ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಏರ್‌ಫೋರ್ಸ್ ಒನ್ ವಿಮಾನ ಏರುವ ಸಂದರ್ಭದಲ್ಲಿ ಎಡವಿ ಬೀಳುವಂತೆ ಆದ ಘಟನೆ ನಡೆದಿದೆ.
Advertisement
ಪೋಲಂಡ್‌ಗೆ ತೆರಳುವ ನಿಟ್ಟಿನಲ್ಲಿ ಬೈಡೆನ್ ವಿಮಾನವನ್ನೇರುತ್ತಿದ್ದರು. ಅದರ ವಿಡಿಯೋ ಈಗ ವೈರಲ್ ಆಗಿದೆ.
ಎರಡು ವಾರಗಳ ಅವಧಿಯಲ್ಲಿ ಅಮೆರಿಕ ಅಧ್ಯಕ್ಷರಿಗೆ ಲಾಸ್‌ಏಂಜಲೀಸ್‌ನಲ್ಲಿ ವಿಮಾನ ನಿಲ್ದಾಣದಲ್ಲಿ ಈ ರೀತಿಯ ಅನುಭವ ಉಂಟಾಗಿತ್ತು.
2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡೆನ್ ಸ್ಪರ್ಧಿಸಲಿದ್ದಾರೆ ಎಂಬ ವದಂತಿಗಳ ನಡುವೆಯೇ ಈ ಬೆಳವಣಿಗೆಯಾಗಿದೆ. ಇತ್ತೀಚೆಗಷ್ಟೇ ಅವರ ಸಂಪೂರ್ಣ ವೈದ್ಯಕೀಯ ಪರೀಕ್ಷೆ ನಡೆದು, ಆಡಳಿತ ನಡೆಸಲು ಆರೋಗ್ಯಪೂರ್ಣರಾಗಿದ್ದಾರೆ ಎಂದು ದೃಢೀಕರಿಸಲಾಗಿತ್ತು.
Related Articles
Advertisement