ಗುಣಾ: ಮಧ್ಯಪ್ರದೇಶದ ಸಚಿವ ಮಹೇಂದ್ರ ಸಿಂಗ್ ಸಿಸೋಡಿಯಾ ಅವರು ಕಾಂಗ್ರೆಸ್ ನಾಯಕರಿಗೆ ”ಆಡಳಿತಾರೂಢ ಬಿಜೆಪಿಗೆ ಸೇರಿ, ಇಲ್ಲವಾದಲ್ಲಿ ಬುಲ್ಡೋಜರ್ ಸಿದ್ಧವಾಗಿದೆ” ಎಂದು ಹೇಳುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ.
ಪಂಚಾಯತ್ ಸಚಿವರ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜ್ಯದಲ್ಲಿ ಭಾರೀ ವಿವಾದವನ್ನು ಎಬ್ಬಿಸಿದೆ.“ಬಿಜೆಪಿಗೆ ಸೇರಿ. 2023ರಲ್ಲೂ ಬಿಜೆಪಿ ಮಧ್ಯಪ್ರದೇಶದಲ್ಲಿ ಸರ್ಕಾರ ರಚಿಸಲಿದೆ. ಬುಲ್ಡೋಜರ್ ಸಿದ್ಧವಾಗಿದೆ, ”ಎಂದು ಸಿಸೋಡಿಯಾ ಅವರು ಇಂದು ನಡೆಯಲಿರುವ ರಾಘೋಘರ್ ನಗರ ನಾಗರಿಕ ಚುನಾವಣೆಯ ಪ್ರಚಾರದ ವೇಳೆ ಸಭೆಯನ್ನು ಉದ್ದೇಶಿಸಿ ಹೇಳಿದರು.
ಹೇಳಿಕೆ ವಿರುದ್ಧ ಕಾಂಗ್ರೆಸ್ ತೀವ್ರ ಆಕ್ರೋಶ ಹೊರ ಹಾಕಿದ್ದು, ಈ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಬಿಜೆಪಿ 50 ಸ್ಥಾನಗಳಲ್ಲಿಯೂ ಗೆಲ್ಲುವುದಿಲ್ಲ. ಇದಕ್ಕೆ ಈ ಹೇಳಿಕೆ ಸಾಕ್ಷಿಯಾಗಿದೆ ಎಂದು ಹೇಳಿದೆ.