Advertisement
ಆರೋಪಿಗಳಾದ ಸುರೇಶ್ ಮೆಂಡನ್, ಪ್ರಸಾದ್ ಕೊಂಡಾಡಿ, ಉಮೇಶ್ ಶೆಟ್ಟಿ, ರತನ್ ಪೂಜಾರಿ, ಚೇತನ್ ಆಚಾರ್ಯ, ಶೈಲೇಶ್ ಶೆಟ್ಟಿ ಮತ್ತು ಗಣೇಶ್ ನಾಯ್ಕ ಅವರನ್ನು ಜೂ.15ರಂದು ಕಾರವಾರ ಕಾರಾಗೃಹದಿಂದ ಹಾಗೂ ಇನ್ನೋರ್ವ ಆರೋಪಿ ದೀಪಕ್ ಹೆಗ್ಡೆ ಅವರನ್ನು ಮಂಗಳೂರು ಜೈಲಿನಿಂದ ಕರೆತಂದು ಉಡುಪಿಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯದ ನ್ಯಾಯಾಧೀಶ ವಿ.ಎಸ್.ಪಂಡಿತ್ ಅವರ ಮುಂದೆ ಹಾಜರುಪಡಿಸಲಾಯಿತು.
ಇತರ ಆರೋಪಿಗಳಾಗಿರುವ ಎಸ್‌ಐ ಡಿ.ಎನ್.ಕುಮಾರ್, ಹೆಡ್‌ಕಾನ್‌ಸ್ಟೆಬಲ್ ಮೋಹನ್ ಕೊತ್ವಾಲ್ ಮತ್ತು ಚಾಲಕ ಗೋಪಾಲ ಅವರು ವೈದ್ಯಕೀಯ ಕಾರಣಗಳಿಂದ ಆಸ್ಪತ್ರೆಗೆ ದಾಖಲಾಗಿದ್ದು, ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ನ್ಯಾಯಾಲಯದ ಆವರಣದಲ್ಲಿ ಆರೋಪಿಗಳ ಮನೆಯವರು, ಗೆಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಮಾರಾಟ ಮಾಡಿದ್ದೂ ತಪ್ಪು
ಸ್ಕಾರ್ಪಿಯೋ ವಾಹನದಲ್ಲಿ 13 ದನಗಳನ್ನು ಸಾಗಿಸಲಾಗಿದೆ. ಈ ರೀತಿ ಸಾಗಿಸುತ್ತಾರೆ ಎಂಬುದು ತಿಳಿದೂ ಮಾರಾಟ ಮಾಡಿದವರ ಪೈಕಿ ದೀಪಕ್ ಘಟನೆ ಕುರಿತು ಇತರರಿಗೆ ಆಗಾಗ್ಗೆ ಮೊಬೈಲ್ ಸಂದೇಶಗಳನ್ನು ರವಾನಿಸುತ್ತಿದ್ದರು. ಹಾಗಾಗಿ ಅವರನ್ನು ಕೊಲೆ ಪ್ರಕರಣದಲ್ಲಿಯೂ ಆರೋಪಿಯನ್ನಾಗಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Related Articles
Advertisement