Advertisement

Bengaluru: ಬೈಕ್‌ನ ಪೆಟ್ರೋಲ್‌ ಟ್ಯಾಂಕ್‌ ಮೇಲೆ ಸ್ನೇಹಿತೆಯನ್ನು ಕೂರಿಸಿಕೊಂಡು ಜಾಲಿರೈಡ್‌!

11:51 AM Aug 25, 2024 | Team Udayavani |

ಬೆಂಗಳೂರು: ಬೈಕ್‌ನ ಪೆಟ್ರೋಲ್ ಟ್ಯಾಂಕ್‌ ಮೇಲೆ ಯುವತಿಯನ್ನು ಕೂರಿಸಿಕೊಂಡು ಯುವಕ ಬೈಕ್‌ ಚಲಾಯಿಸಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

ಯಲಹಂಕ ಸಂಚಾರ ಠಾಣಾ ವ್ಯಾಪ್ತಿಯ ರೇವಾ ಕಾಲೇಜು ರಸ್ತೆಯಲ್ಲಿ ಘಟನೆ ನಡೆದಿದೆ. ಯುವಕ- ಯುವತಿ ಬೈಕ್‌ನಲ್ಲಿ ಜಾಲಿರೇಡ್‌ ಮಾಡುತ್ತಿದ್ದು, ಯುವಕ, ತನ್ನ ಸ್ನೇಹಿತೆಯನ್ನು ಪೆಟ್ರೋಲ್‌ ಟ್ಯಾಂಕ್‌ ಮೇಲೆ ಕೂರಿಸಿಕೊಂಡು ಹೋಗುತ್ತಿದ್ದ. ಅದನ್ನು ಹಿಂದಿನಿಂದ ಬರುತ್ತಿದ್ದ ಕಾರು ಚಾಲಕನೊಬ್ಬ ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಬೈಕ್‌ನ ನೋಂದಣಿ ಸಂಖ್ಯೆ ಆಧರಿಸಿ ಯುವಕನ ಪತ್ತೆ ಕಾರ್ಯ ನಡೆಯುತ್ತಿದೆ. ವೈರಲ್‌ ಆಗಿರುವ ಅಸಲಿ ದೃಶ್ಯಗಳ ಸಂಗ್ರಹ ಕಾರ್ಯಾ ನಡೆಯುತ್ತಿದೆ ಎಂದು ಸಂಚಾರ ವಿಭಾಗ ಪೊಲೀಸರು ತಿಳಿಸಿದರು.

ಇದೇ ರೀತಿ ಕೆಲ ತಿಂಗಳ ಹಿಂದೆ ಹೆಬ್ಬಾಳ ಮೇಲು ಸೇತುವೆಯಲ್ಲಿ ಯುವಕನೊಬ್ಬ ಬೈಕ್‌ನ ಪೆಟ್ರೋಲ್ ಟ್ಯಾಂಕ್‌ ಮೇಲೆ ಯುವತಿ ಕೂರಿಸಿ ಜಾಲಿರೇಡ್‌ ಮಾಡಿದ್ದ. ನಂತರ ಯುವಕನನ್ನು ಪತ್ತೆ ಹಚ್ಚಿ ಹೆಬ್ಟಾಳ ಸಂಚಾರ ಪೊಲೀಸರು ಬಂಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next