Advertisement
ನಗರದ ತಹಶೀಲ್ದಾರ್ ಕಚೇರಿಯಲ್ಲಿ ಸೋಮವಾರ ಸಂಜೆ ಕೋವಿಡ್ ನಿಯಂತ್ರಣ ಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಮುಂದಿನ ದಿನಗಳಲ್ಲಿ ಕೋವಿಡ್ ಮೂರನೇ ಅಲೆಯ ಭಯವಿದ್ದು, ಕಾರಣ ಈ ಹಿಂದೆ ಕೋವಿಡ್ -19 ಮೊದಲ ಡೋಸ್ ಪಡೆದವರಿಗೆ ಕ್ಷೇತ್ರವಾರು ಆದ್ಯತೆ ಮೇಲೆ ಎರಡನೇ ಡೋಸ್ ನೀಡಬೇಕು. ಬೇಡಿಕೆಯ ಬಗ್ಗೆ ತಕ್ಷಣ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಕೋವಿಡ್ ಆಸ್ಪತ್ರೆಗಳಲ್ಲಿ ದಾಖಲಾಗಿ ಮೃತಪಟ್ಟಿರುವ ಪಾಲಕರ ಮಕ್ಕಳನ್ನು ಗುರುತಿಸುವ ಕಾರ್ಯ ಮಾಡಬೇಕು. ತಾಯಿ ಹಾಗೂ ತಂದೆ ಕಳೆದುಕೊಂಡಿರುವ ಅಂತಹ ನಿರ್ಗತಿಕ ಮಕ್ಕಳ ಜೀವನಕ್ಕೆ ನೆರವಾಗಬೇಕು. ಅವರ ಪುನರ್ವಸತಿಗೆ ನೆರವಾಗಬೇಕು.
Related Articles
Advertisement
ಇದರಿಂದ ಮುಂಬರುವ ಒಂದು ತಿಂಗಳಲ್ಲಿ ಪ್ಲಾಟ್‌ನಿಂದ ಆಕ್ಸಿಜನ್ ಸೌಲಭ್ಯ ದೊರೆಯುವ ಆಶಾಭಾವನೆ ವ್ಯಕ್ತಪಡಿಸಿದ ಅವರು, ಜಿಲ್ಲೆಯ ಜನರೊಂದಿಗೆ ಮತ್ತು ಅವರ ಸಂಕಷ್ಟದ ಸ್ಥಿತಿಯಲ್ಲಿ ನಾವು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸದಾ ಇರಲಿದ್ದು, ಯಾವುದೇ ಪರಿಸ್ಥಿತಿಯಲ್ಲೂ ಆತ್ಮಸ್ಥೈರ್ಯ ಕಳೆದುಕೊಳ್ಳದಂತೆ ಸಭೆಯ ಮೂಲಕ ಜನತೆಯಲ್ಲಿ ಮನವಿ ಮಾಡಿದರು. ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ನಗರದಲ್ಲಿ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಶೇಕಡಾವಾರು ಇನ್ನಷ್ಟು ಪ್ರಗತಿ ಸಾಧಿಸಬೇಕು.
ನಗರದಲ್ಲಿ ಕೊರೊನಾ ಸೋಂಕಿತರು ಹೆಚ್ಚಿರುವ ಹಿನ್ನೆಲೆಯಲ್ಲಿ ಪ್ರಥಮ ಡೋಸ್ ನೀಡಿದವರಿಗೆ ಎರಡನೇ ಡೋಸ್‌ನ್ನು ಆದ್ಯತೆ ಮೇಲೆ ನೀಡಬೇಕು. ಅವಶ್ಯಕತೆ ಮತ್ತು ಲಸಿಕೆ ಬೇಡಿಕೆಯ ಬಗ್ಗೆ ತಕ್ಷಣ ಸಚಿವರ ಗಮನಕ್ಕೆ ತರಬೇಕು. ಪ್ರತಿ ದಿನ ಲಸಿಕೆಗಳ ಮತ್ತು ರೆಮ್‌ಡೆಸಿವಿಯರ್ ಬಗ್ಗೆ ಮಾಹಿತಿ ನೀಡಲು ಸಲಹೆ ನೀಡಿದರು. ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೋಳಸಂಗಿ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ಜಿಪಂ ಸಿಇಒ ಗೋವಿಂದರೆಡ್ಡಿ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಡಿಎಚ್‌ಒ ಮಹೇಂದ್ರ ಕಾಪ್ಸೆ, ಉಪ ವಿಭಾಗಾಧಿಕಾರಿ ಬಲರಾಮ ಲಮಾಣಿ ಇದ್ದರು.