Advertisement

ಆಸ್ಪತ್ರೆಗೆ ನ್ಯಾಯಾಧೀಶರ ದಿಢೀರ್‌ ಭೇಟಿ: ತರಾಟೆ

01:50 PM Jun 12, 2022 | Team Udayavani |

ಗುಡಿಬಂಡೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲಕ್ಷ್ಮೀಕಾಂತ್‌ ಮಿಸ್ಕಿನ್‌ ದಿಢೀರ್‌ ಭೇಟಿ ನೀಡಿ, ಅಸ್ಪತ್ರೆಯ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Advertisement

ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ಮಾಡಿದ ಅವರು, ಆಸ್ಪತ್ರೆಯ ಎಲ್ಲಾ ವಾರ್ಡ್‌ಗಳು, ಚುಚ್ಚು ಮದ್ದು ಕೊಠಡಿ, ಔಷಧಿ ವಿತರಣಾ ಕೊಠಡಿ, ಅಪರೇಷನ್‌ ಕೊಠಡಿ ಸೇರಿದಂತೆ ಎಲ್ಲಾ ವಿಭಾಗಳಿಗೂ ಸಂಚರಿಸಿ ಅಸ್ಪತ್ರೆಯ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಅಂಬ್ಯುಲೆನ್ಸ್‌ ಚಾಲಕರು ಸ್ಥಳದಲ್ಲಿ ಹಾಜರಿಲ್ಲದ ಕಾರಣ ಅವರ ವಿರುದ್ಧ ಕೆಂಡ ಮಂಡಲವಾಗಿ, ಸ್ವಚ್ಛತೆ ಕಾಪಡದೆ ಇರುವುದು, ಸೇರಿದ ಸಿಬ್ಬಂದಿಗಳ ಗೈರು ಹಾಜರಿಯ ಬಗ್ಗೆ ಆಡಳಿತ ವೈದ್ಯಾಧಿಕಾರಿಗಳ ವಿರುದ್ಧ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಾಗುವುದು, ಕೂಡಲೇ ಇದರ ಬಗ್ಗೆ ಎಚ್ಚರಗೊಂಡು ಕರ್ತವ್ಯ ನಿರ್ವಹಣೆ ಮತ್ತು ಶುಚಿತ್ವ ಕಾಪಾಡಿಕೊಳ್ಳಲು ಶ್ರಮಿಸಬೇಕು ಎಂದು ಎಚ್ಚರಿಕೆ ನೀಡಿದರು.

ಸಿಬ್ಬಂದಿ ಗೈರು: ಆಸ್ಪತ್ರೆಯ ವೈದ್ಯರು, ಡಿ ಗ್ಯೂಪ್‌, ಮತ್ತು ಆ್ಯಂಬುಲೆನ್ಸ್‌ ಚಾಲಕರು ಸೇರಿದಂತೆ ಸುಮಾರು ಸಿಬ್ಬಂದಿ ಸುಮಾರು ದಿನಗಳಿಂದ ಕರ್ತವ್ಯಕ್ಕೆ ಹಾಜರಾಗದೇ ಗೈರು ಹಾಜರಾಗಿರುವುದು ಹಾಜರಾತಿ ಪುಸ್ತಕದಿಂದ ಕಂಡು ಬಂದಿದೆ ಎಂದರು.

ರಾತ್ರಿ ವೇಳೆ ಸಿಬ್ಬಂದಿ ಕೊರತೆ: ರಾತ್ರಿ ವೇಳೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಇಲ್ಲ ಎಂಬ ಕೂಗು ಕೇಳಿಬ ರುತ್ತಿದ್ದು, ಈ ವಿಚಾರದಲ್ಲಿ ನಮಗೆ ದೂರು ಏನಾದರೂ ಬಂದರೆ, ನಾನೇ ಖುದ್ದು ರಾತ್ರಿ ವೇಳೆಯಲ್ಲಿ ಆಸ್ಪತ್ರೆಗೆ ಭೇಟಿ ಕೊಟ್ಟು, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ವರದಿಯನ್ನು ನೀಡುತ್ತೇನೆ ಎಂದರು.

ಗುಡಿಬಂಡೆ ಜೆಎಂಎಫ್‌ಸಿ ನ್ಯಾಯಾಧೀಶ ಹರೀಶ್‌.ಕೆ.ಎಂ, ತಾಲೂಕು ಆರೋಗ್ಯಾಧಿಕಾರಿ ನರಸಿಂಹ ಮೂರ್ತಿ, ವಕೀಲ ರಾದ ಮಹೇಶ್‌ ಮುಂತಾದವರು ಹಾಜರಿದ್ದರು.

Advertisement

ಸ್ವಚ್ಛವಿಲ್ಲದ ಶೌಚಾಲಯ : ಆಸ್ಪತ್ರೆಯ ವಾರ್ಡ್‌ಗಳು, ಶೌಚಾಲಯಕ್ಕೆ ಭೇಟಿ ನೀಡಿದ ಜಿಲ್ಲಾ ಹಿರಿಯ ನ್ಯಾಯಾಧೀಶರು, ಶುಚಿತ್ವ ಕಾಪಾಡದೇ ಇರುವುದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದರು. ಆಸ್ಪತ್ರೆಯ ಶುಚಿತ್ವ ಕಾಪಾಡಲು ಸರ್ಕಾರದಿಂದ ಪ್ರತ್ಯೇಕವಾಗಿ ಹಣ ಬರುತ್ತದೆ. ಅದನ್ನು ಸದುಪಯೋಗ ಪಡಿಸಿಕೊಂಡು ಆಸ್ಪತ್ರೆಯನ್ನು ನೈರ್ಮಲ್ಯ ಕಾಪಾಡಬೇಕು ಎಂದು ನ್ಯಾಯಾಧೀಶ ಲಕ್ಷ್ಮೀಕಾಂತ್‌ ತಾಕೀತು ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next