Advertisement

ಜೋಶಿಮಠದಲ್ಲಿ 678 ಕಟ್ಟಡಗಳು ಅಸುರಕ್ಷಿತ: ಹಲವರ ಸ್ಥಳಾಂತರ, ಕಟ್ಟಡ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿ

04:57 PM Jan 10, 2023 | Team Udayavani |

ಉತ್ತರಾಖಂಡ: ಜೋಶಿಮಠದಲ್ಲಿ ಕಳೆದ ಕೆಲ ದಿನಗಳಿಂದ ಭೂ ಕುಸಿತ ಸಂಭವಿಸಿದ್ದು, ಮನೆ, ಕಟ್ಟಡ, ದೇವಸ್ಥಾನಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ, ಅಪಾಯದ ಅಂಚಿನಲ್ಲಿದ್ದ ಕಟ್ಟಡ, ದೇವಸ್ಥಾನಗಳನ್ನು ತೆರವುಗೊಳಿಸಲಾಗಿದ್ದು ಮನೆಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ.

Advertisement

ಜೋಶಿಮಠದಲ್ಲಿ 678 ಕಟ್ಟಡಗಳು ಅಸುರಕ್ಷಿತವೆಂದು ಗುರುತಿಸಲಾಗಿದೆ. ಹಲವು ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಎಸ್‌ಡಿಆರ್‌ಎಫ್‌ನ 8 ತಂಡಗಳು, 1 ಎನ್‌ಡಿಆರ್‌ಎಫ್, 1 ಪಿಎಸಿಯ ಹೆಚ್ಚುವರಿ ತಂಡ ಮತ್ತು ಪೊಲೀಸ್ ಅಧಿಕಾರಿಗಳು ಈ ಪ್ರದೇಶದಲ್ಲಿ ನಿಯೋಜಿಸಲಾಗಿದೆ. ಅಗತ್ಯವಿದ್ದರೆ, ಕೆಲವು ಪ್ರದೇಶಗಳನ್ನು ಸೀಲ್ ಮಾಡಲಾಗುತ್ತದೆ. ಈ ಪ್ರದೇಶದಲ್ಲಿ ವೈಜ್ಞಾನಿಕ ಅಧ್ಯಯನ ನಡೆಸಲಾಗುತ್ತಿದೆ ಎಂದು ಉತ್ತರಾಖಂಡ ಡಿಜಿಪಿ ತಿಳಿಸಿದ್ದಾರೆ.

ನಾಳೆಯಿಂದ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದುವರೆಗೆ, ಜೋಶಿಮಠದಲ್ಲಿ 678 ಮನೆಗಳು ಬಿರುಕು ಬಿಟ್ಟಿವೆ ಮತ್ತು 81 ಕುಟುಂಬಗಳನ್ನು ತಾತ್ಕಾಲಿಕವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಅಧಿಕಾರಿಗಳು ಈ ಪ್ರದೇಶದಲ್ಲಿ ಅಸುರಕ್ಷಿತ ಮತ್ತು ಅಪಾಯಕಾರಿ ಕಟ್ಟಡಗಳನ್ನು ಗುರುತಿಸಲಾಗಿದ್ದು ಅವುಗಳ ತೆರವು ಕಾರ್ಯಾಚರಣೆ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎಲ್ಲರನ್ನೂ ಸುರಕ್ಷಿತವಾಗಿರಿಸುವುದು ನಮ್ಮ ಆದ್ಯತೆ: ರಕ್ಷಣಾ ಸಚಿವ ಅಜಯ್ ಭಟ್
ಉತ್ತರಾಖಂಡದ ಜೋಶಿಮಠದ ಜನರು ಕಷ್ಟಪಟ್ಟು ದುಡಿದ ಹಣದಿಂದ ತಮ್ಮ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ ಆದರೆ ಅವರು ಈಗ ಅವುಗಳನ್ನು ಬಿಡಬೇಕಾಗಿದೆ, ಪ್ರತಿಯೊಬ್ಬರನ್ನು ಸುರಕ್ಷಿತವಾಗಿರಿಸುವುದು ಕೇಂದ್ರ ಸರ್ಕಾರದ ಆದ್ಯತೆಯಾಗಿದೆ ಎಂದು ರಕ್ಷಣಾ ಸಚಿವ ಅಜಯ್ ಭಟ್ ಹೇಳಿದರು.

 

Advertisement

Advertisement

Udayavani is now on Telegram. Click here to join our channel and stay updated with the latest news.

Next