ನವದೆಹಲಿ: ಸಂವಿಧಾನವೇ ಭಾರತದ ಅವಿಭಾಜ್ಯ ಅಂಗವಾಗಿದ್ದು, ಸಂವಿಧಾನದ ಬದ್ಧತೆ, ಪ್ರತಿಜ್ಞೆ ಮತ್ತು ನಂಬಿಕೆಯಿಂದಾಗಿ ಭಾರತ ಪ್ರಜಾಪ್ರಭುತ್ವದ ತಾಯಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ವಿದ್ಯಾರ್ಥಿನಿಯರೊಂದಿಗೆ ಕ್ಯಾಬ್ ಚಾಲಕನ ಅಸಭ್ಯ ವರ್ತನೆ; ಗ್ರಾಮಸ್ಥರಿಂದ ಥಳಿತ
ಅವರು ಶನಿವಾರ (ನವೆಂಬರ್ 26) ಸುಪ್ರೀಂಕೋರ್ಟ್ ನಲ್ಲಿ ನಡೆದ “ಸಂವಿಧಾನ ದಿನಾಚರಣೆ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕ್ಷಿಪ್ರ ಅಭಿವೃದ್ದಿ ಮತ್ತು ಆರ್ಥಿಕ ಬೆಳವಣಿಗೆ ಹೊಂದುತ್ತಿರುವ ಭಾರತದತ್ತ ಇಡೀ ವಿಶ್ವವೇ ತಿರುಗಿ ನೋಡುತ್ತಿದೆ ಎಂದು ಪ್ರಧಾನಿ ಹೇಳಿದರು.
Related Articles
ಎಲ್ಲರಿಗೂ ಸಕಾಲಿಕವಾಗಿ ನ್ಯಾಯವನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ನ್ಯಾಯಾಂಗವೂ ಕೂಡಾ ಆಧುನಿಕ ವ್ಯವಸ್ಥೆಗಳ ಮೂಲಕ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು. ಸಂವಿಧಾನ ದಿನಾಚರಣೆಯಂದು ನಾವು ನಮಗೆ ಅತ್ಯುತ್ತಮವಾದ ಸಂವಿಧಾನ ನೀಡಿದ ಮಹಾನ್ ಚೇತನಗಳಿಗೆ ನಮನಗಳನ್ನು ಸಲ್ಲಿಸಬೇಕು. ನಮ್ಮ ದೇಶಕ್ಕಾಗಿ ಅವರ ಆಶಯಗಳನ್ನು ಈಡೇರಿಸುವ ಬದ್ಧತೆಯನ್ನು ನಮಗೆ ನೆನಪಿಸುತ್ತದೆ ಎಂದರು.
ಇಂದು ಭಾರತ ಎಲ್ಲಾ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಸಾಧಿಸುತ್ತಿದೆ. ಇದರ ಹಿಂದಿನ ಶಕ್ತಿಯೇ ನಮ್ಮ ಸಂವಿಧಾನವಾಗಿದೆ. ಜನಸಾಮಾನ್ಯರಿಗಾಗಿ ಕಾನೂನನ್ನು ಸರಳಗೊಳಿಸಲಾಗಿದೆ. ಪ್ರಜಾಪ್ರಭುತ್ವದಲ್ಲಿ ಮುಕ್ತ ವಾತಾವರಣಕ್ಕೆ ಅವಕಾಶವಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.