Advertisement

ವಿಸ್ಮಯಕ್ಕೆ ಸಾಕ್ಷಿಯಾದ ಜೋಗ ಜಲಪಾತ ; ಧುಮುಕುವ ಬದಲು ಆಕಾಶದತ್ತ ಚಿಮ್ಮುತ್ತಿದೆ ಜಲಪಾತದ ನೀರು

08:17 PM Jun 13, 2022 | Team Udayavani |

ಸಾಗರ : ಜೋಗದ ಸಿರಿ ನಾಲ್ಕು ಕವಲುಗಳಾಗಿ ಧರೆಯ ಮೇಲಿನಿಂದ ಕೆಳಗೆ ಧುಮುಕುವುದನ್ನು ನೋಡಿದವರು ಕಳೆದೆರಡು ದಿನಗಳಿಂದ ವಿಚಿತ್ರ ವಿಸ್ಮಯಕ್ಕೆ ಸಾಕ್ಷಿಯಾದರು. ಜಲಪಾತದ ನಾಲ್ಕೂ ಕವಲುಗಳು ಗಾಳಿಯ ರಭಸಕ್ಕೆ ಸಿಲುಕಿ ಕೆಳಗೆ ಭೋರ್ಗರೆಯುತ್ತ ಧುಮುಕುವ ಬದಲು ಗಾಳಿಯಲ್ಲಿ ನರ್ತಿಸುತ್ತ ಮೇಲ್ಮುಖ ಸಂಚಾರ ನಡೆಸಿದವು.

Advertisement

ಬಿರುಗಾಳಿಯ ರಭಸಕ್ಕೆ ಸಿಲುಕು ಗುರುತ್ವಾಕರ್ಷಣ ಬಲವನ್ನೂ ಮೀರಿ ಆಕಾಶದತ್ತ ನೀರು ಚಿಮ್ಮುವುದು ತೀರಾ ಅಪರೂಪದ ಕೌತುಕ. ಈ ಹಿಂದೆ ಕೆಲವು ಬಾರಿ ಇಂತಹ ಘಟನೆ ನಡೆದಿದೆ ಎಂದು ಸ್ಥಳೀಯರಾದ ಇರ್ಫಾನ್ ಜೋಗ್ ತಿಳಿಸುತ್ತಾರೆ. ಆದರೆ ಹಿಂದೆಲ್ಲ ರಾಜ, ರಾಣಿ ಕವಲುಗಳಲ್ಲಿ ಮಾತ್ರ ಇಂತಹುದನ್ನು ನೋಡುತ್ತಿದ್ದೆವು. ಆದರೆ ಈ ಬಾರಿ ಜಲಪಾತದ ರಾಜಾ, ರಾಣಿಯ ಜೊತೆ ರೋರರ್, ರಾಕೆಟ್ ಕೂಡ ಹಾರಾಟ ನಡೆಸುತ್ತಿದ್ದುದು ಮನಮೋಹಕವಾಗಿತ್ತು ಎಂದರು.

ಜಲಪಾತದಲ್ಲಿ ನೀರಿನ ಹರಿವು ತೀರಾ ಕಡಿಮೆಯಿದ್ದುದರಿಂದ ಪ್ರವಾಸಿಗರ ಸಂಖ್ಯೆ ಅತ್ಯಂತ ಕಡಿಮೆ ಸಂಖ್ಯೆಯಲ್ಲಿದ್ದುದರಿಂದ ಬಹುತೇಕರು ಅಪರೂಪದ ದೃಶ್ಯದಿಂದ ವಂಚಿತರಾಗಬೇಕಾಯಿತು. ಅಲ್ಲಿದ್ದವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದುದರಿಂದ ಕಣ್ತುಂಬಿಕೊಳ್ಳುವಂತಾಯಿತು. ಅತ್ಯಂತ ಕಡಿಮೆ ನೀರಿನ ಪ್ರವಾಹ ಇದ್ದುದರಿಂದ ಗಾಳಿಯ ಒತ್ತಡಕ್ಕೆ ಸಿಲುಕಿದ ನೀರು ನೀರಿನ ಕಣಗಳಾಗಿ ಒಡೆದು ಆಕಾಶದತ್ತ ನೆಗೆದಂತೆ ಕಾಣಿಸುವಂತಾಯಿತು ಎಂದು ವಿಶ್ಲೇಷಿಸಲಾಗಿದೆ.

ಇದನ್ನೂ ಓದಿ : ಬಾದಾಮಿ, ಐಹೊಳೆ ಅಪಾಯದಂಚಿನಲ್ಲಿ, ಹಂಪಿ ಮಾಸ್ಟರ್‌ಪ್ಲಾನ್ ಘೋಷಣೆ ವಿಳಂಬ : ಸಚಿವ ಆನಂದ್ ಸಿಂಗ್

Advertisement

Udayavani is now on Telegram. Click here to join our channel and stay updated with the latest news.

Next