ಮುಂಬಯಿ: ಸತತ ಗಾಯದಿಂದಾಗಿ ಸುದೀರ್ಘ ವಿಶ್ರಾಂತಿಯಲ್ಲಿದ್ದ ಇಂಗ್ಲೆಂಡ್‌ನ ಪೇಸ್ ಬೌಲರ್ ಜೋಫ್ರ ಆರ್ಚರ್ ತಮ್ಮ ಪುನರಾಗ ಮನವನ್ನು ಸಾರಿದ್ದಾರೆ.
“2022 ಥ್ಯಾಂಕ್ ಯೂ. 2023 ಐಯಾಮ್ ರೆಡಿ’ ಎನ್ನುವ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಸಿದ್ಧ ಎಂಬುದಾಗಿ ಘೋಷಿಸಿದ್ದಾರೆ.
ಇದರೊಂದಿಗೆ ಮುಂಬೈ ಇಂಡಿಯನ್ಸ್ ತಂಡ ವರ್ಷಾರಂಭದಲ್ಲೇ ಹೆಚ್ಚಿನ ಖುಷಿ ಅನುಭವಿಸಿದೆ. ಕಳೆದ ವರ್ಷ 8 ಕೋಟಿ ರೂ.ಗೆ ಜೋಫ್ರ ಆರ್ಚರ್ ಅವರನ್ನು ಖರೀದಿಸಿದ್ದ ಮುಂಬೈ ಫ್ರಾಂಚೈಸಿಗೆ ಭಾರೀ ನಷ್ಟವಾಗಿತ್ತು.
ಆರ್ಚರ್ ಗಾಯಾಳಾಗಿ ಸರಣಿಯಿಂದಲೇ ಹೊರಗುಳಿಯಬೇಕಾಯಿತು. ಈ ಬಾರಿ ಜಸ್‌ಪ್ರೀತ್ ಬುಮ್ರಾ ಜತೆಗೂಡಿ ಆರ್ಚರ್ ಬೌಲಿಂಗ್ ಆರಂಭಿಸಬಹುದೆಂಬ ಗಾಢ ವಿಶ್ವಾಸ ಮುಂಬೈ ಇಂಡಿಯನ್ಸ್ ತಂಡದ್ದು.
Related Articles
ಆರಂಭಿಕ ಸೌತ್ ಆಫ್ರಿಕಾ ಟಿ20 ಪಂದ್ಯಾವಳಿಯಲ್ಲೂ ಜೋಫ್ರ ಆರ್ಚರ್ ಮುಂಬೈ ಇಂಡಿಯನ್ಸ್ ಒಡೆತನದ ಕೇಪ್‌ಟೌನ್ ಫ್ರಾಂಚೈಸಿ ಪರವಾಗಿ ಆಡಲಿದ್ದಾರೆ.
2019ರ ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಪರ ಅತ್ಯಧಿಕ ವಿಕೆಟ್ ಉರುಳಿಸಿದ್ದ ಜೋಫ್ರ ಆರ್ಚರ್, 2021ರ ಮಾರ್ಚ್‌ನಲ್ಲಿ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಡಿದ್ದರು.
ಬೌಲಿಂಗ್ ಅಭ್ಯಾಸ
ಕಳೆದ ನವೆಂಬರ್‌ನಲ್ಲಿ ಆರ್ಚರ್ ಇಂಗ್ಲೆಂಡ್ ಟೆಸ್ಟ್ ತಂಡದೊಂದಿಗೆ ಬೌಲಿಂಗ್ ಅಭ್ಯಾಸ ನಡೆಸುತ್ತಿದ್ದುದು ಕಂಡುಬಂತು. ಅಲ್ಲಿ ಸುಮಾರು 9 ಓವರ್ ಎಸೆದಿದ್ದರು. ಒಂದು ಶಾರ್ಪ್ ಬೌನ್ಸರ್ ಜಾಕ್ ಕ್ರಾಲಿ ಅವರ ತಲೆಗೂ ಬಡಿದಿತ್ತು.