Advertisement

ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಸೇರ್ಪಡೆ

03:47 PM Apr 23, 2018 | |

ನಿಡಗುಂದಿ: ರಾಜ್ಯದಲ್ಲಿ ಕುಮಾರಸ್ವಾಮಿ ಅವರ ಮೇಲೆ ಜನತೆ ಸಂಪೂರ್ಣ ವಿಶ್ವಾಸವಿಟ್ಟಿದ್ದು ಈ ಬಾರಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ ಸರಕಾರ  ರಚನೆ ನಿಶ್ಚಿತ ಎಂದು ಬಸವನಬಾಗೇವಾಡಿ ಜೆಡಿಎಸ್‌ ಅಭ್ಯರ್ಥಿ ಅಪ್ಪುಗೌಡ ಪಾಟೀಲ (ಮನಗೂಳಿ) ಹೇಳಿದರು. 

Advertisement

ಪಟ್ಟಣದಲ್ಲಿ ಪಿಕೆಪಿಎಸ್‌ ಸಂಘದ ಅಧ್ಯಕ್ಷ  ಸಂಗಣ್ಣ ಕೋತಿನ ಅವರ ನೇತೃತ್ವದಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕಾಂಗ್ರೆಸ್‌ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ನಂತರ ಅವರು  ಮಾತನಾಡಿದರು. ಬಸವನಬಾಗೇವಾಡಿ ಕ್ಷೇತ್ರದಲ್ಲಿ ಎದುರಾಳಿ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿಯ ಅನೇಕ ಮುಖಂಡರು, ಕಾರ್ಯಕರ್ತರು ಜೆಡಿಎಸ್‌  ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ.

ಕ್ಷೇತ್ರದ ತುಂಬೆಲ್ಲ ಎರಡು ರಾಷ್ಟ್ರೀಯ ಪಕ್ಷಗಳ ಬಗ್ಗೆ ಜನತೆ ತೀವ್ರ ಬೇಸರಗೊಂಡಿದ್ದು ಕ್ಷೇತ್ರದ ತುಂಬೆಲ್ಲಾ ಹುಡಿಕಿದರೂ  ಕೇವಲ ಶೇ. 20ರಷ್ಟು ಜನ ಮಾತ್ರ ರಾಷ್ಟ್ರೀಯ ಪಕ್ಷಗಳಿಗೆ ಬೆಂಬಲಿಸಿದ್ದು ಶೇ. 80ರಷ್ಟು ಜನ ಜೆಡಿಎಸ್‌ಗೆ ಬೆಂಬಲಿಸಿದ್ದಾರೆ ಎಂದರು.

ಪಿಕೆಪಿಎಸ್‌ ಅಧ್ಯಕ್ಷ  ಸಂಗಣ್ಣ ಕೋತಿನ ಮಾತನಾಡಿ, ಕಳೆದ 30 ವರ್ಷದಿಂದ ಕಾಂಗ್ರೆಸ್‌ ಪಕ್ಷದಲ್ಲಿ ಕಾರ್ಯ ನಿರ್ವಹಿಸಿದ್ದು ಮುಖಂಡರ, ಕಾರ್ಯಕರ್ತರ ಕಡೆಗಣನೆ ಹೆಚ್ಚಾಗಿದೆ.  ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸುವಲ್ಲಿ ಪಕ್ಷ ವಿಫಲವಾಗಿದ್ದು ಇದರಿಂದ ಜೆಡಿಎಸ್‌ ಆಯ್ಕೆ ಮಾಡಿಕೊಂಡಿದ್ದೇವೆ ಎಂದರು. 

ಕ್ಷೇತ್ರದಲ್ಲಿ ಜೆಡಿಎಸ್‌ ಅಲೆ ಹೆಚ್ಚಾಗಿದ್ದು ಅಪ್ಪುಗೌಡ ಪಾಟೀಲ ಮನಗೂಳಿ ಅವರ ಬಗ್ಗೆ ಜನರಲ್ಲಿ ಹೆಚ್ಚು ಒಲವು ವ್ಯಕ್ತವಾಗಿದ್ದು ಈ ಬಾರಿ ಅವರ ಗೆಲುವು ಸುಲಭವಾಗಲಿದೆ. ಮುಂದಿನ ದಿನಗಳಲ್ಲಿ ಎರಡು ರಾಷ್ಟ್ರೀಯ ಪಕ್ಷದಿಂದ ನೂರಾರು ಕಾರ್ಯಕರ್ತರು ಜೆಡಿಎಸ್‌ ಸೇರ್ಪಡೆಯಾಗಲಿದ್ದಾರೆ ಎಂದರು. 

Advertisement

ಶ್ರೀಶೈಲ ಪಟ್ಟಣಶೆಟ್ಟಿ, ಆನಂದ ಹೆಗ್ಗೊಂಡ,  ಪ್ರಕಾಶ ಚಳಮರದ, ಸಂಗಮೇಶ ಹಿಪ್ಪರಗಿ, ಶೇಖರ ಗುಡದಪ್ಪಗೋಳ, ಲಕ್ಷ್ಮಣ ಚಳಮರದ, ಸಿದ್ದು  ಗುಳಬಾಳ ಸೇರಿದಂತೆ ಅನೇಕರು ಜೆಡಿಎಸ್‌ಗೆ ಸೇರ್ಪಡೆಯಾದರು. ಬಾಬು ಬೆಲ್ಲದ, ಎಚ್‌.ಬಿ. ಶಿರೂರ, ಸಿದ್ದು ಬೊಮ್ಮರೆಡ್ಡಿ, ಹನುಮಂತ ಜಾಲಾಪುರ,  ಬಸವರಾಜ ಬಿರಾದರ, ಶೇಕಪ್ಪ ಹಾವನೂರ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next