Advertisement

ಪತ್ರಕರ್ತನ ಕೊಲೆ ಕೇಸು: ಡೇರಾ ಮುಖ್ಯಸ್ಥ ಅಪರಾಧಿ; ಜ.17ಕ್ಕೆ ಶಿಕ್ಷೆ

10:29 AM Jan 11, 2019 | Team Udayavani |

ಪಂಚಕುಲ : ಪತ್ರಕರ್ತ ರಾಮ್‌ ಚಂದರ್‌ ಛತ್ತರ್‌ಪತಿ ಕೊಲೆ ಕೇಸಿನಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್‌ಮೀತ್‌ ರಾಮ್‌ ರಹೀಮ್‌ ಸಿಂಗ್‌ ಮತ್ತು ಇತರ ಮವೂರು ದೋಷಿಗಳೆಂದು ಪಂಚಕುಲದಲ್ಲಿನ ಸಿಬಿಐ ವಿಶೇಷ ನ್ಯಾಯಾಲಯ ಇಂದು ಶುಕ್ರವಾರ ಮಧ್ಯಾಹ್ನ ತೀರ್ಪು ಪ್ರಕಟಿಸಿದೆ. 

Advertisement

ಕೊಲೆ ಅಪರಾಧಿಗಳ ಶಿಕ್ಷೆಯ ಪ್ರಮಾಣವನ್ನು ಜನವರಿ 17ರ ಗುರುವಾರದಂದು ಪ್ರಕಟಿಸಲಾಗುವುದು ಎಂದು ಸಿಬಿಐ ವಕೀಲ ತಿಳಿಸಿದ್ದಾರೆ.

ಪತ್ರಕರ್ತನ ಕೊಲೆ ಪ್ರಕರಣದಲ್ಲಿ ದೋಷಿಗಳೆಂದು ಪರಿಗಣಿಸಲ್ಪಟ್ಟಿರುವ ಇತರ ಮೂವರೆಂದರೆ ನಿರ್ಮಲ್‌ ಸಿಂಗ್‌, ಕುಲದೀಪ್‌ ಸಿಂಗ್‌ ಮತ್ತು ಕೃಷನ್‌ ಲಾಲ್‌. 

ಕೋರ್ಟ್‌ ತೀರ್ಪು ಪ್ರಕಟನೆಯ ನಡವಳಿಕೆಯಲ್ಲಿ 51ರ ಹರೆಯದ ಸ್ವಘೋಷಿತ ದೇವಮಾನವ ಗುರ್‌ಮೀತ್‌ ಸಿಂಗ್‌ ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರಾದರು. 2002ರಲ್ಲಿ ನಡೆದಿದ್ದ ಈ ಕೊಲೆ ಪ್ರಕರಣದಲ್ಲಿ ಗುರ್‌ಮೀತ್‌ ಸಿಂಗ್‌ ನನ್ನು ಪ್ರಧಾನ ಸಂಚುಕೋರನೆಂದು ಹೆಸರಿಸಲಾಗಿದೆ.

2002ರಲ್ಲಿ ಇಬ್ಬರು ಸಾಧ್ವಿಗಳ ಅತ್ಯಾಚಾರಕ್ಕೆ ಸಂಬಂಧಿಸಿದ ಕೇಸಿನಲ್ಲಿ ಅಪರಾಧಿ ಎಂದು ಪರಿಗಣಿಸಲ್ಪಟ್ಟಿರುವ ಗುರ್‌ಮೀತ್‌ ಸಿಂಗ್‌ ಪ್ರಕೃತ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ. 2017ರ ಆಗಸ್ಟ್‌ನಲ್ಲಿ ಆತ ಅಪರಾಧಿ ಎಂದು ಕೋರ್ಟ್‌ ಪ್ರಕಟಿಸಿದುದನ್ನು ಅನುಸರಿಸಿ ಪಂಚಕುಲ ಮತ್ತು ಉತ್ತರ ಭಾರತದ ಅನೇಕ ಕಡೆಗಳಲ್ಲಿ ದೊಂಬಿ, ಗಲಭೆ, ಹಿಂಸೆ ಭುಗಿಲೆದ್ದಿತ್ತು. 

Advertisement

ಪತ್ರಕರ್ತ ಛತ್ತರ್‌ಪತಿಯನ್ನು 2002ರ ಅಕ್ಟೋಬರ್‌ನಲ್ಲಿ ಕೊಲೆಗೈಯಲಾಗಿತ್ತು. ಆತನ ‘ಪೂರಾ ಸಚ್ಚಾ’ ಪತ್ರಿಕೆಯಲ್ಲಿ ಸಿರ್ಸಾದಲ್ಲಿನ ಡೇರಾ ಪ್ರಧಾನ ಕಾರ್ಯಾಲಯದಲ್ಲಿ ಸಾಧ್ವಿಗಳ ಮೇಲೆ ಅತ್ಯಾಚಾರ ನಡೆಯುತ್ತಿದೆ ಎಂಬ ಅನಾಮಧೇಯರೊಬ್ಬರ ಪತ್ರ ಪ್ರಕಟವಾಗಿದ್ದೇ ಕೊಲೆಗೆ ಕಾರಣವಾಗಿತ್ತು. 2003ರಲ್ಲಿ ಕೊಲೆ ಕೇಸು ದಾಖಲಾಗಿತ್ತು. 2006ರಲ್ಲಿ ಸಿಬಿಐಗೆ ಈ ಕೇಸು ಹಸ್ತಾಂತರವಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next