Advertisement

‘Joy Bangla’ ರಾಷ್ಟ್ರೀಯ ಘೋಷಣೆಗೆ ಕೋರ್ಟ್‌ ತಡೆ

12:49 AM Dec 13, 2024 | Team Udayavani |

ಢಾಕಾ: ಬಾಂಗ್ಲಾದೇಶ ಸಂಸ್ಥಾಪಕ ಶೇಖ್‌ ಮುಜಿಬುರ್‌ ರೆಹಮಾನ್‌ ಅವರಿಂದ ಪ್ರಸಿದ್ಧಿ ಪಡೆದಿದ್ದ “ಜೊಯ್‌ ಬಾಂಗ್ಲಾ’ ರಾಷ್ಟ್ರೀಯ ಘೋಷಣೆ ಎಂದು ಆದೇಶ ನೀಡಿದ್ದ ಹೈಕೋರ್ಟ್‌ನ ತೀರ್ಪಿಗೆ ಆ ದೇಶದ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದೆ.

Advertisement

ಮೊಹಮ್ಮದ್‌ ಯೂನುಸ್‌ ನೇತೃತ್ವದ ಮಧ್ಯಾಂತರ ಸರಕಾರ ಬಂದ ಬೆನ್ನಲ್ಲೇ, ಶೇಖ್‌ ಹಸೀನಾ ಸರಕಾರದ ಅವಧಿ­ಯಲ್ಲಿ 2020ರಲ್ಲಿ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಅಮಾನತುಗೊಳಿಸಲು ಸರಕಾರ ತೀರ್ಮಾನಿಸಿತ್ತು. ಈ ಕುರಿತು ಡಿ.2ರಂದು ಸುಪ್ರೀಂ ಕೋರ್‌rಗೆ ಮೇಲ್ಮ­ನವಿ ಸಲ್ಲಿಸಿತ್ತು. ರಾಷ್ಟ್ರೀಯ ಘೋಷಣೆ ಸರಕಾರದ ನೀತಿಯ ವಿಚಾರವಾಗಿದೆ. ಇದರಲ್ಲಿ ನ್ಯಾಯಾಂಗವು ಮಧ್ಯಪ್ರವೇಶ ಮಾಡಬಾರದು ಎಂಬ ಅಂಶದ ಮೇಲೆ 4 ಸದಸ್ಯರನ್ನೊಳಗೊಂಡ ಸುಪ್ರೀಂ ಪೀಠ ಆದೇಶ ನೀಡಿದೆ. ಆ.5ರಂದು ಸರಕಾರ ಪತನವಾದ ಬಳಿಕ ಬಾಂಗ್ಲಾದೇಶದ ಬ್ಯಾಂಕ್‌ ನೋಟುಗಳಿಂದ ಹಸೀನಾ ತಂದೆ ಮುಜಿಬುರ್‌ ಚಿತ್ರವನ್ನು ತೆಗೆಯುವ ನಿರ್ಧಾರವನ್ನು ಕೈಗೊಂಡಿತ್ತು.

ಇತ್ತ ದೇಶದ್ರೋಹದ ಆರೋಪದಲ್ಲಿ ಬಂಧಿತರಾದ ಹಿಂದೂ ನಾಯಕ ಚಿನ್ಮಯಿ ಕೃಷ್ಣ ದಾಸ್‌ರ ಜಾಮೀನು ಅರ್ಜಿ ವಿಚಾರಣೆ ತ್ವರಿತಗೊಳಿಸಲು ಕೋರಿ ಹೊಸ ಅರ್ಜಿ ಸಲ್ಲಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next