Advertisement

ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ಗೆ ಕ್ಯಾನ್ಸರ್‌ ಇತ್ತಾ?

07:57 PM Jul 21, 2022 | Team Udayavani |

ನ್ಯೂಯಾರ್ಕ್‌: ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಅವರು “ನನಗೆ ಕ್ಯಾನ್ಸರ್‌ ಇದೆ’ ಎಂದು ಹೇಳಿದ್ದಾರೆ ಎಂಬ ಅಂಶ ಜಗತ್ತಿನಾದ್ಯಂತ ಆತಂಕ ಸೃಷ್ಟಿಯಾಗಲು ಕಾರಣವಾಗಿದೆ.

Advertisement

ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿದ ಶ್ವೇತಭವನದ ವಕ್ತಾರರರು “ಕಳೆದ ವರ್ಷ ಜನವರಿಯಲ್ಲಿ ಅಧಿಕಾರ ವಹಿಸುವುದಕ್ಕೆ ಮುನ್ನ ಅಧ್ಯಕ್ಷ ಬೈಡೆನ್‌ ಚರ್ಮದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದುಕೊಂಡಿದ್ದರು. ಆ ಅಂಶವನ್ನು ಅವರು ಉಲ್ಲೇಖೀಸಿದ್ದರು’ ಎಂದು ಸ್ಪಷ್ಟನೆ ನೀಡಿದ್ದಾರೆ.

ಮೆಸ್ಸಾಚ್ಯುಸೆಟ್ಸ್‌ನ ಕಲ್ಲಿದ್ದಲು ಗಣಿಗೆ ಭೇಟಿ ನೀಡಿದ್ದಾಗ ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಹೊರಡಿಸಲಾದ ಆದೇಶದ ಬಗ್ಗೆ ಲೋಕಾಭಿರಾಮವಾಗಿ ಮಾತನಾಡುತ್ತಿದ್ದ ವೇಳೆ, “ನಾನು ಕ್ಯಾನ್ಸರ್‌ ಜತೆಗೇ ಬೆಳೆದು ಬಂದೆ. ಡೆಲಾವರ್‌ನಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಕ್ಯಾನ್ಸರ್‌ ಇದೆ’ ಎಂದು ಹೇಳಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next