Advertisement

4ನೇ ಅಟ್ಲಾಂಟಾ ಪ್ರಶಸ್ತಿ ಗೆದ್ದ ಇಸ್ನರ್‌

07:10 AM Aug 01, 2017 | Team Udayavani |

ವಾಷಿಂಗ್ಟನ್‌: ಅಲ್‌ ಅಮೆರಿಕನ್‌ “ಅಟ್ಲಾಂಟಾ ಎಟಿಪಿ ಟೆನಿಸ್‌’ ಪಂದ್ಯಾವಳಿಯಲ್ಲಿ ಜಾನ್‌ ಇಸ್ನರ್‌ 4ನೇ ಬಾರಿಗೆ ಚಾಂಪಿಯನ್‌ ಆಗಿ ಮೂಡಿಬಂದಿದ್ದಾರೆ. ಫೈನಲ್‌ನಲ್ಲಿ ಅವರು ತೀವ್ರ ಪೈಪೋಟಿ ನೀಡಿದ ರಿಯಾನ್‌ ಹ್ಯಾರಿಸನ್‌ ಅವರನ್ನು 7-6 (8-6), 7-6 (9-7) ಅಂತರ ದಿಂದ ಮಣಿಸಿದರು.

Advertisement

ಅಮೆರಿಕದ ದ್ವಿತೀಯ ಶ್ರೇಯಾಂಕದ ಆಟಗಾರನಾಗಿರುವ ಜಾನ್‌ ಇಸ್ನರ್‌ ಇಲ್ಲಿ ಆಡಿದ 8 ಪಂದ್ಯಾವಳಿಗಳಲ್ಲಿ 7 ಸಲ ಫೈನಲ್‌ಗೆ ಲಗ್ಗೆ ಇರಿಸಿದ್ದರು. ಇದು ಅಟ್ಲಾಂಟಾದಲ್ಲಿ ಇಸ್ನರ್‌ ಗೆದ್ದ 4ನೇ ಪ್ರಶಸ್ತಿ. ಇದಕ್ಕೂ ಮುನ್ನ 2013ರಿಂದ ಮೊದಲ್ಗೊಂಡು ಹ್ಯಾಟ್ರಿಕ್‌ ಸಾಧನೆ ಮಾಡಿದ್ದರು. ಇದು 2 ವಾರಗಳ ಅಂತರದಲ್ಲಿ ಜಾನ್‌ ಇಸ್ನರ್‌ ಗೆದ್ದ 2ನೇ ಟೆನಿಸ್‌ ಪ್ರಶಸ್ತಿ. ಕಳೆದ ವಾರ ಅವರು ನ್ಯೂಪೋರ್ಟ್‌ ನಲ್ಲೂ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದರು. 

4ನೇ ಶ್ರೇಯಾಂಕದ ರಿಯಾನ್‌ ಹ್ಯಾರಿಸನ್‌ಗೆ ಈ ಸೋಲಿನಿಂದ ಟೆನಿಸ್‌ ಬಾಳ್ವೆಯ 2ನೇ ಪ್ರಶಸ್ತಿ ಸ್ವಲ್ಪದರಲ್ಲೇ ಕೈತಪ್ಪಿತು. ಕಳೆದ ಫೆಬ್ರವರಿಯಲ್ಲಿ ಹ್ಯಾರಿಸನ್‌ “ಮೆಂಫಿಸ್‌ ಟೆನಿಸ್‌’ ಪ್ರಶಸ್ತಿ ಪಡೆದಿದ್ದರು.

ಈ ಜಯದೊಂದಿಗೆ ಜಾನ್‌ ಇಸ್ನರ್‌ ಅಮೆರಿಕದ ಅಗ್ರ ರ್‍ಯಾಂಕಿಂಗ್‌ ಆಟಗಾರನೆನಿಸಿಕೊಂಡರು. ಜಾಕ್‌ ಸೋಕ್‌ ಅವರನ್ನು ಕೆಳಕ್ಕೆ ತಳ್ಳಿದರು.

Advertisement

Udayavani is now on Telegram. Click here to join our channel and stay updated with the latest news.

Next