.

Advertisement

ಗುಬ್ಬಿ ಪಟ್ಟಣದಿಂದ ಚನ್ನಶೇಟ್ಟಿಹಳ್ಳಿ, ಅಮ್ಮನಘಟ್ಟ, ತಿಪ್ಪೂರು ಗ್ರಾಮಗಳು ಸೇರಿದಂತೆ ಚೇಳೂರು ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ-04ಕ್ಕೆ ಸಂಪರ್ಕಿಸುವ ಈ ರಸ್ತೆಯ ಎರಡುಬದಿಯಲ್ಲಿ ಜಂಗಲ್‌ ಗಿಡಗಳು ಬೆಳೆದಿದ್ದು, ವಾಹನ ಸವಾರರು ದಿನನಿತ್ಯ ಓಡಾಡುವಾಗ ತೊಂದರೆ
ಅನುಭವಿಸುವಂತಾಗಿದೆ.

ಕಾಡು-ಪ್ರಾಣಿಗಳ ಭಯ: ರಾಜ್ಯ ಹೆದ್ದಾರಿ 84ರ ಶಿರಾ-ನಂಜನಗೂಡು ಹೆದ್ದಾರಿ ರಸ್ತೆಯು ಗ್ರಾಮೀಣಾ ಭಾಗದಲ್ಲಿ ಹಾದು ಹೋಗಿದ್ದು, ಇಲ್ಲಿನ
ಗ್ರಾಮಗಳ ಅಕ್ಕಪಕ್ಕದ ತೋಟಗಳಲ್ಲಿ ಚಿರತೆ, ಕರಡಿ ಸೇರಿದಂತೆ ಹಲವು ಕಾಡು ಪ್ರಾಣಿಗಳು ಕಾಣಿಸಿಕೊಳ್ಳುತ್ತಿರುವುದು ಜನರನ್ನು ಭಯ ಭೀತರನ್ನಾಗಿಸಿದೆ. ರಸ್ತೆಯ ಇಕ್ಕೆಲ ಗಳಲ್ಲಿ ಗುಂಪು- ಗುಂಪಾಗಿ ಬೆಳೆದಿರುವ ಪೊದೆಗಳಲ್ಲಿ ಕಾಡು ಪ್ರಾಣಿಗಳು ಆಡಗಿ ಕುಳಿತು ಕೊಳ್ಳುವುದಕ್ಕೆ ಸಹಕಾರಿಯಾಗಿದೆ. ಸಂಬಂಧಪಟ್ಟ ಇಲಾಖೆ ಯವರು ಇದನ್ನು ಪರಿಹರಿಸ ಬೇಕಾಗಿದೆ.

ಇದನ್ನೂ ಓದಿ:ಮತ್ತೋರ್ವ ಸಹಾಯಕ ಸಿಬ್ಬಂದಿಗೆ ಕೋವಿಡ್: ಅಭ್ಯಾಸ ಸ್ಥಗಿತಗೊಳಿಸಿದ ಟೀಂ ಇಂಡಿಯಾ

ತಿರುವುಗಳು ಹೆಚ್ಚಾಗಿ ಬರುವ ಈ ಹೆದ್ದಾರಿಯಲ್ಲಿ ಎದುರುಗಡೆಯಿಂದ ಬರುವ ವಾಹನಗಳು ಸರಿಯಾಗಿ ಕಾಣಿಸುವುದಿಲ್ಲ. ರಾತ್ರಿ ವೇಳೆಯಲ್ಲಿ ಈ ರಸ್ತೆಯಲ್ಲಿ ಓಡಾಡುವುದಕ್ಕೆ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾಗಿದ್ದು, ದೊಡ್ಡ ವಾಹನಗಳು ಎದುರುಗಡೆ ಬಂದಾಗ ‌ ರಸ್ತೆಯ
ಕೆಳಕ್ಕೆ ಇಳಿಸುವುದಕ್ಕೂ ಆಗುವುದಿಲ್ಲ. ಅಪಘಾತಗಳಿಗೆ ಎಡೆ ಮಾಡಿಕೊಟ್ಟಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಬೇಕಿದೆ ಎಂದು ಸ್ಥಳೀಯ ಗ್ರಾಮಸ್ಥರು ಆಗ್ರಹಿದ್ದಾರೆ.

Advertisement

ಚನ್ನಶೆಟ್ಟಿಹಳ್ಳಿ, ಅಮ್ಮನಘಟ್ಟ ಸೇರಿದಂತೆ ತಿಪ್ಪೂರು ಗ್ರಾಮಗಳಿಂದ ವಿವಿಧಕೆಲಸ ನಿಮಿತ್ತ ಪಟ್ಟಣಕ್ಕೆ ಈ ರಸ್ತೆಯಲ್ಲೆ ಬರಬೇಕು. ಸಂಜೆ
ಇದೆ ರಸ್ತೆಯಲ್ಲೇ ಹೋಗಬೇಕು.ಕಾಡು ಪ್ರಾಣಿಗಳು ಸೇರಿದಂತೆಕಳ್ಳರ ಭಯದ ಜತೆಗೆ ದಿನಕಳೆಯುವಂತಾಗಿದೆ.
-ಯತೀಶ್‌, ಸ್ಥಳೀಯ

ರಾಜ್ಯ ಹೆದ್ದಾರಿಗಳ ಅಕ್ಕಪಕ್ಕದಲ್ಲಿ ಬೆಳೆದಿರುವ ಜಂಗಲ್‌ ಗಿಡಹಾಗೂ ಪೊದೆಗಳನ್ನು ತೆಗೆಯಲು ಈಗಾಗಲೇ ಟೆಂಡರ್‌ ಪ್ರಕ್ರಿಯೆಯ ಹಂತದಲ್ಲಿದ್ದು, ಆದಷ್ಟು ಬೇಗ ರಸ್ತೆ ಬದಿಯ ಗಿಡಗಳನ್ನು ಸ್ವಚ್ಛಗೊಳಿಸಲುಕ್ರಮ ವಹಿಸುತ್ತೇನೆ.
-ವಿಜಯ್‌ಕುಮಾರ್‌, ಪಿಡಬ್ಲೂಡಿ ಎಂಜಿನಿಯರ್‌, ಗುಬ್ಬಿ

-ಕೆಂಪರಾಜು ಜಿ.ಆರ್‌

Advertisement

Udayavani is now on Telegram. Click here to join our channel and stay updated with the latest news.

Next