ಲಕ್ನೋ : ಗ್ಯಾಂಗ್ ರೇಪ್ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿರುವ ಉತ್ತರ ಪ್ರದೇಶದ ಮಾಜಿ ಸಚಿವ ಗಾಯತ್ರಿ ಪ್ರಜಾಪತಿಗೆ ಜಾಮೀನು ಮಂಜೂರು ಮಾಡಿದ ನ್ಯಾಯಾಧೀಶ ಓಂ ಪ್ರಕಾಶ್ ಮಿಶ್ರಾ ಅವರನ್ನು ಅಲಹಾಬಾದ್ ಹೈಕೋರ್ಟಿನ ಆಡಳಿತಾತ್ಮಕ ಸಮಿತಿಯು ಅಮಾನತು ಮಾಡಿದೆ.
ಸಮಾಜವಾದಿ ಪಕ್ಷದ ನಾಯಕನಿಗೆ ಜಾಮೀನು ಮಂಜೂರು ಮಾಡಲಾದುದನ್ನು ಮುಖ್ಯ ನ್ಯಾಯಾಧೀಶ ಡಿ ಬಿ ಭೋಂಸ್ಲೆ ಅವರು ಗಂಭೀರವಾಗಿ ಪರಿಗಣಿಸಿರುವುದನ್ನು ಅನುಸರಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶರಾಗಿರುವ ಓಂ ಪ್ರಕಾಶ್ ಮಿಶ್ರಾ ಅವರ ಎಲ್ಲ ಅಧಿಕಾರಿಗಳನ್ನು ಹಿಂಪಡೆಯಲಾಗಿದೆ.
ಜಸ್ಟಿಸ್ ಸುಧೀರ್ ಅಗ್ರವಾಲ್ ಅವರು ಅಮಾನತಾಗಿರುವ ನ್ಯಾಯಾಧೀಶ ಮಿಶ್ರಾ ಅವರ ವಿರುದ್ಧ ತನಿಖೆಯನ್ನು ನಡೆಸಲಿದ್ದಾರೆ.
ಮಿವ್ರಾ ಅವರನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳಿಗೆ ರಕ್ಷಣೆ ನೀಡುವ ಪೋಕ್‌ಸೋ ಕೋರ್ಟಿನ ನ್ಯಾಯಾಧೀಶರನ್ನಾಗಿ ನಿಯುಕ್ತಿಗೊಳಿಸಲಾಗಿತ್ತು. ಅವರು ಇದೇ ಎ.30ರಂದು ನಿವೃತ್ತರಾಗುವವರಿದ್ದರು.
ಹೈಕೋರ್ಟಿನ ರಿಜಿಸ್ಟ್ರಾರ್ ಜನರಲ್ ಡಿ ಕೆ ಸಿಂಗ್ ಅವರು ನ್ಯಾಯಾಧೀಶ ಮಿಶ್ರಾ ಅವರನ್ನು ಅಮಾನತುಗೊಳಿಸಲಾಗಿರುವುದನ್ನು ದೃಢಪಡಿಸಿದ್ದಾರೆ.