Advertisement

ಪ್ಲಾಸ್ಟಿಕ್‌ ಮುಕ್ತ ಗ್ರಾಮಕ್ಕೆ ಕೈಜೋಡಿಸಿ

02:52 PM Apr 01, 2022 | Team Udayavani |

ಬೀದರ: ಕಸದ ಸಮರ್ಪಕ ವಿಲೇವಾರಿ, ದ್ರವ ತ್ಯಾಜ್ಯ ನಿರ್ವಹಣೆ ಹಾಗೂ ಪ್ಲಾಸ್ಟಿಕ್‌ ಮುಕ್ತ ಮಾಡುವಲ್ಲಿ ಗ್ರಾಮದ ಜನರು ಕೈ ಜೋಡಿಸಬೇಕು ಎಂದು ತಾಪಂ ಪ್ರಭಾರಿ ಇಒ ಕೀರ್ತನಾ ಶ್ರೀನಿವಾಸ ಹೇಳಿದರು.

Advertisement

ಇಲ್ಲಿನ ಚಿಟ್ಟಾ ಗ್ರಾಪಂಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಪ್ಲಾಸ್ಟಿಕ್‌ ಬಳಕೆಯಿಂದ ಮಾರಕ ಕಾಯಿಲೆಗಳು ಬರುತ್ತವೆ. ಪ್ಲಾಸ್ಟಿಕ್‌ ಬಳಸದೇ ಪರ್ಯಾಯ ದಾರಿ ಕಂಡುಕೊಳ್ಳಬೇಕು. ಇದರ ಬದಲಾಗಿ ಪೇಪರ್‌ ಹಾಗೂ ಕಾಟನ್‌ ಬಟ್ಟೆಗಳ ಕೈ ಚೀಲಗಳನ್ನು ಬಳಸಬೇಕು. ಘನ ಮತ್ತು ದ್ರವ ತ್ಯಾಜ್ಯ ಹಾಗೂ ಮುಖ್ಯವಾಗಿ ಪ್ಲಾಸ್ಟಿಕ್‌ ಮುಕ್ತ ಗ್ರಾಪಂ ಮಾಡುವಲ್ಲಿ ತೆಗೆದುಕೊಳ್ಳುವ ಕ್ರಮಗಳು ಬಹುಮುಖ್ಯವಾಗಿದ್ದು, ಎಲ್ಲರೂ ಜೊತೆಗೂಡಿ ಮಾಡಿದರೆ ಈ ಕಾರ್ಯ ಯಶಸ್ವಿಗೊಳ್ಳಲು ಸಾಧ್ಯ ಎಂದರು.

ಸರ್ಕಾರಿ ಜಾಗದಲ್ಲಿ ಎಸ್‌ಡಬ್ಲ್ಯೂಎಂ ನಿರ್ವಾಹಣಾ (ಘನ, ದ್ರವ, ತ್ಯಾಜ್ಯ) ಘಟಕವು ನಿರ್ಮಾಣ ಮಾಡುವ ಮೂಲಕ ಕೆಲಸದ ಕಾರ್ಯ ಪ್ರಗತಿಯು ಯಶಸ್ವಿಯಾಗಿ ಮಾಡಬೇಕು. ಪ್ಲಾಸ್ಟಿಕ್‌ ಮುಕ್ತ ಗೊಳಿಸಲು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಹಳ್ಳಿಯ ಜನರಿಗೆ ಪ್ಲಾಸ್ಟಿಕ್‌ ಬಳಸದಂತೆ ಮನವೊಲಿಸಬೇಕು ಎಂದು ಹೇಳಿದರು.

ಜಿಪಂ (ನರೇಗಾ) ಜಿಲ್ಲಾ ಐಇಸಿ ಸಂಯೋಜಕ ಮರೆಪ್ಪ ಸಿ. ಹರವಾಳ್ಕರ್‌, ತಾಲೂಕು ಐಇಸಿ ಸಂಯೋಜಕ ಸತ್ಯಜೀತ್‌ ವೈಜನಾಥ, ಪಿಡಿಒ ಪೂಜಾ ನೀಲಾ, ಅಧ್ಯಕ್ಷ ರಮೇಶ ಬಿರಾದಾರ, ಸದಸ್ಯರಾದ ಸತೀಶ, ಅಕºರ್‌, ದೀಪಿಕಾ ಮಚ್ಛೇಂದ್ರ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next