ಬೆಂಗಳೂರು: ಹಿರಿಯ ಪತ್ರಕರ್ತ ಎಂ. ಕೆ. ವಿದ್ಯಾರಣ್ಯ ನಿಧನ ಶನಿವಾರ ಹೊಂದಿದರು. ಅವರಿಗೆ 77 ವರ್ಷ ವಯಸ್ಸಾಗಿತ್ತು. ಕಳೆದ ಒಂದು ವರ್ಷದಿಂದ ಅಸ್ವಸ್ಥರಾಗಿದ್ದ ವಿದ್ಯಾರಣ್ಯ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರು.
Advertisement
ವಿದ್ಯಾರಣ್ಯ ಅವರು ಮಂಡ್ಯದ ಸ್ವಾತಂತ್ರ್ಯ ಹೋರಾಟಗಾರ ದಿ. ವಿದ್ಯಾರಣ್ಯಪುರ ಕೃಷ್ಣಮೂರ್ತಿಯವರ ಪುತ್ರ. ಕೃಷ್ಣಮೂರ್ತಿಯವರೂ ಪತ್ರಕರ್ತರಾಗಿದ್ದರು.
ವಿದ್ಯಾರಣ್ಯರು ಬೆಂಗಳೂರಿನ ಪಿಟಿಐ ಸುದ್ದಿಸಂಸ್ಥೆಯಲ್ಲಿ ಮೂರು ದಶಕಕ್ಕೂ ಹೆಚ್ಚು ಕಾಲ ವರದಿಗಾರ ಹಾಗೂ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.
ಅವರಿಗೆ ಒಬ್ಬ ಮಗಳು ಮತ್ತು ಮಗ ಇದ್ದಾರೆ.