Advertisement

ನೋಟಿಸ್ ನೀಡಿದ ಮೂರು ತಿಂಗಳಲ್ಲೇ ವಾಜಪೇಯಿ ಸಂಪುಟ ಸೇರಿದ್ದೆ: ಯತ್ನಾಳ್

08:26 PM Jan 16, 2023 | Team Udayavani |

ವಿಜಯಪುರ : ಎರಡು ದಶಕದ ಹಿಂದೆ ನನಗೆ ನೋಟಿಸ್ ನೀಡಿದ ಮೂರು ತಿಂಗಳಲ್ಲೇ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಮಂತ್ರಿ ಆಗಿದ್ದೆ. ಆದರೆ ಈ ಬಾರಿ ನನಗೆ ಕಾರಣ ಕೇಳಿ ಯಾವುದೇ ನೋಟಿಸ್ ಬಂದಿಲ್ಲ, ಇದೆಲ್ಲ ವದಂತಿ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

Advertisement

ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿ, ನನಗೆ ಕೇಂದ್ರದಿಂದ ಯಾವುದೇ ನೋಟಿಸ್ ಬಂದಿಲ್ಲ. ನಿನ್ನೇ ವರಿಷ್ಠರೇ ನನ್ನೊಂದಿಗೆ ಮತನಾಡಿದ್ದಾರೆ. ಹೀಗಾಗಿ ವದಂತಿಗಳಿಗೆ ನಾನು ಹೆದರುವ ವ್ಯಕ್ತಿಯಲ್ಲ. ಸುಮ್ಮನೆ ಊಹಾ ಪೂಹ ಹರಡಿಸಿದ್ದಾರೆ ನಾನು ನೋಟಿಸ್ ಕೊಡುವಂತಹ ಯಾವುದೆ ಪಕ್ಷದ ವಿರೋಧಿ ಹೇಳಿಕೆ ನೀಡಿಲ್ಲ. ಭ್ರಷ್ಟರು, ವಂಶಪಾರಂಪರ್ಯ ರಾಜಕೀಯ ಮಾಡುವವರ ಬಗ್ಗೆ ಮಾತನಾಡಿದ್ದೇನೆ. ಇಂಥ ಮಾತುಗಳು ಪಕ್ಷ ವಿರೋಧಿ ಚಟುವಟಿಕೆ ಆಗಲು ಹೇಗೆ ಸಾಧ್ಯವಿದೆ ಎಂದು ಪ್ರಶ್ನಿಸಿದರು.

ತಮ್ಮ ವಿರುದ್ಧ ಇಷ್ಟೆಲ್ಲ ಮಾತನಾಡುತ್ತಿದ್ದರೂ ನೋಟಿಸ್ ನೀಡಿಲ್ಲ ಎಂದು ರಾಜಕೀಯ ವಿರೋಧಿಗಳು ನಡೆಸಿರುವ ಷಡ್ಯಂತ್ರವಿದು. ಹೀಗಾಗಿ ಊಹಾಪೋಹದ ವದಂತಿ ಹರಸಿಸುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ವರಿಷ್ಠರು ನನ್ನ ವಿರುದ್ಧ ಅನಗತ್ಯವಾಗಿ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದರು.

ನನಗೆ ನೋಟಿಸ್ ನೀಡಿದ್ದರೆ ಇಷ್ಟರಲ್ಲಾಗಲೇ ನನಗೆ ತಲುಪುತಿತ್ತು. ಭ್ರಷ್ಟಾಚಾರ, ಅಕ್ರಮ ಕೃತ್ಯಗಳಂಥ ಯಾವುದೇ ಆರೋಪ ಇಲ್ಲದ ನನ್ನ ಮೇಲೆ ಇಲ್ಲ. ಚುನಾವಣೆ ಹತ್ತಿರ ಇರುವಾಗ ನನ್ನಂಥ ಉತ್ತಮ ನಾಯಕನನ್ನು ಅನಗತ್ಯವಾಗಿ ಕಳೆದುಕೊಳ್ಳಲು ಬಿಜೆಪಿ ವರಿಷ್ಠರು ಬಯಸುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನೆರಡು ದಿನಗಳಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ನಡೆಯಲಿದೆ. ಕಾರ್ಯಕಾರಿಣಿಯಲ್ಲಿ ಬಹುದೊಡ್ಡ ನಿರ್ಣಯಗಳು ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಮುಂದಿನ ಚುನಾವಣೆಗಳ ದೃಷ್ಟಿಯಿಂದ ಬಹಳ ಬದಲಾವಣೆ ಮಾಡುವ ಸಾಧ್ಯತೆ ಇವೆ. ನಿಮ್ಮ ಪರವಾಗಿಯೂ ಒಳ್ಳೆಯ ನಿರ್ಣಯ ಆಗಲಿದೆ ಎಂದು ತಿಳಿಸಿದ್ದಾರೆ ಎಂದರು.

Advertisement

ವಿಜಯಪುರಕ್ಕೆ ಬಂದಿದ್ದ ವೇಳೆ ಅರುಣಸಿಂಗ್ ನನ್ನ ಜೊತೆಗೆ ಮಾತನಾಡಿದ್ದಾರೆ. ನಾನು ಮಂತ್ರಿ-ಮುಖ್ಯಮಂತ್ರಿ ಸ್ಥಾನ ಕೇಳಿಲ್ಲ. ರಾಜ್ಯದಲ್ಲಿ ನಾನು ಮಂತ್ರಿಗಿಂತ ಪವರ್ ಪುಲ್ ಆಗಿದ್ದೀನಿ. ಸಂಪುಟದ ಎಲ್ಲ ಮಂತ್ರಿಗಳು ನನ್ನ ಸ್ನೇಹಿತರೇ. ಹೀಗಾಗಿ ಎಲ್ಲರೂ ನನ್ನ ಬೇಡಿಕೆಗೆ ಸ್ಪಂದಿಸುತ್ತಾರೆ. ಹೀಗಾಗಿ ನಾನು ಯಾವುದನ್ನು ನಿರೀಕ್ಷೆ ಮಾಡುವುದಿಲ್ಲ ಎಂದರು.

ಮೋದಿ ಆಶೀರ್ವಾದವೇ ಇರಬೇಕು ಎನ್ನುತ್ತಿದ್ದಾರೆ. ಸತ್ಯ, ಒಳ್ಳೆಯತನಕ್ಕೆ ಆಶೀರ್ವಾದ ಇರುತ್ತದೆ. ವಾಜಪೇಯಿ ಕಾಲದಲ್ಲೂ ನನಗೆ ನೋಟಿಸ್ ನೀಡಿದ ಬೆನ್ನಲ್ಲೇ ಮಂತ್ರಿ ಮಾಡಿದ ಮಾದರಿಯಲ್ಲಿ ಈಗಲೂ ನೋಟಿಸ್ ನೀಡಿದ್ದರೆ ಊಹಾಪೋಹದ ಷಡ್ಯಂತ್ರ ಮಾಡಿದವರು ಹೈರಾಣಾಗುವಂತೆ ಸಂಕ್ರಮಣದ ಉತ್ತರಾಯಣ ಕಾಲದಲ್ಲಿ ನನಗೆ ಒಳ್ಳೆಯದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next