ಉಳ್ಳಾಲ: ಕ್ರೀಡೆಯಲ್ಲಿ ಯಾವುದೇ ತೀರ್ಪು ನೀಡಿದರೂ ತೀರ್ಪುಗಾರನನ್ನು ಗೌರವಿಸುವ ಗುಣ ಆಟಗಾರರಲ್ಲಿ ಇರಬೇಕು ಎಂದು ಭಾರತ ತಂಡದ ಮಾಜಿ ಕೀಪರ್ ಸಯ್ಯದ್ ಮುಸ್ತಫಾ ಹುಸೇನ್ ಕಿರ್ಮಾನಿ ಅಭಿಪ್ರಾಯಪಟ್ಟರು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗಸಂಸ್ಥೆ ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ಆಶ್ರಯದಲ್ಲಿ ಅಂತರ್ ಫಿಸಿ ಯೋಥೆರಪಿ ಕಾಲೇಜುಗಳ ದಕ್ಷಿಣ ಭಾರತ ಮಟ್ಟದ ಕ್ರಿಕೆಟ್ ಪಂದ್ಯಾಟ “ನಿಟ್ಟೆ ಫಿಸಿಯೋ ಪ್ರೀಮಿಯರ್ ಲೀಗ್-2023” ಉದ್ಘಾಟಿಸಿ ಮಾತನಾಡಿದರು.
“ಕ್ರೀಡೆಯಲ್ಲಿ ಜಯ ಗಳಿಸಲು ತಂಡದ ಪ್ರಯತ್ನ, ಶಿಸ್ತು, ಪ್ರಾಮಾಣಿಕ ಪರಿಶ್ರಮ ಅಗತ್ಯ. ನಮ್ಮ ಕಾಲದಲ್ಲಿ ಫಿಸಿಯೋಥೆರಪಿ ಅಥವಾ ಜಿಮ್ ಇರಲಿಲ್ಲ. ವೈದ್ಯರೂ ಇರಲಿಲ್ಲ, ದೊಡ್ಡ ದೊಡ್ಡ ದೇಹದಾರ್ಡ್ಯ ಪಟುಗಳು ಬಂದು ಮಸಾಜ್ ಮಾಡುತ್ತಿದ್ದರು. ಇಂಥ ಸಂದರ್ಭದಲ್ಲೂ ಭಾರತ ತಂಡ ವಿಶ್ವಕಪ್ ಜಯಿಸಿದ್ದು ಅದ್ಭುತ” ಎಂದರು.
ನಿಟ್ಟೆ ವಿಶ್ವವಿದ್ಯಾಲಯದ ಸಹಕುಲಾ ಧಿಪತಿ ಪ್ರೊ| ಎಂ. ಶಾಂತಾರಾಮ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಫಿಸಿಯೋಥೆರಪಿ ಅಸೋಸಿಯೇಷನ್ ಅಧ್ಯಕ್ಷ ಡಾ| ಇಫ್ತಿಕಾರ್ ಅಲಿ, ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಸತೀಶ್ ಕುಮಾರ್ ಭಂಡಾರಿ, ಕುಲಸಚಿವ ಡಾ| ಹರ್ಷ ಹಾಲಹಳ್ಳಿ ಮುಖ್ಯ ಅತಿಥಿಗಳಾಗಿದ್ದರು.