ವಿಜಯಪುರ: ಪಕ್ಷದ ಸಂಘಟನೆಗಾಗಿ ವಿಜಯ ಸಂಕಲ್ಪ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ ನಡ್ಡಾ ಅವರು ಜ್ಞಾನ ಯೋಗಾಶ್ರಮಕ್ಕೆ ಭೇಟಿ ಸಿದ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಕಲಬುರ್ಗಿಯಿಂದ ಹೆಲಿಕಾಪ್ಟರ್ ಮೂಲಕ ನಗರದ ಸೈನಿಕ ಶಾಲೆ ಹೆಲಿಪ್ಯಾಡ್ ಗೆ ಬಂದಿಳಿದ ನಡ್ಡಾ, ನೇರವಾಗಿ ಈಚೆಗೆ ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ನಗರದ ಜ್ಞಾನ ಯೋಗಾಶ್ರಮಕ್ಕೆ ಭೇಟಿ ನೀಡಿದರು.
ಆಶ್ರಮದ ಆವರಣದಲ್ಲಿ ಸಿದ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಜೆ.ಪಿ.ನಡ್ದಾ, ಪ್ರಣವ ಮಂಟಪಕ್ಕೆ ಪ್ರದಕ್ಷಿಣೆ ಹಾಕಿ, ನಮಿಸಿದರು.
ಇದನ್ನೂ ಓದಿ:ಕುಷ್ಟಗಿ: ಸಿದ್ದರಾಮಯ್ಯ ಹೀರೋ, ಯಾವತ್ತಿಗೂ ಸೋಲೋದೇ ಇಲ್ಲ: ನಟ ಎಸ್. ನಾರಾಯಣ
Related Articles
ಬಳಿಕ ನಡ್ಡಾ ಅವರನ್ನು ಸತ್ಕರಿಸಿದ ಆಶ್ರಮದ ಅಧ್ಯಕ್ಷ ಗುರು ಬಸವಲಿಂಗ ಶ್ರೀಗಳು, ಮುಖಂಡರು, ಸಿದ್ದೇಶ್ವರ ಶ್ರೀಗಳು ಇಂಗ್ಲಿಷ್ ಭಾಷೆಯಲ್ಲಿ ರಚಿಸಿರುವ ಪತಂಜಲಿ ಯೋಗಸೂತ್ರ, ನಾರದಸೂತ್ರ ಹಾಗೂ ಶಿವಸೂತ್ರ ಗ್ರಂಥಗಳನ್ನು ಉಡುಗೊರೆಯಾಗಿ ನೀಡಿದರು.
ಸತ್ಕಾರ-ಗ್ರಂಥಗಳನ್ನು ಸ್ಚೀಕರಿಸಿ ಪ್ರತಿಕ್ರಿಯಿಸಿದ ಜೆ.ಪಿ.ನಡ್ಡಾ, ಆಶ್ರಮದ ಆಧ್ಯಾತ್ಮಕತೆ ಹಾಗೂ ಮಾನವೀತೆಯ ಕೆಲಸಕ್ಕೆ ಪ್ರೇರಣಾ ಸ್ಥಳವಾಗಿದೆ. ಜಾಗೃತ ಸಮಾಜ ನಿರ್ಮಾಣಕ್ಕಾಗಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ ಎಂಬ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಸಂದೇಶವನ್ನೇ ನೀಡುತ್ತಿವೆ ಎಂದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಅಶ್ವತ್ಥನಾರಾಯಣ, ಸಂಸದ ರಮೇಶ ಜಿಗಜಿಣಗಿ ಸೇರಿದಂತೆ ಇತರೆ ಗಣ್ಯರು ನಡ್ಡಾ ಅವರ ಜೊತೆಗಿದ್ದರು.