Advertisement
ಇಲ್ಲಿನ ವಿಶೇಷ ಆರ್ಥಿಕ ವಲಯಕ್ಕೆ ಸುಸಜ್ಜಿತ ಮೇಲ್ಸೇತುವೆಯಾದ ಬಳಿಕ ಹಳೆಯ ಸಂಪರ್ಕ ರಸ್ತೆಯನ್ನು ದುರಸ್ತಿ ಮಾಡುವವರಿಲ್ಲದೆ ಹಾಗೆಯೇ ಬಿಡಲಾಗಿದ್ದು ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ.
ಆರಂಭದಲ್ಲಿ ವಿಶೇಷ ಆರ್ಥಿಕ ಪ್ರದೇಶಕ್ಕೆ ರಸ್ತೆ ಸಂಪರ್ಕ ಅಗತ್ಯವಿದ್ದಾಗ ಕುದುರೆ ಮುಖ ಕೈಗಾರಿಕ ಘಟಕದ ಬಳಿಯಿಂದ ಈ ರಸ್ತೆ ನಿರ್ಮಿಸಲಾಗಿತ್ತು. ಎಸ್‌ಇಝಡ್‌ಗೆ ಈಗ ಹೊಸ ಮೇಲ್ಸೇತುಯೇ ಹತ್ತಿರದ ದಾರಿಯಾಗಿದ್ದು ರೈಲ್ವೇ ಕ್ರಾಸಿಂಗ್‌ಗೆ ಕಾಯುವ ಪ್ರಶ್ನೆ ಉದ್ಭವಿಸುವುದಿಲ್ಲ. ಈ ರಸ್ತೆ ಇದೀಗ ಕೈಗಾರಿಕೆ ಪ್ರಾಂಗಣಕ್ಕೆ ತಲುಪಲು ಪ್ರಯೋಜನಕಾರಿಯಾಗಿದೆ. ಇದೀಗ ಈ ರಸ್ತೆಯ ದುರಸ್ತಿ ಕೆಐಎಡಿಬಿ ಆಥವಾ ಎಸ್‌ಇಝಡ್ ಮಾಡಬೇಕೆ ಎಂಬುದೇ ಪ್ರಶ್ನೆಯಾಗಿದೆ.
Related Articles
ಇದೇ ರಸ್ತೆಯ ಬದಿಯಲ್ಲಿರುವ ತೋಡನ್ನು ಹೂಳೆತ್ತೆದೆ ಹಾಗೆಯೇ ಬಿಡಲಾಗಿದ್ದು, ಸಣ್ಣ ಮಳೆ ಬಂದರೂ ನೀರು ರಸ್ತೆ ಮೇಲೆ ನಿಲ್ಲುತ್ತದೆ. ಅಸಮರ್ಪಕ ನಿರ್ವಹಣೆಯಿಂದ ನೀರು ನಿಂತು ಘನ ವಾಹನಗಳ ಓಡಾಟ ಸಂದರ್ಭ ರಸ್ತೆ ಹದಗೆಡುತ್ತಿದೆ. ಆಟೋ ರಿಕ್ಷ ಚಾಲಕರು ಈ ರಸ್ತೆಯಲ್ಲಿ ಬರಲು ಹಿಂದೇಟು ಹಾಕುತ್ತಾರೆ. ಕೈಗಾರಿಕೆಗಳ ಘನ ವಾಹನಗಳು ಈ ರಸ್ತೆಯಲ್ಲಿ ನಿರಂತರ ಓಡಾಟ ನಡೆಸುತ್ತಿದ್ದು, ನಿರ್ವಹಣೆಗೆ ಸಂಬಂಧಿಸಿ ಯಾರೂ ಜವಾಬ್ದಾರಿ ಹೊತ್ತುಕೊಳ್ಳುತ್ತಿಲ್ಲ.
Advertisement
ಮನವಿಗೂ ಸ್ಪಂದಿಸಿಲ್ಲಇಲ್ಲಿನ ರಸ್ತೆ ಒಟ್ಟು ಐದು ಕಡೆ ತೀವ್ರವಾಗಿ ಹದಗೆಟ್ಟಿದ್ದು ಸಣ್ಣ ವಾಹನಗಳು ಓಡಾಡಲು ಅಸಾಧ್ಯವಾ ಗಿದೆ. ಮಳೆ ನೀರು ನಿಂತರೆ ಹೊಂಡದ ಆಳ ತಿಳಿಯದೆ ದ್ವಿಚಕ್ರ ಸವಾರರು ಸಿಲುಕಿ ಕೊಳ್ಳುತ್ತಾರೆ. ವಾಹನದ ಬಿಡಿ ಭಾಗಗಳಿಗೆ ಹಾನಿಯಾಗುತ್ತಿದೆ. ಇಲ್ಲಿನ ಕೈಗಾರಿಕ ಸಂಘದ ಮನವಿಗೂ ಸ್ಪಂದನೆ ಸಿಗುತ್ತಿಲ್ಲ.