Advertisement

ಜೋಶಿಮಠ ಭೂಗರ್ಭ ಕುಸಿತ…ಕಲಿಯುಗದ ಅಂತ್ಯದ ಮುನ್ಸೂಚನೆ?ಬದ್ರಿ ಪುರಾಣ ಭವಿಷ್ಯ ನಿಜವಾಗಲಿದೆಯಾ…

01:43 PM Jan 16, 2023 | Team Udayavani |

ನವದೆಹಲಿ: ಭಾರೀ ಕುಸಿತದ ಪರಿಣಾಮ ಜೋಶಿಮಠ ಭೂಗರ್ಭದೊಳಗೆ ಸೇರುವ ಹಂತಕ್ಕೆ ತಲುಪಿದ್ದು, ಇದರ ಜೊತೆ ಸಮೀಪದ ಬದ್ರಿನಾಥ ದೇವಾಲಯ ಹಾಗೂ ಬೆಟ್ಟದ ಬಗ್ಗೆಯೂ ಭಕ್ತರಲ್ಲಿ ಕಳವಳ ಮೂಡಿಸಿದೆ. ಅದಕ್ಕೆ ಕಾರಣ ಬದ್ರಿ ಪುರಾಣ ಭವಿಷ್ಯ ನಿಜವಾಗಲಿದೆಯೇ ಎಂಬ ಆತಂಕ ಭಕ್ತರದ್ದಾಗಿದೆ.

Advertisement

ಕಲಿಯುಗದ ಅಂತ್ಯದ ಮುನ್ಸೂಚನೆಯೇ?

ಜೋಶಿಮಠದಲ್ಲಿರುವ ಪ್ರಸಿದ್ಧ ನರಸಿಂಹ ದೇವಾಲಯದಲ್ಲಿನ ನರಸಿಂಹ ವಿಗ್ರಹಕ್ಕೂ ಬದ್ರಿಯಲ್ಲಿರುವ ಭಗವಾನ್ ವಿಷ್ಣುವಿನ ಕುರಿತು ಭಕ್ತರು ಮತ್ತು ಯಾತ್ರಾರ್ಥಿಗಳಲ್ಲಿ ತುಂಬಾ ನಿಗೂಢ ಕುತೂಹಲಕಾರಿ ಸಂಗತಿಯನ್ನು ನಂಬಿಕೊಂಡು ಬಂದಿದ್ದಾರೆ. ಇದೊಂದು ತುಂಬಾ ಪುರಾತನ ನಂಬಿಕೆಯಾಗಿದೆ. 7-8ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರು ಈ ಜಗತ್ತಿನ ಹತ್ತು ದೇವರ ಸೃಷ್ಠಿ ಹೇಗಾಯಿತು ಎಂಬ ಬಗ್ಗೆ ಜನರಿಗೆ ಪ್ರವಚನ ನೀಡುತ್ತಿರುವ ಸಂದರ್ಭದಿಂದಲೂ ಜೋಶಿಮಠದ ನರಸಿಂಹ ಹಾಗೂ ಬದ್ರಿ ನಾರಾಯಣ ದೇವರ ಕುರಿತ ಭವಿಷ್ಯವಾಣಿಯನ್ನು ನಂಬಿಕೊಂಡು ಬರಲಾಗುತ್ತಿದೆ ಎಂದು ವರದಿ ವಿವರಿಸಿದೆ.

ಇದನ್ನೂ ಓದಿ:ಕಾಂಗ್ರೆಸ್ ಗೆಲ್ಲಲು ಸೂರ್ಯ ನಾರಾಯಣ ರೆಡ್ಡಿಗೆ ಉಸ್ತುವಾರಿ ನೀಡಲು ಹೈಕಮಾಂಡ್ ಚಿಂತನೆ.!

ನರಸಿಂಹ ದೇವಾಲಯವು ಜೋಶಿಮಠದ ತಳಬುಡದ ಬಜಾರ್ ಪ್ರದೇಶದಲ್ಲಿದೆ. ಆದಿ ಶಂಕರಾಚಾರ್ಯರು ಜೋಶಿಮಠದಲ್ಲಿ ವಿಷ್ಣುವಿನ ಅವತಾರವಾದ ನರಸಿಂಹ ದೇವರ ಪ್ರತಿಮೆಯನ್ನು ಸ್ಥಾಪಿಸಿದ್ದರು. ಜೋಶಿಮಠದಿಂದ 22 ಕಿಲೋ ಮೀಟರ್ ದೂರದಲ್ಲಿರುವ ಬದ್ರಿನಾಥ ದೇಗುಲ ಸಮುದ್ರ ಮಟ್ಟದಿಂದ 8,530 ಅಡಿ ಎತ್ತರದಲ್ಲಿದೆ. ಇಲ್ಲೇ ನರಸಿಂಹನ ವಿಗ್ರಹವಿದ್ದು ಇಲ್ಲಿಯೂ ಭೂ ಕುಸಿತ ಸಂಭವಿಸಿದರೆ ಬದ್ರಿ ಪುರಾಣ ಭವಿಷ್ಯ ನಿಜವಾಗುವುದರಲ್ಲಿ ಸಂದೇಹ ಇಲ್ಲ ಎಂಬುದಾಗಿ ವಿಶ್ಲೇಷಿಸಲಾಗುತ್ತಿದೆ.

Advertisement

ಭಕ್ತರ ನಂಬಿಕೆಯಂತೆ ದಿನಕಳೆದಂತೆ ವಿಷ್ಣುವಿನ ಅವತಾರದಲ್ಲಿ ಒಂದಾದ ನರಸಿಂಹ ವಿಗ್ರಹದ ಒಂದು ಕೈ (ತೋಳು) ತೆಳುವಾಗುತ್ತಿದ್ದು, ಅದು ಮುರಿದು ಬಿದ್ದು, ನರಸಿಂಹ ದೇವಾಲಯ ಕೂಡಾ ಧರಾಶಾಹಿಯಾಗಲಿದ್ದು, ಜೊತೆಗೆ ವಿಷ್ಣು ಪ್ರಯಾಗದ ಬಳಿ ಇರುವ ಜಯ-ವಿಜಯ ಪರ್ವತ ಶ್ರೇಣಿ ಕುಸಿದು ಬಿದ್ದು ಒಂದಕ್ಕೊಂದು ಸೇರುವ ಮೂಲಕ ಪವಿತ್ರ ಬದ್ರಿ ನಾರಾಯಣ ದೇಗುಲ ಪ್ರವೇಶ ಶಾಶ್ವತವಾಗಿ ಬಂದ್ ಆಗಲಿದೆ. ಇದು ಕಲಿಯುಗದ ಅಂತ್ಯಕ್ಕೆ ಕಾರಣವಾಗಲಿದೆ ಎಂದು ಪುರಾಣದಲ್ಲಿ ಉಲ್ಲೇಖಿಸಿರುವುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next