Advertisement
ನಗರದ ಶ್ರೀ ಹುರಕಡ್ಲಿ ಅಜ್ಜ ಕಾನೂನು ಮಹಾವಿದ್ಯಾಲಯ ಮೈದಾನದಲ್ಲಿ ಧಾರವಾಡ ಲೋಕಸಭಾದ ಬಿಜೆಪಿ ಅಭ್ಯರ್ಥಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಚಾರಾರ್ಥ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮೊದಲು ಮರಾಠಿಯಲ್ಲಿಯೇ ಭಾಷಣ ಆರಂಭಿಸಿ ಆ ಬಳಿಕ ಹಿಂದಿಯಲ್ಲಿ ಅವರು ಮಾತನಾಡಿದರು.
Related Articles
Advertisement
ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲಿಸಿದ್ದು, ಆದರೆ ಅಭಿವೃದ್ದಿ ಕಾರ್ಯಗಳೇ ಮಾಡುತ್ತಿಲ್ಲ. ಈಗ ನಮ್ಮ ಬಳಿ ಹಣವಿಲ್ಲ ಅನ್ನುತ್ತಿದ್ದಾರೆ. ಕರ್ನಾಟಕ ಸರಕಾರವು ರಾವಣ ರೂಪದಲ್ಲಿ ಇದ್ದು, ಈ ಸರಕಾರ ಕಿತ್ತು ಹಾಕಬೇಕು. ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಕೂಡಆಗಬಹುದು. ಇದು ಈ ಚುನಾವಣೆಯ ಬಳಿಕ ಗೊತ್ತಾಗಲಿದೆ ಎಂದರು. ಪ್ರಹ್ಲಾದ ಜೋಶಿ ಮಾತನಾಡಿ ವಿಶ್ವದಲ್ಲಿ ಭಾರತ ಇನ್ನಷ್ಟು ಉನ್ನತ ಮಟ್ಟಕ್ಕೆ ಏರಲು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿದ್ದು, ಅದಕ್ಕಾಗಿ ಎಲ್ಲರೂ ಕೈ ಜೋಡಿಸಬೇಕು. ಅವರ ಮಾರ್ಗದರ್ಶನದಲ್ಲಿ ಧಾರವಾಡ ಜಿಲ್ಲೆಯನ್ನು ಕೂಡ ದೇಶದಲ್ಲಿ ಉನ್ನತಮಟ್ಟಕ್ಕೆ ಒಯ್ಯುತ್ತೇನೆ. ಇದಕ್ಕಾಗಿ ಈ ಸಲವು ಮತದಾರರು ಆರ್ಶೀವಾದ ಮಾಡಬೇಕು ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ, ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಮಾಜಿ ಶಾಸಕರಾದ ಸೀಮಾ ಮಸೂತಿ, ಅಮೃತ ದೇಸಾಯಿ, ಸಂಜಯ ಕಪಟಕರ ಸೇರಿದಂತೆ ಹಲವರು ಇದ್ದರು. ಶಿಂಧೆ ಕರೆಸಿದ್ದು ಕನ್ನಡಿಗರಿಗೆ ಅವಮಾನ: ಲಾಡ್
ಕನ್ನಡ ನಾಡು-ನುಡಿಗೆ ಹಾಗೂ ಕಳಸಾ ಬಂಡೂರಿ, ಮಹದಾಯಿ ಯೋಜನೆಗೆ ಸದಾ ಅಡ್ಡಗಾಲು ಹಾಕುವ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಅವರನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರು ತಮ್ಮ ಪರ ಮತ ಕೇಳಲು ಕರೆಸಿರುವುದು ಕನ್ನಡಿಗರಿಗೆ ಮಾಡಿರುವ ಅವಮಾನ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.