Advertisement

ಜಿಲ್ಲೆ ಸಮಗ್ರ ಅಭಿವೃದ್ಧಿಗೆ ಸಿಎಂ ಸಭೆಯಲ್ಲಿ ನಿರ್ಣಯ

03:37 PM Oct 04, 2018 | Team Udayavani |

ನಾಗಮಂಗಲ: ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳು ಸಂಬಂಧಪಟ್ಟ ಸಚಿವರು, ಅಧಿಕಾರಿಗ
ಳೊಂದಿಗೆ ಸತತ ಆರು ಗಂಟೆಗಳ ಕಾಲ ಚರ್ಚಿಸಿ ಸಮಗ್ರ ಅಭಿವೃದ್ಧಿಗೆ ತೀರ್ಮಾನ ಕೈಗೊಂಡಿದ್ದಾರೆ ಎಂದು ಶಾಸಕ ಸುರೇಶ್‌ಗೌಡ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಮಟ್ಟದ ಆಧಿಕಾರಿಗಳ ಸಭೆ ನಡೆಸಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ರೂಪುರೇಷೆ ರೂಪಿಸಲು ಸೂಚಿಸಿ ಅವರು ಮಾತನಾಡಿದರು.

Advertisement

ವಿಧಾನಸಭಾ ಕ್ಷೇತ್ರದಲ್ಲಿರುವ ಎಲ್ಲಾ ರಸ್ತೆಗಳನ್ನು ಉನ್ನತೀಕರಣ ಮಾಡಲು ಮುಖ್ಯ ಮಂತ್ರಿಗಳ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ತೋಟಗಾರಿಕೆಗೆ ಸಂಬಂಧಿಸಿದಂತೆ ನೂತನವಾಗಿ ಕಾಲೇಜೊಂದನ್ನು ತಾಲೂಕಿನ ದೇವಲಾಪುರ ಹೋಬಳಿಯ ಮಲ್ಲಸಂದ್ರ ಕಾವಲ್‌ನಲ್ಲಿ ತೆರೆಯಲು ತೀರ್ಮಾನಿಸಲಾಗಿದೆ. ತಾಲೂಕಿನ ಪ್ರತಿಯೊಂದು ಗ್ರಾಮಕ್ಕೂ ಶುದ್ಧ ಕುಡಿಯುವ ನೀರನ್ನೊದಗಿಸುವ ನಿಟ್ಟಿನಲ್ಲಿ ಈಗಾಗಲೇ ಮಾರ್ಕೋನಹಳ್ಳಿ ಡ್ಯಾಂನಿಂದ ಕಾಮಗಾರಿ ನಡೆಯುತ್ತಿದ್ದು, ಬೋಗಾದಿ ಹತ್ತಿರ ಹೇಮಾವತಿ ನೀರನ್ನು ತಂದು ಆ ಭಾಗದ ಪ್ರತಿಯೊಂದು ಮನೆಗೂ ನೀರು ಸರಬರಾಜು ಮಾಡಲಾಗುವುದು ಎಂದರು.

ಶಾಶ್ವತ ನಿರ್ಣಯ: ಬಿಂಡಿಗನವಿಲೆ, ಕಸಬಾ, ಹೊಣಕೆರೆ ಹೋಬಳಿಯ ಹಲವಾರು ಕೆರೆಗಳಿಗೆ ನೀರು ತುಂಬಿಸುವ ಕೆಲಸ ಹಿಂದೆ ಬಿದ್ದಿದ್ದು, ಸರ್ಕಾರ ಈಗಾಗಲೇ ಮೂರನೇ ಒಂದು ಭಾಗ ಹಣವನ್ನು ಮೀಸಲಿಟ್ಟಿದೆ. ಕಾಮಗಾರಿ ಟೆಂಡರ್‌ ಪ್ರಕ್ರಿಯೆ ಹಂತದಲ್ಲಿದೆ. ಇದರ ಜೊತೆಗೆ ಬೆಳ್ಳೂರು ಮತ್ತು ನಾಗಮಂಗಲ ಪಟ್ಟಣಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ 79 ಕೋಟಿ ರೂ. ಅನುದಾನ ಕೋರಿಕೆಯನ್ನು ಸರ್ಕಾರ ಒಪ್ಪಿದೆ.

ಬೆಳ್ಳೂರಿನಲ್ಲಿ ಒಳಚರಂಡಿ ವ್ಯವಸ್ಥೆಗೆ ಅನುಮೋದನೆ ಸಿಗಲಿದ್ದು, ನೀರಾವರಿ ಪ್ರದೇಶದಲ್ಲಿ ಬರುವ ಎಲ್ಲಾ ರಸ್ತೆಗಳನ್ನು
ಸಂಪೂರ್ಣವಾಗಿ ಅಭಿವೃದ್ಧಿ ಮಾಡುವ ತೀರ್ಮಾನವಾಗಿದೆ. ಮಹಿಳೆಯರು ಮತ್ತು ಯುವಕರಿಗಾಗಿ ನಾಗಮಂಗಲ ತಾಲೂಕಿನಲ್ಲಿ ಉದ್ದಿಮೆ ತೆರೆಯಲು ಮುಖ್ಯಮಂತ್ರಿಗಳು ಆಸಕ್ತಿ ಹೊಂದಿದ್ದು, ಈ ಸಂಬಂಧ ಮುಂದಿನ ತಿಂಗಳು ಮುಖ್ಯಮಂತ್ರಿಗಳು ಸಭೆ ನಡೆಸಿ ಶಾಶ್ವತವಾದ ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ಹೇಳಿದರು. ಆದ್ದರಿಂದ ಮುಖ್ಯಮಂತ್ರಿ ಸೂಚನೆಯಂತೆ ಎಲ್ಲಾ ಇಲಾಖೆ ಅಧಿಕಾರಿಗಳ ಸಭೆ ಕರೆದು ಆಯಾ ಇಲಾಖೆಗಳಲ್ಲಿ ಏನೇನು ಕೆಲಸಗಳಾಗಬೇಕೋ ಅದೆಲ್ಲವನ್ನು ಪಟ್ಟಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next