Advertisement
ದಾಂಡೇಲಿ ಬಳಿಯ ಬಿರಂಪಾಲಿ ಗ್ರಾಮ ಸಮೀಪದ ಅಕೋಡಾ ಮಜಿರೆಯಲ್ಲಿ ಈ ದುರಂತ ನಡೆದಿದೆ. ಹುಬ್ಬಳ್ಳಿಯ ಈಶ್ವರ ನಗರದ ನಜೀರ್ ಅಹ್ಮದ್ ಹೊನ್ನಂಬಲ್ (40), ಇವರ ಪುತ್ರಿಯರಾದ ಮೊಹಿನ್ ಅಹ್ಮದ್ (6), ಅಲ್ಪಿಯಾ ಅಹ್ಮದ್ (10) ಹಾಗೂ ಬೆಂಗಳೂರಿನಲ್ಲಿ ನೆಲೆಸಿದ್ದ ನಜೀರ್ ಅವರ ಸಹೋದರಿ ರೇಷ್ಮಾ ಉನ್ನೀಸಾ ತೌಫಿಕ್ ಅಹ್ಮದ್ (38), ಅವರ ಪುತ್ರ ಅಬೀದ್ ಅಹ್ಮದ್ (12), ಪುತ್ರಿ ಇಫ್ರಾ ಅಹ್ಮದ್ (15) ಮೃತಪಟ್ಟವರು. ಇವರ ಜತೆಗಿದ್ದ ಇನ್ನಿಬ್ಬರು ನದಿ ದಡದಲ್ಲಿಯೇ ನಿಂತಿದ್ದರಿಂದ ಸುರಕ್ಷಿತವಾಗಿದ್ದಾರೆ.
ನಜೀರ್ ಅವರ ಸಹೋದರಿ ರೇಷ್ಮಾ ಬೆಂಗಳೂರಿನಿಂದ ಸಂಬಂಧಿ ಕರ ಭೇಟಿಗಾಗಿ ಹುಬ್ಬಳ್ಳಿಗೆ ಆಗಮಿಸಿ ದ್ದರು. ಹುಬ್ಬಳ್ಳಿಯಿಂದ ದಾಂಡೇಲಿ ಮಾರ್ಗವಾಗಿ ನಜೀರ್ ಹಾಗೂ ರೇಷ್ಮಾ ಕುಟುಂಬಸ್ಥರು ಕಾರವಾರಕ್ಕೆ ತೆರಳು
ತ್ತಿದ್ದರು. ಮಾರ್ಗಮಧ್ಯೆ ಅಕೋಡಾ ಬಳಿ ಕಾಳಿ ನದಿ ನೋಡಲು ಇಳಿದಿದ್ದರು. ಇದು ಅತ್ಯಂತ ದುರ್ಗಮ ಪ್ರದೇಶ
ವಾಗಿದ್ದು, ಯಾರೂ ನದಿಗೆ ಇಳಿಯ ಬಾರದು ಎಂಬ ಎಚ್ಚರಿಕೆ ಇದ್ದರೂ ಮಕ್ಕಳ ಸಹಿತ ನದಿಗೆ ಇಳಿದಿದ್ದರು. ಮಗು ರಕ್ಷಿಸಲು ಹೋಗಿ ಅವಘಡ
ಕಾಳಿ ನದಿ ದಡದಲ್ಲಿ ನಜೀರ್ ಅವರ ಪುತ್ರಿ ಮೊಹಿನ್ ಅಹ್ಮದ್ ಆಟವಾಡುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿದಳು.ಜತೆಗಿದ್ದ ಅಲ್ಪಿಯಾ ಅಹ್ಮದ್, ಅಬೀದ್ ಅಹ್ಮದ್, ಇಫ್ರಾ ಅಹ್ಮದ್ ಆಕೆಯನ್ನು ರಕ್ಷಿಸಲು ಯತ್ನಿಸಿದರು. ನೋಡ ನೋಡುತ್ತಿದ್ದಂತೆ ನಾಲ್ವರೂ ನೀರಿನ ಸೆಳೆತಕ್ಕೆ ಸಿಲುಕಿದ್ದು, ಇದನ್ನು ಗಮನಿಸಿದ ನಜೀರ್ ಮಕ್ಕಳ ರಕ್ಷಣೆಗೆ ಧಾವಿಸಿದ್ದರು. ಆಗ ಅವರು ಕೂಡ ನೀರಿನ ಸೆಳೆತಕ್ಕೆ ಸಿಲುಕಿದರು. ದಡದಲ್ಲಿದ್ದ ರೇಷ್ಮಾ ಅಹ್ಮದ್ ಕೂಡ ರಕ್ಷಣೆಗೆ ಇಳಿದಾಗ ಅವರೂ ನೀರುಪಾಲಾದರು.
Related Articles
Advertisement