ಪಣಜಿ: ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟರ್ ಗೋವಾದಲ್ಲಿ ಮನೆ ಮಾಡಿದ್ದರಂತೆ, ಹೌದು ಕಳೆದ ಕೆಲ ದಿನಗಳಿಂದ ಗೋವಾದ ಪ್ರಮುಖ ರಸ್ತೆಗಳಲ್ಲಿ ಈ ಕ್ರಿಕೆಟರ್ ಸುತ್ತಾಡುತ್ತಿದ್ದಾರಂತೆ.
ಹೀಗಂತ ಅವರು ಟ್ವಿಟರ್ ‘ಎಕ್ಸ್’ ನಲ್ಲಿ ಅವರು ಗೋವಾ ಸುತ್ತಾಡಿದ ಪೋಸ್ಟ್ ಗಳ್ಳನ್ನು ಶೇರ್ ಮಾಡುತ್ತಿದ್ದರಂತೆ.
ಅಂದಹಾಗೆ ಯಾರು ಈ ಕ್ರಿಕೆಟಿಗ ಎಂದುಕೊಂಡಿದ್ದೀರಾ ಮತ್ತಾರು ಅಲ್ಲ ಜಾಂಟಿ ರೋಡ್ಸ್.
ಜಾಂಟಿ ರೋಡ್ಸ್ ಗೋವಾದಲ್ಲಿಯೇ ಮನೆ ಮಾಡಿ ಉಳಿದುಕೊಂಡಿದ್ದಾರಂತೆ. ದಕ್ಷಿಣ ಗೋವಾದ ಕಾಣಕೋಣದ ಆಗೊಂದಾದಲ್ಲಿ ಜಾಂಟಿ ರೋಡ್ಸ್ ಮನೆ ಮಾಡಿದ್ದು, ಆಗುಂದಾ ರಸ್ತೆಗಳಲ್ಲಿ ಸುತ್ತಾಡುತ್ತಾ ಟ್ವಿಟರ್ ಎಕ್ಸ್ ನಲ್ಲಿ ಟ್ವೀಟ್ ಮಾಡುತ್ತಿದ್ದಾರೆ.
ಆಗೊಂದಾದಲ್ಲಿ ಮನೆ ಮಾಡಿರುವ ಬಗ್ಗೆ ಖುದ್ದು ಜಾಂಟಿ ರೋಡ್ಸ್ ‘ಎಕ್ಸ್’ ನಲ್ಲಿ ಹಂಚಿಕೊಂಡಿದ್ದು, ಇದು ಸಮ್ಮರ್ ವೆಕೇಶನ್ ಅಲ್ಲ. ಆರು ತಿಂಗಳಿಗಾಗಿ ನಾನಿಲ್ಲಿ ಶಿಫ್ಟ್ ಆಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ಜಾಂಟಿ ರೋಡ್ಸ್ ಗೋವಾದಲ್ಲಿರುವ ಪೋಸ್ಟ್ ಇದೀಗ ಕ್ರಿಕೇಟ್ ಪ್ರೇಮಿಗಳ ಮನ ಗೆದ್ದಿದೆ.
1992 ರಿಂದ 2003 ರ ವರೆಗಿನ ಜಾಂಟಿ ರೋಡ್ಸ್ ಕ್ರಿಕೇಟ್ ವೃತ್ತಿ ಜೀವನದಲ್ಲಿ 52 ಟೆಸ್ಟ್, 245 ಅಂತರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿದ್ದು, ಏಕದಿನ ಪಂದ್ಯಗಳಲ್ಲಿ 5935 ರನ್ ಮತ್ತು ಟೆಸ್ಟ್ ಗಳಲ್ಲಿ 2532 ರನ್‍ಗಳನ್ನು ಗಳಿಸಿದ್ದಾರೆ.
ಇದನ್ನೂ ಓದಿ: Firecracker Unit: ಪಟಾಕಿ ತಯಾರಿಕಾ ಘಟಕದಲ್ಲಿ ಭೀಕರ ಸ್ಫೋಟ: ಮಹಿಳೆಯರು ಸೇರಿ 8ಮಂದಿ ಮೃತ್ಯು