Advertisement

ಜೋಶಿಮಠ: ಆಹಾರಧಾನ್ಯಗಳ ಗೋದಾಮಿನಲ್ಲಿ ಬಿರುಕು!

11:42 PM Feb 24, 2023 | Team Udayavani |

ಡೆಹ್ರಾಡೂನ್‌: ವಸತಿ ಕಟ್ಟಡಗಳಲ್ಲಿ ಬಿರುಕು ಮೂಡಿದ್ದ ಜೋಶಿಮಠದಲ್ಲಿ ಈಗ ಆಹಾರಧಾನ್ಯ ಗೋದಾಮಿನಲ್ಲೂ ಬಿರುಕು ಕಾಣಿಸಿಕೊಂಡಿದೆ.

Advertisement

ಈ ಹಿನ್ನೆಲೆ ಗೋದಾಮಿನಲ್ಲಿರುವ ಸಂಗ್ರಹವನ್ನು ಖಾಲಿ ಮಾಡಲು ಹಾಗೂ ಮುಂಚಿತವಾಗಿಯೇ ಗ್ರಾಹಕರಿಗೆ ವಿತರಿಸಲು ಆಡಳಿತಾಧಿಕಾರಿಗಳು ಸೂಚನೆ ನೀಡಿದ್ದಾರೆ.

ಜನವರಿ 2-3ರ ಸಂದರ್ಭದಲ್ಲೇ ಗೋದಾಮಿನಲ್ಲಿ ಸಣ್ಣ ಬಿರುಕು ಮೂಡಿತ್ತು. ಆದರೆ ಈಗ ಗೋದಾಮಿನ ಕೆಲ ಕೊಠಡಿಗಳು ಕುಸಿಯುವ ಹಂತಕ್ಕೆ ತಲುಪಿರುವ ಹಿನ್ನೆಲೆ ಈ ನಿರ್ಣಯ ಕೈಗೊಳ್ಳಲಾಗಿದೆ.

ಆಹಾರ ಧಾನ್ಯ ಸಂಗ್ರಹಕ್ಕೆ ಗುಲಾಬ್‌ಕೋಟಿಯಲ್ಲಿರುವ ಗೋದಾಮನ್ನು ಪರ್ಯಾಯವಾಗಿ ಬಳಸಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next