Advertisement

ದೇಶದಲ್ಲಿ ಜಂಗಲ್‌ರಾಜ್‌ ವ್ಯವಸ್ಥೆ: ಖಂಡ್ರೆ ಟೀಕೆ

07:03 AM Oct 15, 2018 | |

ಚಿಕ್ಕಮಗಳೂರು: ಎನ್‌ಡಿಎ ಸರ್ಕಾರದ ಅವಧಿಯಲ್ಲಿ ದೇಶದಲ್ಲಿ ಜಂಗಲ್‌ರಾಜ್‌ ವ್ಯವಸ್ಥೆ ಇದೆ. ಇಂತಹ ಭಯಾನಕ ವಾತಾವರಣ ಹಿಂದೆ ಯಾವತ್ತೂ ಸೃಷ್ಟಿಯಾಗಿರಲಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಟೀಕಿಸಿದರು. ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಅವರು, ದೇಶದಲ್ಲಿ ಆತಂಕ, ಭಯದ ವಾತಾವರಣವಿದೆ. ಶೋಷಿತರು, ಅಲ್ಪಸಂಖ್ಯಾತರು, ಮಹಿಳೆಯರು, ಬಡವರ ಮೇಲೆ ನಿರಂತರ ದಬ್ಟಾಳಿಕೆ ನಡೆಯುತ್ತಿದೆ. ಇಂತಹ ಶೋಷಿತರ, ಬಡ, ರೈತ ವಿರೋಧಿ ಸರ್ಕಾರವನ್ನು ಬುಡಸಮೇತ ಕಿತ್ತು ಹಾಕಿ ರಾಹುಲ್‌ ಗಾಂಧಿ ಅವರನ್ನು ಪ್ರಧಾನಿ ಮಾಡಲು ಕಾಂಗ್ರೆಸ್‌ ಜನಸಂಪರ್ಕ ಆಂದೋಲನ
ಹಮ್ಮಿಕೊಂಡಿದೆ. ಪ್ರತಿ ಮನೆಮನೆಗೆ ಹೋಗಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನತೆ ಮುಂದಿಡಲಾಗುವುದು ಎಂದು ಹೇಳಿದರು.

Advertisement

ರಫೇಲ್‌ ಅತಿ ದೊಡ್ಡ ಹಗರಣ: ರಫೇಲ್‌ ಯುದ್ಧ ವಿಮಾನ ಖರೀದಿ ಹಗರಣ ರಕ್ಷಣಾ ವಲಯದಲ್ಲೇ ದೊಡ್ಡ ಹಗರಣವಾಗಿದೆ. ಇದನ್ನು ಮುಚ್ಚಿ ಹಾಕುವ ಕೆಲಸವನ್ನು ಈಗ ಮಾಡುತ್ತಿದ್ದಾರೆ. ಯುಪಿಎ ಸರ್ಕಾರವಿದ್ದಾಗ 526 ಕೋಟಿ ರೂ.ಗೆ ಒಂದು ವಿಮಾನ ಖರೀದಿಗೆಂದು 
ಒಪ್ಪಂದವಾಗಿತ್ತು. ಆದರೆ, ಮೂರೇ ವರ್ಷದಲ್ಲಿ 1670 ಕೋಟಿ ಅಂದರೆ 3 ಪಟ್ಟು ಹೆಚ್ಚು ಮಾಡುವ ಮೂಲಕ ಭ್ರಷ್ಟಾಚಾರ ನಡೆದಿದೆ. ಕೆಲ ಷರತ್ತುಗಳನ್ನು ಉಲ್ಲಂಘಿಸಲಾಗಿದೆ. ಎಚ್‌ಎಎಲ್‌ ಬದಲಿಗೆ ಗುತ್ತಿಗೆಯನ್ನು ಖಾಸಗಿ ಕಂಪನಿಗೆ ನೀಡುವ ಮೂಲಕ ರಕ್ಷಣಾ ವಲಯದ ಗೌಪ್ಯತೆ ಯನ್ನೇ ಬಯಲು ಮಾಡಲಾಗಿದೆ ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next